ಮಂಗಳೂರು:ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಕಳೆದ ಇಪ್ಪತ್ತೈದು ದಿನಗಳಿಂದ ಅವರು ವ್ಹೀಲ್ ಚೇರ್ನಲ್ಲೇ ಓಡಾಟ ನಡೆಸುತ್ತಿದ್ದಾರೆ.
ನಗರದ ಕದ್ರಿ ಪಾರ್ಕ್ನೊಳಗಡೆ ವಾಕಿಂಗ್ಗೆಂದು ಬಂದಿದ್ದ ಮೊಯ್ದೀನ್ ಬಾವಾ ಅವರ ಕಾಲಿಗೆ ನಾಯಿ ಕಟ್ಟಿದೆ. ಕಾಲಿನ ನರಕ್ಕೆ ಗಾಯವಾಗಿ ಅವರು ನಡೆಯಲಾರದಂತಹ ಸ್ಥಿತಿ ತಲುಪಿದ್ದಾರೆ. ಕದ್ರಿ ಪಾರ್ಕ್ನೊಳಗಡೆ ಸಾಕು ನಾಯಿಗಳನ್ನು ತರುವಂತಿಲ್ಲ. ಆದರೆ ಬೀದಿನಾಯಿಗಳ ಕಾಟ ವಾಯುವಿಹಾರಿಗಳನ್ನು ಭೀತಿಗೆ ತಳ್ಳಿದೆ.