ಮಂಗಳೂರು:ನಗರದ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿದ್ದ ಹೊಂಡ, ಗುಂಡಿಗಳನ್ನು ಟ್ರಾಫಿಕ್ ಎಸ್ಐ ಸ್ವತಃ ತಾವೇ ಸಲಿಕೆ ಹಿಡಿದು ದುರಸ್ಥಿಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರಿನ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರ್ ಸ್ವಾಮಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವತಃ ಸಲಿಕೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ- ವಿಡಿಯೋ ವೈರಲ್ - Traffic SI Fixes Potholes - TRAFFIC SI FIXES POTHOLES
ಟ್ರಾಫಿಕ್ ಎಸ್ಐ ಸ್ವತಃ ತಾವೇ ಸಲಿಕೆ ಹಿಡಿದು ರಸ್ತೆ ಹೊಂಡ ಮುಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಸ್ವತಃ ಗಾರೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ (ETV Bharat)
Published : Jul 2, 2024, 2:29 PM IST
ಮಳೆಗೆ ಕೆಪಿಟಿ ಸರ್ಕಲ್ ಬಳಿ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈಶ್ವರ್ ಸ್ವಾಮಿ ಅವರು ಕೆಲವರೊಂದಿಗೆ ಸೇರಿಕೊಂಡು ಹಣ ಒಟ್ಟುಗೂಡಿಸಿ ಸಿಮೆಂಟ್, ಜಲ್ಲಿ ತಂದು ರಸ್ತೆಹೊಂಡಗಳನ್ನು ಮುಚ್ಚಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ, 8ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ - Fire Accident