ಚಾಮರಾಜನಗರ: ಮನೆ ಬಾಗಿಲು ಮುರಿದು ಮದುವೆಗೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು ಕದ್ದೊಯ್ದ ಘಟನೆ ಹನೂರು ಪಟ್ಟಣದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹನೂರು ಪಟ್ಟಣದ 11ನೇ ವಾರ್ಡ್ನ ನಿವಾಸಿ ಚಿನ್ನದೊರೆ ಎಂಬವರು ತಮ್ಮ ಮಗಳ ಮದುವೆ ಖರ್ಚಿಗಾಗಿ ಮನೆಯಲ್ಲಿ 20 ಲಕ್ಷ ನಗದು ಹಾಗೂ 500 ಗ್ರಾಂ ಚಿನ್ನ ಕೂಡಿಟ್ಟಿದ್ದರು. ಕಾರ್ಯನಿಮಿತ್ತ ತಮಿಳುನಾಡಿಗೆ ಹೋಗಿ ಸೋಮವಾರ ತಡರಾತ್ರಿ ವಾಪಸ್ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.