ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಈಗ ಶಬ್ಧ ಮಾಲಿನ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಬೈಕ್ ಮೂಲಕ ಕರ್ಕಶ ಶಬ್ಧ ಮಾಡಿ ಅವಳಿ ನಗರದಲ್ಲಿ ಶಬ್ಧ ಮಾಲಿನ್ಯ ಉಂಟು ಮಾಡುವ ಬೈಕ್ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಬೈಕ್ಗಳ ಸೈಲೆನ್ಸರ್ಗಳನ್ನು ರೋಡ್ ರೋಲರ್ನಿಂದ ನಾಶಪಡಿಸಿದ ಪೊಲೀಸರು ಡಿಸಿಪಿ ಟ್ರಾಫಿಕ್ ಆ್ಯಂಡ್ ಕ್ರೈಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕರ್ಕಶ ಶಬ್ಧ ಮಾಡುವ ಬೈಕ್ ಸವಾರರ ಬೈಕ್ನ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ರೋಡ್ ರೋಲರ್ ಮೂಲಕ ಪುಡಿ ಪುಡಿ ಮಾಡಿದ್ದಾರೆ. ಬೈಕ್ ಮೂಲಕ ಶಬ್ಧ ಮಾಲಿನ್ಯ ಮಾಡಿದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಬೈಕ್ಗಳ ಸೈಲೆನ್ಸರ್ಗಳನ್ನು ನಾಶಪಡಿಸಲಾಯಿತು ಈಗಾಗಲೇ ಬೇಕಾಬಿಟ್ಟಿಯಾಗಿ ಶಬ್ಧ ಮಾಡಿ ಬೈಕ್ ಚಾಲನೆ ಮಾಡುವ ಮೂಲಕ ಜನರಿಗೆ ತೊಂದರೆ ಕೊಡುವವರನ್ನು ಪತ್ತೆ ಹಚ್ಚಲು ಪೊಲೀಸರು ಬೈಕ್ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬೈಕ್ನ ಸೈಲೆನ್ಸರ್ಗಳನ್ನು ವಶಕ್ಕೆ ಪಡೆದು ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು. ಇದೀಗ ಅವೆಲ್ಲಾ ಬೈಕ್ನ ಸೈಲೆನ್ಸರ್ಗಳನ್ನು ನಾಶ ಪಡಿಸಲಾಗಿದೆ.
ಕರ್ಕಶ ಶಬ್ಧ ಮಾಡುವ ಬೈಕ್ನ ಸೈಲೆನ್ಸರ್ಗಳನ್ನು ನಾಶ ಮಾಡಲಾಯಿತು ಇದನ್ನೂ ಓದಿ:ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ: ಮೊಬೈಲ್ ಚಾರ್ಜರ್, ಬ್ಲೂಟೂತ್ ಡಿವೈಸ್ ವಶಕ್ಕೆ - Hindalaga Jail