ಮಂಡ್ಯ: ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವ ವಿಜೃಂಭಣೆಯಿಂದ ನಡೆಯಿತು. ಆಷಾಢ ಮಾಸದಲ್ಲಿ ಪ್ರತಿ ವರ್ಷ ಈ ಗ್ರಾಮದಲ್ಲಿ ತೋಪಿನ ತಿಮ್ಮಪ್ಪನ ಹರಿಸೇವೆ ಉತ್ಸವನ್ನು ಜನರು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಉತ್ಸವದ ಪ್ರಯುಕ್ತ ಬಂದ ಭಕ್ತರಿಗೆ ತಾವರೆ ಎಲೆ ಪ್ರಸಾದ ವಿತರಿಸಲಾಯಿತು.
ಇಲ್ಲಿ ಪ್ರತಿ ವರ್ಷದ ಹಲವು ಗ್ರಾಮಗಳಿಂದ ಬಂದ ಬರುವ ಸಾವಿರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮ ಹರಿಕೆ ತೀರಿಸುತ್ತಾರೆ. ಉತ್ಸವ ಹಿನ್ನೆಲೆ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿಲಾಗಿತ್ತು. ಉತ್ಸವದ ಪ್ರಯುಕ್ತ ಸಾವಿರಾರು ಭಕ್ತರಿಗೆ ತಾವರೆ ಎಲೆಯಲ್ಲಿ ಅನ್ನ, ಅವರೆ ಕಾಳಿನ ಸಾಂಬಾರ್ ಅನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಹರಿಸೇವೆಗೆ ಬಂದ ಸಾವಿರಾರು ಭಕ್ತರು ಸಾಮೂಹಿಕವಾಗಿ ದೇವಾಲಯದ ಆವರಣದಲ್ಲಿ ಸಾಲಾಗಿ ಕುಳಿತು ತಾವರೆ ಎಲೆಯಲ್ಲಿ ದೇವರ ಪ್ರಸಾದ ಸೇವಿಸುತ್ತಾರೆ.