ಕರ್ನಾಟಕ

karnataka

ETV Bharat / state

ರಾಣೆಬೆನ್ನೂರು ಬಳಿ ಅಪಘಾತ: ​ಲಾರಿ ಚಾಲಕನ ಎದೆಗೆ ಹೊಕ್ಕ ಕಬ್ಬಿಣದ ಪೈಪ್ - Iron Pipe Enters Chest

ಗೂಡ್ಸ್​ ವಾಹನ ಅಪಘಾತದಲ್ಲಿ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್​ ಚಾಲಕನ ಎದೆಗೆ ಹೊಕ್ಕಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಎದೆಗೆ ಹೊಕ್ಕ ಕಬ್ಬಿಣದ ಪೈಪ್​ನನ್ನು ಅರ್ಧದಿಂದ ಕಟ್​ ಮಾಡಿದ ಅಗ್ನಿಶಾಮಕ ದಳ.
ಅಪಘಾತದಲ್ಲಿ ಎದೆಗೆ ಹೊಕ್ಕ ಕಬ್ಬಿಣದ ಪೈಪ್​ನನ್ನು ಅರ್ಧದಿಂದ ಕಟ್​ ಮಾಡಿದ ಅಗ್ನಿಶಾಮಕ ದಳ. (ETV Bharat)

By ETV Bharat Karnataka Team

Published : Oct 2, 2024, 10:39 AM IST

ಹಾವೇರಿ:ಭೀಕರ ಅಪಘಾತವೊಂದರಲ್ಲಿ ಲಾರಿ ಚಾಲಕನ ಎದೆಗೆ ಕಬ್ಬಿಣದ ಪೈಪ್​​ ಹೊಕ್ಕ ಘಟನೆ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಗೂಡ್ಸ್​ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್ ರೋಡ್​ಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್​ ಚಾಲಕನ ಎದೆಗೆ ಹೊಕ್ಕಿದೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಅಗ್ನಿಶಾಮಕದಳದ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿರುವ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸಪಟ್ಟರು. ಸ್ವಲ್ಪ ಪ್ರಮಾಣದಲ್ಲಿ ಕಬ್ಬಿಣದ ಪೈಪ್​ನ್ನು ತುಂಡರಿಸಿ, ಎದೆಯಲ್ಲಿ ಸಿಕ್ಕಿರುವ ಕಬ್ಬಿಣದ ಪೈಪ್​ನೊಂದಿಗೆ ಲಾರಿ ಚಾಲಕನನ್ನು ಕಳುಹಿಸಲಾಯಿತು.

ಅಪಘಾತದಿಂದ ಲಾರಿ ಚಾಲಕನ ಎದೆಗೆ ಹೊಕ್ಕ ಕಬ್ಬಿಣದ ಪೈಪ್ (ETV Bharat)

ಎದೆಯಲ್ಲಿ ಸಿಕ್ಕಿ ಹಾಕಿಕೊಂಡ ಕಬ್ಬಿಣದ ಪೈಪ್ ಕಂಡು ಎಲ್ಲರೂ ದಂಗಾಗಿದ್ದರು. 27 ವರ್ಷದ ಚಾಲಕ ಶಿವಾನಂದ ಬಡಗಿ ಎದೆಗೆ ಕಬ್ಬಿಣದ ಪೈಪ್ ಹೊಕ್ಕಿದ್ದರೂ ಎದೆಗುಂದದೆ ಆಸ್ಪತ್ರೆಗೆ ರವಾನಿಸಲು ಸಹಕರಿಸಿದ್ದಾನೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ದಕ್ಷಿಣ ಕನ್ನಡ: ಹಿಂದಕ್ಕೆ ಚಲಾಯಿಸುತ್ತಿದ್ದ ಕಾರಿನಡಿಗೆ ಬಿದ್ದು ಬಾಲಕ ಸಾವು - BOY DIED

ABOUT THE AUTHOR

...view details