ಶಿವಮೊಗ್ಗ: ಹೊರವಲಯದ ಹುಲಿ ಮತ್ತು ಸಿಂಹಧಾಮದ 17 ವರ್ಷದ ಅಂಜನಿ ಎಂಬ ಹುಲಿ ಇಂದು ಸಾವನ್ನಪ್ಪಿದೆ. ವಯೋ ಸಹಜ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಂಜನಿ ಎಂಬ ಹೆಣ್ಣು ಹುಲಿ ಇಂದು ಸಾವನ್ನಪ್ಪಿದೆ ಎಂದು ಹುಲಿ ಮತ್ತು ಸಿಂಹಧಾಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರಾಕ್ಷರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಜನಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನ ಕೂರ್ಗಹಳ್ಳಿಯ ಹುಲಿ ಸಂರಕ್ಷಣಾ ಪುನರ್ವಸತಿ ಹಾಗೂ ತಳಿ ಸಂರಕ್ಷಣಾ ಕೇಂದ್ರದಿಂದ ಕರೆತರಲಾಗಿತ್ತು. ಕಳೆದ ಎರಡು ವರ್ಷಗಳಿಂದ ಅಂಜನಿ ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಅಂಜನಿ ಹುಲಿ ಸಾವನ್ನಪ್ಪಿದೆ ಎಂದು ಹುಲಿ ಮತ್ತು ಸಿಂಹ ಧಾಮದ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.