ಬಳ್ಳಾರಿ: ಹಣದ ಅಮಲು ನೆತ್ತಿಗೆರಿದರೆ ಏನೆಲ್ಲಾ ಮಾಡಿಸುತ್ತದೆ ಎಂಬುದಕ್ಕೆ ಬಳ್ಳಾರಿಯ ಪ್ರಕರಣವೊಂದು ಸಾಕ್ಷಿಯಾಗಿದೆ. ಹಣದ ಮೋಹಕ್ಕೆ ಬಿದ್ದು ಖೋಟಾ (ನಕಲಿ) ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರನ್ನು ಗಾಂಧಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖೋಟಾ ನೋಟುಗಳನ್ನು ತಯಾರು ಮಾಡಲು ಬಳಸುತ್ತಿದ್ದ ಕಲರ್ ಝರಾಕ್ಸ್ ಪ್ರಿಂಟರ್ ಹಾಗೂ 100 ಮುಖಬೆಲೆಯ 80 ಖೋಟಾ ನೋಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಬಳ್ಳಾರಿ ನಗರದ ಬಿಸಿಲಹಳ್ಳಿಯ ಹರೀಶ್ ಮತ್ತು ಅಶೋಕ್ ಎಂದು ಗುರುತಿಸಲಾಗಿದೆ. ಎ-1 ಆರೋಪಿ ಅಶೋಕ್ ಕುಮಾರ್ ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಬ್ಯಾಂಕಿನಲ್ಲಿ ನೋಟ್ ಚಲಾವಣೆ ವಹಿವಾಟು ಅರಿತಿದ್ದ ಅಶೋಕ ಕುಮಾರ್, ಹರೀಶ್ ಜೊತೆಗೆ ಸೇರಿ ನೋಟ್ ಪ್ರಿಂಟ್ ಮಾಡಲು ಮುಂದಾಗಿದ್ದನು.