ಕರ್ನಾಟಕ

karnataka

ETV Bharat / state

Karnataka News Today Live: ಒಂದೇ ಕ್ಲಿಕ್​ನಲ್ಲಿ ಕರ್ನಾಟಕದ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ - Live Update - LIVE UPDATE

Karnataka News Today
ಇಂದಿನ ಪ್ರಮುಖ ಸುದ್ದಿ (ETV Bharat)

By ETV Bharat Karnataka Team

Published : Aug 30, 2024, 10:33 AM IST

Updated : Aug 30, 2024, 10:35 PM IST

ಬೆಂಗಳೂರು:ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲಿದೆ. ಇಂದಿನ ಅಗ್ರ ವಿದ್ಯಮಾನಗಳನ್ನು ಒಂದೇ ಕ್ಲಿಕ್​ನಲ್ಲಿ ತಿಳಿದುಕೊಳ್ಳಿ.

LIVE FEED

10:33 PM, 30 Aug 2024 (IST)

ಬೆಂಗಳೂರು-ಮೈಸೂರು ಹೆದ್ದಾರಿ: ಕ್ಯಾಮರಾ ಕಂಡಲ್ಲಿ ಸ್ಲೋ..ಬಳಿಕ ಫಾಸ್ಟ್.. ಯಾಮಾರಿಸಿದ್ದ 89 ಸಾವಿರ ಸವಾರರಿಗೆ ಶಾಕ್!

ಬೆಂಗಳೂರು:ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ನುಸುಳಿದ್ದಾರೆ. ಅರ್ಥಾತ್ ಹೈವೆಯಲ್ಲಿ ಸಿಸಿಟಿವಿ ಕ್ಯಾಮರಾ ನೋಡುತ್ತಿದ್ದಂತೆ ನಿಧಾನವಾಗಿ ಹೋಗುವ ಸವಾರರು ಕ್ಯಾಮರಾ ಮರೆಯಾಗುತ್ತಿದ್ದಂತೆ ಆಕ್ಸಿಲೇಟರ್ ಒತ್ತಿ ಮಿತಿ ಮೀರಿ ಪ್ರಯಾಣಿಸಿದ್ದ 89 ಸಾವಿರ ವಿವಿಧ ವಾಹನ ಸವಾರರು ಸಿಕ್ಕಿಬಿದ್ದಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಬೆಂಗಳೂರು-ಮೈಸೂರು ಹೆದ್ದಾರಿ: ಕ್ಯಾಮರಾ ಕಂಡಲ್ಲಿ ಸ್ಲೋ..ಬಳಿಕ ಫಾಸ್ಟ್.. ಯಾಮಾರಿಸಿದ್ದ 89 ಸಾವಿರ ಸವಾರರಿಗೆ ಶಾಕ್! - traffic rules violation

ಬೆಂಗಳೂರು-ಮೈಸೂರು ಹೆದ್ದಾರಿ (ETV Bharat)

10:30 PM, 30 Aug 2024 (IST)

ಬಿಲ್‌ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ: ಬೆಸ್ಕಾಂ

ಬೆಂಗಳೂರು: ಬಿಲ್‌ ಬಂದ 30 ದಿನದೊಳಗೆ ವಿದ್ಯುತ್‌ ಶುಲ್ಕ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ) ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ಹೇಳಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಬಿಲ್‌ ಬಂದ 30 ದಿನದೊಳಗೆ ಶುಲ್ಕ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತ: ಬೆಸ್ಕಾಂ - Electricity Bill Payment

ಬೆಸ್ಕಾಂ (ETV Bharat)

10:28 PM, 30 Aug 2024 (IST)

ಎರಡನೇ ಸಲ ಸಿಎಂ ಆಗಿರುವುದಕ್ಕೆ ಅವರಿಗೆ ಹೊಟ್ಟೆ ಉರಿ, ನಾನು ದ್ವೇಷ ರಾಜಕಾರಣ ಮಾಡಲ್ಲ: ಸಿದ್ದರಾಮಯ್ಯ

ಹಾವೇರಿ: ನನ್ನ ಮೇಲೆ ಹೊಟ್ಟೆ ಉರಿ, ಸಿದ್ದರಾಮಯ್ಯ ಎರಡನೇ ಸಲ ಸಿಎಂ ಆಗಿಬಿಟ್ಟನಲ್ಲಾ ಎಂದು ಅಸೂಯೆ ಪಡ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಕಿಸಿದರು. ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಸಿಎಂ ಮಾತನಾಡಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಎರಡನೇ ಸಲ ಸಿಎಂ ಆಗಿರುವುದಕ್ಕೆ ಅವರಿಗೆ ಹೊಟ್ಟೆ ಉರಿ, ನಾನು ದ್ವೇಷ ರಾಜಕಾರಣ ಮಾಡಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

ಸಿಎಂ ಸಿದ್ದರಾಮಯ್ಯ (ETV Bharat)

8:07 PM, 30 Aug 2024 (IST)

ಓಮನ್‌ ದೇಶದಲ್ಲಿ‌ ಅಗ್ನಿ ಅವಘಡ: ಗೋಕಾಕ್​ನ ಮೂವರು, ರಾಯಚೂರಿನ ಓರ್ವ ಸಜೀವ ದಹನ

ಬೆಳಗಾವಿ: ಓಮನ್‌ ದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗೋಕಾಕ್​ ಮೂಲದ‌ ಮೂವರು ಹಾಗೂ ರಾಯಚೂರು ಮೂಲದ ಒಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋಕಾಕ್​ನ​ ವಿಜಯಾ ಮಾಯಪ್ಪ ತಹಶೀಲ್ದಾರ (58), ಪುತ್ರ ಪವನ್‌ ಕುಮಾರ್ (33), ಪುತ್ರಿ ಪೂಜಾ (30) ಮತ್ತು ಅಳಿಯ ರಾಯಚೂರಿನ ದೇವದುರ್ಗದ ಆದಿಶೇಷ ಬಸವರಾಜ (36) ಮೃತ ದುರ್ದೈವಿಗಳು. ಮೃತ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಓಮನ್‌ ದೇಶದಲ್ಲಿ‌ ಅಗ್ನಿ ಅವಘಡ: ಗೋಕಾಕ್​ನ ಮೂವರು, ರಾಯಚೂರಿನ ಓರ್ವ ಸಜೀವ ದಹನ - Four burnt alive in Oman

ಮೃತ ದುರ್ದೈವಿಗಳು (ETV Bharat)

8:03 PM, 30 Aug 2024 (IST)

ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನಲಾದ ಫೋಟೋ ಸೋಷಿಯಲ್​ ಮೀಡಿಯಾಗಳಲ್ಲಿ ಶರವೇಗದಲ್ಲಿ ವೈರಲ್​ ಆದ ಬೆನ್ನಲ್ಲೇ ದರ್ಶನ್​​​ ಅವರನ್ನು ಬಳ್ಳಾರಿ​ ಜೈಲಿಗೆ ಸ್ಥಳಾಂತರಗೊಳಿಸಲಾಗಿದೆ. ಇಂದು ನಟನ 2003ರ ಸಿನಿಮಾ 'ಕರಿಯ' ಮರು ಬಿಡುಗಡೆ ಆಗಿದ್ದು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಜೊತೆಗೆ ಕೆಲವರು ಒಂದಿಷ್ಟು ಅವಾಂತರವನ್ನೂ ಸೃಷ್ಟಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಕರಿಯಾ ರೀ ರಿಲೀಸ್: ಉದ್ಧಟತನ ತೋರಿದ ಅಭಿಮಾನಿಗಳ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ - Darshan Fans On Media

ಪೊಲೀಸರಿಂದ ಲಘು ಲಾಠಿ ಪ್ರಹಾರ (ETV Bharat)

3:34 PM, 30 Aug 2024 (IST)

ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ:"ವಿಜಯೇಂದ್ರ ಕೇಳಿದ ಕೂಡ್ಲೇ ನಾನು ರಾಜೀನಾಮೆ ಕೊಡಬೇಕಾ? ಮುಡಾ ಹಗರಣದಲ್ಲಿ ಯಾಕೆ ರಾಜೀನಾಮೆ ಕೊಡಬೇಕು? ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತಾ ನಾನು ಹೇಳುತ್ತೇನೆ. ಹಾಗೆ ನೋಡಿದರೆ ವಿಜಯೇಂದ್ರ ರಾಜೀನಾಮೆ ಕೊಡಬೇಕು. ಅವರು ರಾಜೀನಾಮೆ ಕೊಡುತ್ತಾರಾ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ - CM Siddaramaiah

ಸಿಎಂ ಸಿದ್ದರಾಮಯ್ಯ (ETV Bharat)

3:30 PM, 30 Aug 2024 (IST)

ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ನಕಲಿ ಅಂಕಪಟ್ಟಿ ಸೃಷ್ಟಿ: 3 ಸರ್ಕಾರಿ ನೌಕರರು, ಅಭ್ಯರ್ಥಿಗಳು ಸೇರಿ 48 ಮಂದಿ ಅರೆಸ್ಟ್

ಬೆಂಗಳೂರು:ನಕಲಿ ದಾಖಲಾತಿ ಸಲ್ಲಿಸಿ ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ 37 ಮಂದಿ ಅಭ್ಯರ್ಥಿಗಳು ಒಳಗೊಂಡಂತೆ 48 ಮಂದಿ ಆರೋಪಿಗಳನ್ನ ಸಿಸಿಬಿ ವಿಶೇಷ ವಿಚಾರಣಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.

ನಕಲಿ ಅಂಕಪಟ್ಟಿ ಸೃಷ್ಟಿಸಿದ ಆರೋಪಿಗಳು (ETV Bharat)

1:38 PM, 30 Aug 2024 (IST)

ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ: ಡಿಕೆಶಿ

ಬೆಂಗಳೂರು: 'ಚನ್ನಪಟ್ಟಣದಲ್ಲಿ ನಾನೇ ಕ್ಯಾಂಡಿಡೇಟ್, ಬಿ ಫಾರಂ ಬರೆಯೋನು ನಾನು. ಕ್ಯಾಂಡಿಡೇಟ್ ಹಾಕುವವನೂ ನಾನು. ಜನರು ವೋಟ್ ಹಾಕುವುದು ನನಗೇ. ನಿಮ್ಮನ್ನು ನಿಲ್ಲಿಸಿದರೂ ನನಗೇ ವೋಟ್​ ಹಾಕುತ್ತಾರೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:'ಚನ್ನಪಟ್ಟಣದಲ್ಲಿ ನಾನೇ ಕ್ಯಾಂಡಿಡೇಟ್.. ಮತದಾರರು ವೋಟ್ ಹಾಕೋದೂ ನನಗೇ': ಡಿಸಿಎಂ ಡಿಕೆಶಿ - Channapatna candidate

ಡಿ.ಕೆ. ಶಿವಕುಮಾರ್​ (ETV Bharat)

1:26 PM, 30 Aug 2024 (IST)

ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಿಶೀಲನೆ: ಗೃಹ ಸಚಿವ

ಬೆಂಗಳೂರು:ಪಿಎಸ್ಐ ನೇಮಕಾತಿ ಪರೀಕ್ಷೆ ನಿಗದಿಯಾಗಿದ್ದ ಸೆಪ್ಟೆಂಬರ್​ 22ರಂದೇ ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಯುಪಿಎಸ್‌ಸಿಗಿಂತ ಮೊದಲೇ ನಾವು ಪಿಎಸ್‌ಐ ಪರೀಕ್ಷಾ ದಿನಾಂಕ ಪ್ರಕಟಿಸಿದ್ದೇವೆ. ಮುಂದೂಡುವ ಸಾಧ್ಯತೆ ಇದ್ದರೆ, ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​ ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಿಶೀಲನೆ: ಗೃಹ ಸಚಿವ ಜಿ.ಪರಮೇಶ್ವರ್ - PSI Recruitment Exam

ಗೃಹ ಸಚಿವ ಡಾ. ಜಿ.ಪರಮೇಶ್ವರ್ (ETV Bharat)

1:22 PM, 30 Aug 2024 (IST)

ಆಹಾರ ಸಂಸ್ಥೆ ಮಳಿಗೆಗಳ ಲೈಸೆನ್ಸ್ ಅಮಾನತು

ಮಂಗಳೂರು:ಆಹಾರ ಅಸುರಕ್ಷತೆ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಬೆಂಗಳೂರಿನ ಕೆಎಫ್​ಸಿಯ ಒಂದು ಮಳಿಗೆ ಸೇರಿದಂತೆ ನಾಲ್ಕು ಆಹಾರ ಸಂಸ್ಥೆಯ ಲೈಸೆನ್ಸ್ ಅಮಾನತು ಮಾಡಲಾಗಿದೆ. ಆಹಾರ ಸುರಕ್ಷಿತವಾಗಿ ಜನರಿಗೆ ಸಿಗಬೇಕು. ಆಹಾರದ ತಯಾರಿಕೆ ಹೇಗಾಗುತ್ತದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಆಹಾರ ಅಸುರಕ್ಷತೆ: ನಾಲ್ಕು ಆಹಾರ ಸಂಸ್ಥೆ ಮಳಿಗೆಗಳ ಲೈಸೆನ್ಸ್ ಅಮಾನತು - Suspension of licenses

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

12:10 PM, 30 Aug 2024 (IST)

17 ಜನರು ಅಸ್ವಸ್ಥ

ದಾವಣಗೆರೆ:ಕಲುಷಿತ ನೀರು ಸೇವಿಸಿ 17 ಜನ ಅಸ್ವಸ್ಥರಾದ ಘಟನೆ ಚನ್ನಗಿರಿ ತಾಲೂಕಿನ ಜೋಳದಾಳ್​ ಗ್ರಾಮದಲ್ಲಿ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದಕ್ಕಿದ್ದಂತೆ ಜನರಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದೆ. ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ''ಅಸ್ವಸ್ಥರಾಗಿದ್ದವರ ಆರೋಗ್ಯ ಸ್ಥಿರವಾಗಿದೆ. ಇವರೆಲ್ಲ ಕಲುಷಿತ ನೀರು ಸೇವಿಸಿದ್ದಾರೆ ಎಂದು ಹೇಳುತ್ತಿದ್ದು, ಅದು ದೃಢಪಟ್ಟಿಲ್ಲ. ಪರಿಶೀಲನೆ ನಡೆಸಲಾಗುತ್ತಿದೆ'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ ಮಾಹಿತಿ ನೀಡಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ದಾವಣಗೆರೆ: ಕಲುಷಿತ ನೀರು ಸೇವನೆ ಆರೋಪ; 17 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು - 17 people fell ill

ಜೋಳದಾಳ್​ ಗ್ರಾಮ (ETV Bharat)

11:52 AM, 30 Aug 2024 (IST)

ವಕೀಲ ಕೆ.ಎನ್.ಜಗದೀಶ್ ಬಂಧನ

ಬೆಂಗಳೂರು:ಜಾತಿ ನಿಂದನೆ ಆರೋಪದ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪದ ಮೇಲೆ ವಕೀಲ ಕೆ.ಎನ್. ಜಗದೀಶ್ ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗೋವಾದಿಂದ ಬೆಂಗಳೂರಿಗೆ ಕರೆ ತರಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಜಾತಿ ನಿಂದನೆ ಆರೋಪ ಪ್ರಕರಣ: ವಕೀಲ ಕೆ.ಎನ್.ಜಗದೀಶ್ ಬಂಧನ - Lawyer K N Jagadish Arrest

ವಕೀಲ ಕೆ.ಎನ್.ಜಗದೀಶ್ (ETV Bharat)

11:44 AM, 30 Aug 2024 (IST)

ಉದ್ದು, ಸೋಯಾಬೀನ್​ಗೂ ಬೆಂಬಲ ಬೆಲೆ

ಹುಬ್ಬಳ್ಳಿ:ರಾಜ್ಯದಲ್ಲಿ ಮತ್ತೆರೆಡು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಖರೀದಿ ಕೇಂದ್ರ ತೆರೆಯುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವಾಲಯ ಇದೀಗ ಉದ್ದು ಮತ್ತು ಸೋಯಾಬೀನ್​ಗೂ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ರಾಜ್ಯದ ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ: ಉದ್ದು, ಸೋಯಾಬಿನ್​ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ - Support price buying center

ರೈತನಿಂದ ಉಳುಮೆ (IANS)

10:27 AM, 30 Aug 2024 (IST)

ಬಿಜೆಪಿ ಸದಸ್ಯನ ಅಪಹರಣ!

ಬೆಳಗಾವಿ:ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಅಪಹರಣ ಮಾಡಿರುವ ಆರೋಪ ಕೇಳಿ ಬಂದಿದೆ. ಪಟ್ಟಣದ ಚೌಕಿಮಠದ ಬಳಿ ಸದಸ್ಯ ನಾಗರಾಜ ನಿಂತಿದ್ದಾಗ ಸ್ಕಾರ್ಪಿಯೋ ವಾಹನದಲ್ಲಿ ಬಂದ ಕೆಲವರು, ಬಲವಂತವಾಗಿ ಅಪಹರಣ ಮಾಡಿದ್ದಾರೆ ಎಂದು ದೂರಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಬೆಳಗಾವಿ: ಪಟ್ಟಣ ಪಂಚಾಯಿತಿ ಚುನಾವಣೆಗೆ 5 ದಿನ ಇರುವಾಗಲೇ ಬಿಜೆಪಿ ಸದಸ್ಯನ ಕಿಡ್ನಾಪ್​ - BJP member kidnaped

ಬಿಜೆಪಿ ಸದಸ್ಯ ನಾಗರಾಜ (ETV Bharat)
Last Updated : Aug 30, 2024, 10:35 PM IST

ABOUT THE AUTHOR

...view details