ಬೆಂಗಳೂರು: ಭಾರತದ ಪ್ರಮುಖ ಆ್ಯಂಟಿ ಡ್ರೋನ್ ಟೆಕ್ನಾಲಜಿ & ಡಿಫೆನ್ಸ್ ಟ್ರೈನಿಂಗ್ ಸೊಲ್ಯೂಷನ್ಸ್ ಪ್ರೊವೈಡರ್ ಎನಿಸಿರುವ ಜೆನ್ ಟೆಕ್ನಾಲಜೀಸ್ ಲಿಮಿಟೆಡ್ ಮೂರು ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಏರೋ ಇಂಡಿಯಾ-2025ರಲ್ಲಿ ಬಿಡುಗಡೆಗೊಳಿಸಿದೆ. ಜೆನ್ ವ್ಯೋಮ್ಕವಚ್-ಅಡ್ವಾನ್ಸ್‌ಡ್ ಆ್ಯಂಟಿ ಡ್ರೋನ್ ಸಿಸ್ಟಂ, ಫೋರ್ ಬ್ಯಾರಲ್ ರೋಟರಿ ಮಷೀನ್ ಗನ್ (12.7 x 99mm), ಟ್ವಿನ್ ಬ್ಯಾರಲ್ ಆಟೋಕ್ಯಾನನ್ (ಟ್ಯುರೇಟೆಡ್ 20mm) ಎಂಬ ರಕ್ಷಣಾ ವ್ಯವಸ್ಥೆಗಳನ್ನು ಅನಾವರಣಗೊಳಿಸಲಾಗಿದೆ.
ಜೆನ್ ವ್ಯೋಮಕವಚ್-ಅಡ್ವಾನ್ಸ್‌ಡ್ ಆ್ಯಂಟಿ ಡ್ರೋನ್ ಸಿಸ್ಟಂ: ವೈಮಾನಿಕ ಬೆದರಿಕೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಜೆನ್ ವ್ಯೋಮ್ಕವಚ್ ಎಂಬುದು ಸುಧಾರಿತ ಆ್ಯಂಟಿ ಡ್ರೋನ್ ಅನ್ವೇಷಣೆಯಾಗಿ ಗುರುತಿಸಿಕೊಂಡಿದೆ. ಇದು ಬೈರಕ್ತರ್-TB2 ಮತ್ತು ಸ್ವಾರ್ಮ್ಸ್‌ನಂತಹ ಎಲ್ಲಾ ವಿಧದ ಡ್ರೋನ್‌ಗಳ ಬೆದರಿಕೆಗಳ ವಿರುದ್ಧ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಹಾಗೂ ರಿಯಲ್ ಟೈಮ್‌ನಲ್ಲಿ ಡ್ರೋನ್ ಪತ್ತೆ ಹಚ್ಚಿ ತಟಸ್ಥೀಕರಣ ಒದಗಿಸಲಿದೆ.
ಫೋರ್ ಬ್ಯಾರಲ್ ರೋಟರಿ ಮಷೀನ್ ಗನ್ (12.7 x 99mm):ಇದು ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು, ಆ್ಯಂಟಿ ಡ್ರೋನ್ ಮತ್ತು ಹೈ ಇಂಟೆನ್ಸಿಟಿ ಕಾಂಬ್ಯಾಕ್ಟ್ ಅಪ್ಲಿಕೇಶನ್ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ನಿಮಿಷಕ್ಕೆ 3,500 ರೌಂಡ್ಸ್ ಫೈರ್ ರೇಟ್ ಹೊಂದಿರುವ ಇದು, ಸರಿಸುಮಾರು 50 ಕೆ.ಜಿ ತೂಕ ಮತ್ತು 1,300 ಮಿ.ಮೀ ಉದ್ದ ಹೊಂದಿರಲಿದೆ. ಫೈರ್‌ಪವರ್, ನಿಖರತೆ ಮತ್ತು ಹೊಂದಿಕೊಳ್ಳುವಿಕೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಗನ್ ತನ್ನ ಗರಿಷ್ಠ ದಕ್ಷತೆಯೊಂದಿಗೆ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಉತ್ತಮ ಆಯ್ಕೆಯಾಗಲಿದೆ.
ಟ್ವಿನ್ ಬ್ಯಾರೆಲ್ ಆಟೋಕ್ಯಾನನ್ (ಟ್ಯುರ್ರೆಟೆಡ್ 20mm): ಸುಧಾರಿತ ಟ್ವಿನ್-ಬ್ಯಾರೆಲ್ ವ್ಯವಸ್ಥೆಯು ಯುದ್ಧ ಹೆಲಿಕಾಪ್ಟರ್‌ಗಳಿಗೆ ಅಧಿಕ ಸ್ಟ್ರೈಕ್ ಸಾಮರ್ಥ್ಯವನ್ನು ಒದಗಿಸಲಿದೆ. ಯುದ್ಧದ ಸನ್ನಿವೇಶಗಳಲ್ಲಿ ವೇಗವಾಗಿ ಸಾಗುತ್ತಾ ಕಾರ್ಯನಿರ್ವಹಿಸುವಾಗ ಪೈಲಟ್‌ಗಳು ಹೆಚ್ಚಿನ ನಿಖರತೆಯೊಂದಿಗೆ ಗುರಿಗಳನ್ನು ಟಾರ್ಗೆಟ್ ಮಾಡಲು ಇದು ಸಹಕಾರಿಯಾಗಲಿದೆ.