ಕರ್ನಾಟಕ

karnataka

ETV Bharat / state

Karnataka News Today Live: ಒಂದೇ ಕ್ಲಿಕ್​ನಲ್ಲಿ ಕರ್ನಾಟಕದ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ - Live Update - LIVE UPDATE

Top news from karnataka
ಇಂದಿನ ಪ್ರಮುಖ ಸುದ್ದಿಗಳು (ETV Bharat)

By ETV Bharat Karnataka Team

Published : Aug 29, 2024, 9:16 AM IST

Updated : Aug 29, 2024, 7:37 PM IST

ಬೆಂಗಳೂರು:ರಾಜ್ಯದ ಪ್ರಮುಖ ಸುದ್ದಿಗಳ ಮಾಹಿತಿ ಇಲ್ಲಿದೆ. ಇಂದಿನ ಅಗ್ರ ವಿದ್ಯಮಾನಗಳನ್ನು ಒಂದೇ ಕ್ಲಿಕ್​ನಲ್ಲಿ ತಿಳಿದುಕೊಳ್ಳಿ.

LIVE FEED

10:57 PM, 29 Aug 2024 (IST)

ನಟ ದರ್ಶನ್ ಗ್ಲಾಸ್ ಧರಿಸಿದ ಪ್ರಕರಣ: ಎಸ್​ಪಿ ಪ್ರತಿಕ್ರಿಯೆ

ಬಳ್ಳಾರಿ: ನಟ ದರ್ಶನ್ ಅವರು ಧರಿಸಿರುವುದು ಕೂಲಿಂಕ್ ಗ್ಲಾಸ್ ಅಲ್ಲ. ಅದು ಪವರ್ ಗ್ಲಾಸ್. ಕಣ್ಣಿನ ಸಮಸ್ಯೆ ಇದ್ರೆ ಇದನ್ನು ಧರಿಸುವುದಕ್ಕೆ ಅವಕಾಶವಿದೆ. ಆದರೂ ಕೂಡ ವೈದ್ಯರು ಗ್ಲಾಸ್​​ನ ಪವರ್ ಪರೀಕ್ಷೆ ಮಾಡಲಿದ್ದಾರೆ ಎಂದು ಬಳ್ಳಾರಿ ಎಸ್​ಪಿ ಶೋಭಾ ರಾಣಿ ತಿಳಿಸಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ನಟ ದರ್ಶನ್ ಧರಿಸಿದ್ದು ಪವರ್ ಗ್ಲಾಸ್, ಇದಕ್ಕೆ ಅವಕಾಶ ಇದೆ: ಬಳ್ಳಾರಿ ಎಸ್​ಪಿ - Darshan in Ballari Jail

10:25 PM, 29 Aug 2024 (IST)

ನನಗೆ ಇಂದು ಜಯ ಸಿಕ್ಕಿದೆ, ನಾನು ಸಾಯೋವರೆಗೂ ಈ ರೀತಿ ಕೇಸ್‌ಗಳನ್ನು ಎದುರಿಸಲೇಬೇಕು : ಡಿ ಕೆ ಶಿವಕುಮಾರ್

ಬೆಂಗಳೂರು: ಇವತ್ತು ಹೈಕೋರ್ಟ್​ನಲ್ಲಿನ ಜಯ ನನಗಿಂತ ಹೆಚ್ಚಾಗಿ ಕರ್ನಾಟಕ ಸರ್ಕಾರಕ್ಕೆ ಆಗಿದೆ. ನನ್ನ ಪರವಾಗಿ ನಿಂತ ಸರ್ಕಾರಕ್ಕೆ ಧನ್ಯವಾದ ಹೇಳ್ತೇನೆ. ನನ್ನ ಪರ ವಾದ ಮಾಡಿದ ವಕೀಲರಿಗೂ ಧನ್ಯವಾದ ಹೇಳ್ತೀನಿ. ಯತ್ನಾಳ್‌ಗೂ ಈ ಪ್ರಕರಣಕ್ಕೂ ಏನು ಸಂಬಂಧ?. ಸಿಬಿಐನವ್ರೇ ಈ ಪ್ರಕರಣಕ್ಕೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಲಿ. ಅವರಿಗೂ ನ್ಯಾಯಾಲಯ, ನಮಗೂ ನ್ಯಾಯಾಲಯ ಇದೆ. ನಾನು ಸಾಯೋವರೆಗೂ ಈ ರೀತಿ ಕೇಸ್‌ಗಳನ್ನು ಎದುರಿಸಲೇಬೇಕು ಎಂದು ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧ ಹೈಕೋರ್ಟ್ ತೀರ್ಪು ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ನನಗೆ ಇಂದು ಜಯ ಸಿಕ್ಕಿದೆ, ನಾನು ಸಾಯೋವರೆಗೂ ಈ ರೀತಿ ಕೇಸ್‌ಗಳನ್ನು ಎದುರಿಸಲೇಬೇಕು : ಡಿ ಕೆ ಶಿವಕುಮಾರ್ - DCM D K Shivakumar

7:36 PM, 29 Aug 2024 (IST)

ಬೆಂಗಳೂರು: ಶಾಸಗಿ ಶಾಲೆಗೆ ಹುಸಿ ಬಾಂಬ್ ಸಂದೇಶ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್

ಬೆಂಗಳೂರು : ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಇಂಚಿಂಚೂ ತಪಾಸಣೆ ನಡೆಸಿ ಹುಸಿ ಬಾಂಬ್ ಸಂದೇಶವೆಂದು ಖಚಿತವಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಬೆಂಗಳೂರು: ಶಾಸಗಿ ಶಾಲೆಗೆ ಹುಸಿ ಬಾಂಬ್ ಸಂದೇಶ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ - fake bomb message

7:33 PM, 29 Aug 2024 (IST)

ಸಿನಿಮಾ ಶೈಲಿಯಲ್ಲಿ 5 ವರ್ಷಗಳಿಂದ ಹೆಂಡತಿ ಶವ ಹೂತಿಟ್ಟ; ಸ್ನೇಹಿತನ ಪತ್ನಿ ಕೊಲೆ ಕೇಸ್​ ವಿಚಾರಣೆಯಲ್ಲಿ ಸಿಕ್ಕಿಬಿದ್ದ!

ರಾಮನಗರ :ಪತಿಯೇ ಪತ್ನಿಯನ್ನ ಕೊಲೆ ಮಾಡಿ ಐದು ವರ್ಷಗಳ ನಂತರ ಪೊಲೀಸರಿಗೆ ಸೆರೆ ಸಿಕ್ಕಿರುವ ಅಪರೂಪದ ಘಟನೆ ಮಾಗಡಿಯಲ್ಲಿ ಜರುಗಿದೆ. ಸ್ನೇಹಿತನ ಪತ್ನಿಯ ಕೊಲೆ ಕೇಸ್‌ನಲ್ಲಿ ಪೊಲೀಸರ ಅತಿಥಿಯಾಗಿದ್ದ ಆರೋಪಿಯೊಬ್ಬ ಐದು ವರ್ಷಗಳ ಬಳಿಕ ತನ್ನ ಪತ್ನಿಯ ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಸಿನಿಮಾ ಶೈಲಿಯಲ್ಲಿ 5 ವರ್ಷಗಳಿಂದ ಹೆಂಡತಿ ಶವ ಹೂತಿಟ್ಟ; ಸ್ನೇಹಿತನ ಪತ್ನಿ ಕೊಲೆ ಕೇಸ್​ ವಿಚಾರಣೆಯಲ್ಲಿ ಸಿಕ್ಕಿಬಿದ್ದ! - RAMANAGARA MURDER MYSTERY

ಹೆಂಡತಿ ಶವ ಹೂತಿಟ್ಟ ಗಂಡ (ETV Bharat)

7:32 PM, 29 Aug 2024 (IST)

ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದೆ. ಈ ಹಿನ್ನೆಲೆ ಪ್ರಮುಖವಾಗಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಎರಡು ದಿನಗಳಿಗೆ ಅನ್ವಯವಾಗುವಂತೆ ಹೈ ಅಲರ್ಟ್​ಗಳನ್ನು ಘೋಷಿಸಲಾಗಿದೆ. ಇಂದು ಸಂಜೆಯಿಂದ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಾದ ಉಡುಪಿಗೆ ಕ್ರಮವಾಗಿ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಮುಂಗಾರು ಮಳೆಯ ಅಬ್ಬರ; ಮಲೆನಾಡು, ಕರಾವಳಿ ಜಿಲ್ಲೆಗಳಿಗೆ ಮತ್ತೆ ಎರಡು ದಿನ ಹೈಅಲರ್ಟ್ - Monsoon Rain

6:07 PM, 29 Aug 2024 (IST)

ಎಂ ಬಿ ಪಾಟೀಲ್ ಸ್ಪಷ್ಟನೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಕ್ರಿಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು ಸಿ.ಎ. ನಿವೇಶನ ಕೊಟ್ಟಿರುವುದು ವಿನಾಕಾರಣ ಸುದ್ದಿಯಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಖರ್ಗೆಯವರ ಟ್ರಸ್ಟ್​ಗೆ ಮೆರಿಟ್ ಮತ್ತು ನಿಯಮಗಳ ಅನುಸಾರ ಸಿ.ಎ ನಿವೇಶನ ಹಂಚಿಕೆ: ಸಚಿವ ಎಂ.ಬಿ.ಪಾಟೀಲ್ - Land To Kharge Trust

6:05 PM, 29 Aug 2024 (IST)

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆಶಿಗೆ ಬಿಗ್ ರಿಲೀಫ್

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ನೀಡಿದ್ದ ಸಮ್ಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಮತ್ತು ಸಿಬಿಐ ಹೈಕೋರ್ಟ್​ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ. ಸೋಮಶೇಖರ್​ ಮತ್ತು ನ್ಯಾಯಮೂರ್ತಿ ಉಮೇಶ್​ ಎಂ ಅಡಿಗ ಅವರಿದ್ದ ನ್ಯಾಯಪೀಠ ಇಂದು ತೀರ್ಪು ಪ್ರಕಟಿಸಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿಕೆಶಿಗೆ ಬಿಗ್ ರಿಲೀಫ್ - DK Shivakumar Case

6:02 PM, 29 Aug 2024 (IST)

ಸಿಎಂಗೆ ರಿಲೀಫ್​

ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಎರಡನೇ ಬಾರಿಗೆ ಸಣ್ಣ ರಿಲೀಫ್ ಸಿಕ್ಕಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ನೀಡಿದ್ದ ಅನುಮತಿ ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿಕೆ ಮಾಡಿದ ಹೈಕೋರ್ಟ್, ಅಲ್ಲಿಯವರಗೂ ಯಾವುದೇ ಯಾವುದೇ ಕ್ರಮ ಜರುಗಿಸದಂತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್: ಆ.31ಕ್ಕೆ ವಿಚಾರಣೆ ಮುಂದೂಡಿಕೆ, ಸಿದ್ದರಾಮಯ್ಯಗೆ ಮತ್ತೆರಡು ದಿನ ರಿಲೀಫ್ - Muda Scam

1:43 PM, 29 Aug 2024 (IST)

ರಾಜ್ಯಕ್ಕೆ ಶೇ. 60ರಷ್ಟು ತೆರಿಗೆ ಪಾಲಿಗೆ ಸಿಎಂ ಮನವಿ

ಬೆಂಗಳೂರು: 16ನೇ ಹಣಕಾಸು ಆಯೋಗ ಅನುದಾನ ಹಂಚಿಕೆ ಸಮತೋಲಿತ ಹಾಗೂ ಪಾರದರ್ಶಕತೆಯಿಂದ ಕೂಡಲಿ ಎಂಬುದು ರಾಜ್ಯದ ನಿರೀಕ್ಷೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗದ ಜೊತೆಗಿನ ಸಭೆಯಲ್ಲಿ ಮನವಿ ಮಾಡಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗಾರಿಯ ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:16ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಸಮತೋಲಿತವಾಗಿರಲಿ: ರಾಜ್ಯಕ್ಕೆ ಶೇ 60 ತೆರಿಗೆ ಪಾಲು ನೀಡಿ: ಸಿಎಂ - 16th Finance Commission

ಹಣಕಾಸು ಆಯೋಗದ ಜೊತೆಗಿನ ಸಭೆ (ETV Bharat)

10:27 AM, 29 Aug 2024 (IST)

ಬಳ್ಳಾರಿ ಜೈಲಿಗೆ ದರ್ಶನ್​ ಸ್ಥಳಾಂತರ

ಬಳ್ಳಾರಿ:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್​ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಪೊಲೀಸ್​ ಬಿಗಿ ಭದ್ರತೆಯಲ್ಲಿ ಗುರುವಾರ ಬೆಳಗ್ಗೆ ಬಳ್ಳಾರಿಗೆ ಕರೆತರಲಾಗಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಬಳ್ಳಾರಿ ಸೆಂಟ್ರಲ್​ ಜೈಲಿಗೆ ನಟ ದರ್ಶನ್​ ಸ್ಥಳಾಂತರ: ಹೈಸೆಕ್ಯೂರಿಟಿ ಸೆಲ್​ನಲ್ಲಿಡಲು ಸಿದ್ಧತೆ - Darshan shifted to Ballari Jail

ದರ್ಶನ್​ ಸ್ಥಳಾಂತರ (ETV Bharat)

9:30 AM, 29 Aug 2024 (IST)

ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆ

ಬೆಂಗಳೂರು:7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರ್ಕಾರ, ಈಗ ನಿವೃತ್ತಿ ವೇತನ ಹೆಚ್ಚಳ ಮಾಡಿ ಪಿಂಚಣಿದಾರರಿಗೂ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿ ಆರ್ಥಿಕ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:ಪಿಂಚಣಿದಾರರಿಗೂ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ನಿವೃತ್ತಿ ವೇತನ ಹೆಚ್ಚಳ - Pension Hike

ವಿಧಾನಸೌಧ (ETV Bharat)

9:14 AM, 29 Aug 2024 (IST)

ಪಿಂಚಣಿದಾರರಿಗೂ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ನಿವೃತ್ತಿ ವೇತನ ಹೆಚ್ಚಳ

ಬೆಂಗಳೂರು:7ನೇ ವೇತನ ಆಯೋಗದ ವರದಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದ ರಾಜ್ಯ ಸರ್ಕಾರ, ಈಗ ನಿವೃತ್ತಿ ವೇತನ ಹೆಚ್ಚಳ ಮಾಡಿ ಪಿಂಚಣಿದಾರರಿಗೂ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದ ನಿವೃತ್ತ ನೌಕರರ ಪಿಂಚಣಿಯನ್ನು ಪರಿಷ್ಕರಣೆ ಮಾಡಿ ಆರ್ಥಿಕ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: ಪಿಂಚಣಿದಾರರಿಗೂ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ನಿವೃತ್ತಿ ವೇತನ ಹೆಚ್ಚಳ - Pension Hike

9:03 AM, 29 Aug 2024 (IST)

16ನೇ ಹಣಕಾಸು ಆಯೋಗದ ಸಭೆ

ಬೆಂಗಳೂರು: ಇಂದು 16ನೇ ಕೇಂದ್ರ ಹಣಕಾಸು ಆಯೋಗದವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಅಧಿಕಾರಿಗಳ ಸಭೆ ನಡೆಯಲಿದೆ. ''15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಕರ್ನಾಟಕ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ ಎಂದು ಮನದಟ್ಟು ಮಾಡಿ, ತೆರಿಗೆ ಹಂಚಿಕೆಯನ್ನು ಶೇಕಡಾ 41ರಿಂದ ಶೇ.50ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಗುವುದು.'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಂಪೂರ್ಣ ಸುದ್ದಿಗಾಗಿ ಕ್ಲಿಕ್​ ಮಾಡಿ:ಇಂದು 16ನೇ ಹಣಕಾಸು ಆಯೋಗದ ಸಭೆ: ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸುವ ವಿಶ್ವಾಸವಿದೆ ಎಂದ ಸಿಎಂ - Finance Commission Meeting

ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)
Last Updated : Aug 29, 2024, 7:37 PM IST

ABOUT THE AUTHOR

...view details