ಕರ್ನಾಟಕ

karnataka

ETV Bharat / state

ಮೊಹರಂ ಹಬ್ಬಕ್ಕೆ ಒಂದು ವಾರ ಬಾಕಿ ಇರುವಾಗಲೇ ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು - Gods idol Theft - GODS IDOL THEFT

ದಾವಣಗೆರೆಯ ಕುಂದವಾಡದಲ್ಲಿ ದೇವರ ಮೂರ್ತಿಯ ಕಳ್ಳತನವಾಗಿದೆ.

ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು
ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು (ETV Bharat)

By ETV Bharat Karnataka Team

Published : Jul 5, 2024, 6:55 PM IST

ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು (ETV Bharat)

ದಾವಣಗೆರೆ:ಮೊಹರಂ ಹಬ್ಬ ಆಚರಣೆಗೆ ಹಿಂದೂ - ಮುಸ್ಲಿಂ ಎನ್ನದೇ ಇಡೀ ಬಡಾವಣೆ ಸಜ್ಜಾಗಿತ್ತು. ಆದರೆ, ಹಬ್ಬಕ್ಕೆ ಒಂದು ವಾರ ಇರುವಾಗಲೇ ಕಿಡಿಗೇಡಿಗಳು ದೇವರ ಮೂರ್ತಿ ಇರುವ ಪೆಟ್ಟಿಗೆ ಒಡೆದು 2 ಮೂರ್ತಿಯನ್ನು ಕಳ್ಳತನ ಮಾಡಿರುವ ಘಟನೆ ಕುಂದವಾಡದಲ್ಲಿ ನಡೆದಿದೆ.

ಕುಂದವಾಡದಲ್ಲಿ ವರ್ಷಕ್ಕೆ ಒಂದು ಬಾರಿ ದೇವರನ್ನು ಹೊರ ತೆಗೆದು ಐದು ದಿನಗಳ ಕಾಲ ಗ್ರಾಮದ ರಾಜಬೀದಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷವಾಗಿ ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇದೇ ಇಲ್ಲಿನ ಪದ್ಧತಿ. ಈ ಬಾರಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಮಾಡಬೇಕೆಂದಿದ್ದ ಭಕ್ತರ ಬಯಕೆಗೆ ಕಳ್ಳರು ತಣ್ಣೀರು ಎರೆಚಿದ್ದಾರೆ.

ಪೆಟ್ಟಿಗೆಯಲ್ಲಿ ಇದ್ದಂತಹ ಮೊಹರಂ ಹಬ್ಬದ 'ಅಲೈ' ದೇವರ ಮೂರ್ತಿಯನ್ನು ಖದೀಮರು ಕದ್ದೊಯ್ದಿದ್ದಾರೆ. ಪೆಟ್ಟಿಗೆಯಲ್ಲಿ ಒಟ್ಟು 5 ಮೂರ್ತಿ ಇದ್ದು ಅದರಲ್ಲಿ ಎರಡು ದೇವರುಗಳನ್ನು ಮಾತ್ರ ಖದೀಮರು ಕಳ್ಳತನ ಮಾಡಿರುವುದು ಗ್ರಾಮದಲ್ಲಿ ಅನುಮಾನಕ್ಕೆ ಕಾರಣವಾಗಿದೆ.‌ ಇಲ್ಲಿನ ದೇವರು ಸಾಕಷ್ಟು ಪವಾಡಗಳಿಗೆ ಹೆಸರು ವಾಸಿಯಾಗಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ಪೂಜಿಸುತ್ತಾರೆ.

ಸದ್ಯ ಈ ಬಗ್ಗೆ ವಿದ್ಯಾನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಒಂದು ವಾರದಲ್ಲಿ ಕಿಡಿಗೇಡಿಗಳನ್ನು ಹಿಡಿದು ಹಬ್ಬ ನಡೆಯಲು ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

"ಇಲ್ಲಿ ಮೊಹರಂ‌ ಹಬ್ಬವನ್ನು ಹಿಂದೂ - ಮುಸ್ಲಿಂರು ಎನ್ನದೇ ಭಾವೈಕ್ಯತೆಯಿಂದ ಆಚರಣೆ ಮಾಡುತ್ತೇವೆ. ಯಾರೋ ಕಳ್ಳರು ಕೋಣೆಯ ಬೀಗ ಒಡೆದು ದೇವರನ್ನು ಕಳ್ಳತನ ಮಾಡಿದ್ದಾರೆ. ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ" ಎಂದು ಮುಸ್ಲಿಂ ಸಮಾಜದ ಮುಖಂಡ ಬಷೀರ್ ತಿಳಿಸಿದ್ದಾರೆ.

ಇದನ್ನೂ ಓದಿ:ಕನ್ನಡದ ಕಣ್ಮಣಿ 'ಪಾಟೀಲ್​​​​ ಪುಟ್ಟಪ್ಪ' ಸಮಾಧಿಗೆ ಬೇಕಿದೆ ಅಭಿವೃದ್ಧಿ; 'ಪಾಪು' ಕೃತಿಗಳ ಗ್ರಂಥಾಲಯ ಸ್ಥಾಪಿಸಲು ಒತ್ತಾಯ - Patil Puttappa tomb needs develop

ABOUT THE AUTHOR

...view details