ಕರ್ನಾಟಕ

karnataka

ETV Bharat / state

ಮೊದಲ ಹಂತದ ಕಣದಲ್ಲಿ ಒಟ್ಟು 247 ಅಭ್ಯರ್ಥಿಗಳು; ನಾಳೆಯಿಂದ ಪ್ರಚಾರ ಭರಾಟೆ ಮತ್ತಷ್ಟು ಜೋರು - Lok Sabha Election

ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 247 ಅಭ್ಯರ್ಥಿಗಳಿದ್ದಾರೆ.

lok-sabha-elections
ಲೋಕಸಭಾ ಚುನಾವಣೆ

By ETV Bharat Karnataka Team

Published : Apr 8, 2024, 11:02 PM IST

ಬೆಂಗಳೂರು: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ವಾಪಸ್ ಪಡೆಯುವ ಅವಧಿ ಇಂದು ಮುಕ್ತಾಯಗೊಂಡಿದೆ. ಒಟ್ಟು 247 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು, 226 ಪುರುಷರು, 21 ಮಹಿಳೆಯರು ಅಖಾಡದಲ್ಲಿ ಉಳಿದಿದ್ದಾರೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಕಣ ಸಿದ್ಧವಾಗಿದ್ದು, ಭರ್ಜರಿ ಪ್ರಚಾರದ ಭರಾಟೆ ಮತ್ತಷ್ಟು ಜೋರಾಗಲಿದೆ. ಅಂತಿಮವಾಗಿ 14 ಲೋಕಸಭಾ ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ.

ಇಂದು ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ವಾಪಸ್‌ ಪಡೆಯುವ ಅವಧಿ ಮುಕ್ತಾಯಗೊಂಡಿತು. ಒಟ್ಟು 53 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್‌ ಪಡೆದುಕೊಂಡಿದ್ದಾರೆ. ಇದೇ ತಿಂಗಳ 26ರಂದು ನಡೆಯುವ ಮೊದಲ ಹಂತಕ್ಕೆ ಒಟ್ಟು 358 ಅಭ್ಯರ್ಥಿಗಳಿಂದ 492 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 300 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, 419 ನಾಮಪತ್ರಗಳು ಪುರಸ್ಕೃತಗೊಂಡಿದ್ದವು. 74 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಒಟ್ಟು 53 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದು, 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಹೆಚ್ಚು ಅಭ್ಯರ್ಥಿಗಳು ಚಿಕ್ಕಬಳ್ಳಾಪುರ ಕ್ಷೇತ್ರದಿಂದ:ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಅತ್ಯಧಿಕ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಡಿಮೆ ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಿದ್ದಾರೆ. ಈ ಕ್ಷೇತ್ರದಲ್ಲಿ ಕೇವಲ 9 ಅಭ್ಯರ್ಥಿಗಳ ನಡುವೆ ಮಾತ್ರ ಸ್ಪರ್ಧೆ ಏರ್ಪಟ್ಟಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ. ಅದೇ ರೀತಿ ಹಾಸನ ಕ್ಷೇತ್ರದಲ್ಲಿಯೂ ಕಣದಲ್ಲಿರುವ ಒಟ್ಟು 15 ಅಭ್ಯರ್ಥಿಗಳ ಪೈಕಿ ಎಲ್ಲರೂ ಪುರುಷ ಅಭ್ಯರ್ಥಿಗಳಾಗಿದ್ದಾರೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, 8 ಪುರುಷರು ಮತ್ತು ಒಬ್ಬರು ಮಹಿಳೆಯಾಗಿದ್ದಾರೆ. ಚಿತ್ರದುರ್ಗ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳಿದ್ದು, 18 ಪುರುಷರು ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಯಾಗಿದ್ದಾರೆ. ತುಮಕೂರು ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ ನಡುವೆ ಸ್ಪರ್ಧೆ ಇದ್ದು, 17 ಪುರುಷರು ಮತ್ತು ಒಬ್ಬರು ಮಹಿಳೆ ಇದ್ದಾರೆ. ಮಂಡ್ಯ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ಪೈಪೋಟಿ ಉಂಟಾಗಿದ್ದು, 13 ಪುರುಷರು ಮತ್ತು ಒಬ್ಬರು ಮಹಿಳೆ ಇದ್ದಾರೆ. ಮೈಸೂರು ಕ್ಷೇತ್ರದಲ್ಲಿ 18 ಮಂದಿ ಕಣದಲ್ಲಿದ್ದು, 17 ಪುರುಷರು ಮತ್ತು ಒಬ್ಬರು ಮಹಿಳೆ ನಡುವೆ ಹಣಾಹಣಿ ನಡೆಯಲಿದೆ.

ಚಾಮರಾಜನಗರ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಖಾಡದಲ್ಲಿದ್ದು, 13 ಪುರುಷರು ಮತ್ತು ಒಬ್ಬರು ಮಹಿಳೆಯರಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದ್ದು, 14 ಪುರುಷರು ಮತ್ತು ಒಬ್ಬರು ಮಹಿಳೆಯರಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳಿದ್ದು, 15 ಪುರುಷರು ಮತ್ತು 6 ಮಹಿಳೆಯರು ಸ್ಪರ್ಧಿಸಿದ್ದಾರೆ.

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 24 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಿದ್ದು, 21 ಪುರುಷರು, 3 ಮಹಿಳೆಯರ ನಡುವೆ ಸ್ಪರ್ಧೆ ನಡೆಯಲಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 22 ಮಂದಿ ಸ್ಪರ್ಧಿಸಿದ್ದು, 19 ಪುರುಷರು, 3 ಮಹಿಳೆಯರು ಅಖಾಡದಲ್ಲಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 29 ಅಭ್ಯರ್ಥಿಗಳು ಕಣದಲ್ಲಿದ್ದು, 28 ಪುರುಷರು ಮತ್ತು ಒಬ್ಬರು ಮಹಿಳೆ ಇದ್ದಾರೆ. ಕೋಲಾರ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ.

ಇದನ್ನೂ ಓದಿ:14 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ಹೇಗಿದೆ ಗೊತ್ತೇ? - Qualifications Of Main Candidates

ABOUT THE AUTHOR

...view details