ಉಡುಪಿ: ಆಟವಾಡುವಾಗ ಆಕಸ್ಮಿಕವಾಗಿ ನೀರಿನ ಬಕೆಟ್ಗೆ ಬಿದ್ದು ಅಪಾಯಕ್ಕೊಳಗಾದ ಮಗುವನ್ನು ಡಾಕ್ಟರ್ ಮತ್ತು ಆಂಬ್ಯುಲೆನ್ಸ್ ಚಾಲಕ ಬದುಕಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಂಡ್ಲೂರಿನ ಮೌಲಾನಾ ಕಲಿಮುಲ್ಲಾ ಎಂಬವರ 11 ತಿಂಗಳ ಮಗು ಬಾತ್ರೂಮ್ನಲ್ಲಿ ನೀರಾಟ ಆಡುತ್ತಿದ್ದಾಗ ನೀರಿನ ಬಕೆಟ್ ಒಳಗೆ ಬಿದ್ದು ಉಸಿರುಗಟ್ಟಿದ್ದರಿಂದ ಆರೋಗ್ಯ ಗಂಭೀರ ಸ್ಥಿತಿಗೆ ತಲುಪಿತ್ತು. ತಕ್ಷಣ ಮನೆಯವರು ಕಂಡ್ಲೂರಿನ ಮಂಜುಶ್ರೀ ಕ್ಲಿನಿಕ್ಗೆ ಮಗುವನ್ನು ಕರೆದೊಯ್ದಿದ್ದರು. ಅಲ್ಲಿನ ಡಾ. ಪ್ರಶಾಂತ್ ಶೆಟ್ಟಿ ತುರ್ತು ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ನಲ್ಲಿ ಮಣಿಪಾಲ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು.