ಕರ್ನಾಟಕ

karnataka

ETV Bharat / state

ಶಾಲೆಯಲ್ಲಿ ಚಿಕ್ಕಿ ತಿಂದು ಇಬ್ಬರು ಅಸ್ವಸ್ಥ ; 44 ವಿದ್ಯಾರ್ಥಿಗಳು ಚಿಕಿತ್ಸೆ ಬಳಿಕ ಡಿಸ್ಚಾರ್ಜ್​ - STUDENTS SICK

ಪಾವಗಡ ತಾಲೂಕಿನ ಕೋಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಚಿಕ್ಕಿ ತಿಂದು ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ನಡೆದಿದೆ.

Tahsildar Varadaraju
ತಹಶೀಲ್ದಾರ್ ವರದರಾಜು ಹಾಗೂ ಬಿಇಓ ಇಂದ್ರಣಮ್ಮ ಆಸ್ಪತ್ರೆಗೆ ಭೇಟಿ ನೀಡಿದರು (ETV Bharat)

By ETV Bharat Karnataka Team

Published : Nov 29, 2024, 7:57 PM IST

Updated : Nov 29, 2024, 9:43 PM IST

ತುಮಕೂರು :ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಕೋಣನಕುರಿಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಚಿಕ್ಕಿ ತಿಂದು ಶಾಲಾ ಮಕ್ಕಳ ಆರೋಗ್ಯದಲ್ಲಿ ಏರುಪೇರಾದ ಘಟನೆ ನಡೆದಿದೆ.

ಮಧ್ಯಾಹ್ನ ಊಟದ ಜೊತೆಗೆ ಕೊಡುವ ಚಿಕ್ಕಿ ತಿಂದ ನಂತರ ಕೆಲವು ವಿದ್ಯಾರ್ಥಿಗಳಿಗೆ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಮಕ್ಕಳನ್ನ ಪಾವಗಡ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ. ಸ್ಥಳಕ್ಕೆ ಪಾವಗಡ ತಹಶೀಲ್ದಾರ್ ವರದರಾಜು, ಬಿಇಒ ಇಂದ್ರಣಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಹಶೀಲ್ದಾರ್ ವರದರಾಜು ಮಾತನಾಡಿದ್ದಾರೆ (ETV Bharat)

ಪಾವಗಡ ತಹಶೀಲ್ದಾರ್ ವರದರಾಜು ಹೇಳಿದ್ದೇನು ?:''ವಿಷಯ ತಿಳಿದ ತಕ್ಷಣವೇ ನಾನು ಭೇಟಿ ನೀಡಿದ್ದೇನೆ. ಮಧ್ಯಾಹ್ನ ಶಾಲೆಯಲ್ಲಿ ಊಟ ಮಾಡಿರುವುದಾಗಿ ಹೇಳುತ್ತಿದ್ದಾರೆ. ಯಾರಿಗೋ ಒಬ್ಬರಿಗೆ ಅಥವಾ ಇಬ್ಬರಿಗೆ ಸ್ವಲ್ಪ ವಾಂತಿಯಾಗಿದೆ ಬಿಟ್ರೆ ಬೇರೆ ಮಕ್ಕಳಿಗೆ ತೊಂದರೆ ಇಲ್ಲ. ಆ ಸಂದರ್ಭದಲ್ಲಿ ಎಲ್ಲಾ ಮಕ್ಕಳು ಸ್ವಲ್ಪ ಗಾಬರಿಯಾಗಿದ್ದರಿಂದ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಯಾರಿಗೂ ಸಹ ಯಾವುದೇ ರೀತಿಯ ತೊಂದರೆಯಿಲ್ಲ. ಯಾವ ಪೋಷಕರು ಭಯಪಡುವ ಅವಶ್ಯಕತೆ ಇಲ್ಲ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ'' ಎಂದಿದ್ದಾರೆ.

ಬಿಇಒ ಇಂದ್ರಣಮ್ಮ ಹೇಳಿದ್ದೇನು ?: ''ಎಸ್​ಡಿಎಂಸಿ ಅಧ್ಯಕ್ಷರು ನನಗೆ ಫೋನ್​ ಮಾಡಿ, ಮೇಡಂ ಊಟ ತಿಂದ ಮೇಲೆ ನಾಲ್ಕು ಮಕ್ಕಳಿಗೆ ವಾಂತಿ ಆಗಿದೆ ಎಂದ್ರು. ಅದಕ್ಕೆ ಆಯ್ತು ನಾನು ಅಲ್ಲಿಗೆ ಬರುತ್ತೇವೆ ಅಂದೆ. ಆದರೆ ಅವರೇ ಕಾರಿನಲ್ಲಿ, ಟಿಟಿ ವಾಹನದಲ್ಲಿ ಕರೆದುಕೊಂಡು ಬರುತ್ತೇವೆ ಅಂದ್ರು. ಹಾಗಾಗಿ ನಾವೆಲ್ಲರೂ ಇಲ್ಲಿಗೆ ಬಂದಿದ್ದೆವು. ಕೆಲವು ಮಕ್ಕಳು ಆರಾಮಾಗಿ ಬಂದಿವೆ. ನಾಲ್ಕೈದು ಮಕ್ಕಳಿಗೆ ಮಾತ್ರ ವಾಂತಿ ಆಗಿದೆ ಎಂದು ಅಲ್ಲಿನ ಜನ ಹೇಳಿದ್ದರು. ಎಲ್ಲ ಮಕ್ಕಳನ್ನೂ ಟೆಸ್ಟ್​ ಮಾಡಿದ್ದಾರೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಬೆಂಗಳೂರು: ಹಾಸ್ಟೆಲ್​ನಲ್ಲಿ ಊಟ ಮಾಡುವಾಗ ರ್‍ಯಾಟ್ ಪಾಯ್ಸನ್ ಸ್ಪ್ರೇ, 19 ವಿದ್ಯಾರ್ಥಿಗಳು ಅಸ್ವಸ್ಥ - rat poison spray effect

Last Updated : Nov 29, 2024, 9:43 PM IST

ABOUT THE AUTHOR

...view details