ಬೆಂಗಳೂರು:ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಹೆಣ್ಣು ಮಗುವನ್ನು ದೇವಯ್ಯ ಪಾರ್ಕ್ ಬಳಿ ಪೊಲೀಸರು ಪತ್ತೆ ಹಚ್ಚಿದ್ದು, ಪೋಷಕರಿಗೆ ಒಪ್ಪಿಸಿದ್ದಾರೆ.
ಮಗುವನ್ನು ಕರೆದೊಯ್ದಿದ್ದ ಮಹಿಳೆ ಸುಜಾತ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಎರಡೂವರೆ ವರ್ಷದ ಮಗು ನವ್ಯಳನ್ನು ಈ ಮಹಿಳೆ ಕರೆದೊಯ್ದ ಘಟನೆ ಗುರುವಾರ ಮಲ್ಲೇಶ್ವರಂನ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿತ್ತು. ಬೆಳಗ್ಗೆ 9.20ರ ಸುಮಾರಿಗೆ ಪೋಷಕರು ತಮ್ಮ ಮೊದಲ ಮಗುವನ್ನು ಶಾಲೆಗೆ ಕಳುಹಿಸಲು ತಯಾರಿ ನಡೆಸುತ್ತಿದ್ದಾಗ ಹೆಣ್ಣುಮಗು ನಾಪತ್ತೆಯಾಗಿತ್ತು.
ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಅಪರಿಚಿತ ಮಹಿಳೆಯೊಬ್ಬಳು ಮಾತನಾಡಿಸುತ್ತಾ ಕರೆದೊಯ್ದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೋಷಕರು ನೀಡಿದ ದೂರಿನನ್ವಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಬೆಂಗಳೂರು: ಆಟವಾಡುತ್ತಿದ್ದ ಎರಡೂವರೆ ವರ್ಷದ ಹೆಣ್ಣುಮಗು ಕಿಡ್ನ್ಯಾಪ್