ಕರ್ನಾಟಕ

karnataka

ETV Bharat / state

ಸ್ನೇಹಿತ ಹಾಗು ಆತನ ಪ್ರೇಯಸಿಗೆ ಕದ್ದ ಚಿನ್ನಾಭರಣ ಕೊಟ್ಟ ಆರೋಪಿ ಸೇರಿ ಇಬ್ಬರ ಬಂಧನ - Bengaluru House Theft Case - BENGALURU HOUSE THEFT CASE

ಕದ್ದ ಚಿನ್ನಾಭರಣವನ್ನು ಸ್ನೇಹಿತ ಹಾಗೂ ಆತನ ಪ್ರೇಯಸಿಗೆ ನೀಡಿದ್ದ ಆರೋಪಿ ಸೇರಿ ಇಬ್ಬರನ್ನು ಬೆಂಗಳೂರಿನ ಕೆ.ಎಸ್.ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕಳ್ಳರ ಬಂಧನ
ಮನೆಗಳ್ಳತನ ಪ್ರಕರಣದ ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Aug 16, 2024, 3:13 PM IST

ಬೆಂಗಳೂರು: ಮನೆಗಳ್ಳತನ ಮಾಡಿರುವ ಚಿನ್ನಾಭರಣವನ್ನು ಸ್ನೇಹಿತ ಹಾಗೂ ಆತನ ಪ್ರೇಯಸಿಗೆ ನೀಡಿದ್ದ ಆರೋಪಿ ಸಹಿತ ಇಬ್ಬರನ್ನು ನಗರದ ಕೆ.ಎಸ್.ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ (36) ಹಾಗೂ ಆತನ ಸ್ನೇಹಿತ ರಘು (26) ಬಂಧಿತರು.

ಆರೋಪಿಗಳು ಜು.8ರಂದು ಕೆ.ಎಸ್.ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಪೈಜ್ ಮಸೀದಿ ಸಮೀಪದ ಮನೆಯೊಂದರ ಬೀಗ ಮುರಿದು ಕಳ್ಳತನ ಮಾಡಿದ್ದರು. ಮನೆ ಮಾಲೀಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮೊದಲು ಆರೋಪಿ ಕಾರ್ತಿಕ್‌ನನ್ನು ಬಂಧಿಸಿದ್ದರು.

ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಬೆಂಗಳೂರು ನಗರ ಮತ್ತು ಹೈದರಾಬಾದ್​ನ ವಿವಿಧ ಜ್ಯೂವೆಲರಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದು ಹಾಗೂ ಇನ್ನೂ ಕೆಲವನ್ನು ಸ್ನೇಹಿತ ರಘು ಹಾಗೂ ಆತನ ಪ್ರೇಯಸಿಗೆ ನೀಡಿರುವುದನ್ನು ವಿಚಾರಣೆಯಲ್ಲಿ ಕಾರ್ತಿಕ್ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಆರೋಪಿ ರಘು, ಆತನ ಪ್ರೇಯಸಿಯ ಬಳಿಯಿದ್ದ ಚಿನ್ನ, ಅಡವಿಟ್ಟಿದ್ದ ಆಭರಣ ಸೇರಿ ಒಟ್ಟು 470 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ.ಬೆಳ್ಳಿಯ ಗಟ್ಟಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಳ್ಳರ ಪಾಲಾಗಿದ್ದ ಚಿನ್ನಾಭರಣ ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಗೆ ವಾಪಸ್! - Stolen Gold Jewelery Returned Home

ABOUT THE AUTHOR

...view details