ಕರ್ನಾಟಕ

karnataka

ETV Bharat / state

ಸಿಎಂ ಸಿದ್ದರಾಮಯ್ಯಗೆ ಭಗವಂತ ದಶಬುದ್ದಿ ನೀಡಲಿ: ಯುಗಾದಿಯಂದು ವಿನೂತನವಾಗಿ ಬಿಜೆಪಿ ಟ್ವೀಟ್ - BJP on CM

ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯ ಬಿಜೆಪಿ ಎಕ್ಸ್​ ಜಾಲತಾಣ ಮೂಲಕ ಯುಗಾದಿ ಹಬ್ಬದ ಶುಭ ಕೋರಿ ವಿನೂತನ ರೀತಿಯಲ್ಲಿ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಭಗವಂತ ದಶಬುದ್ದಿ ನೀಡಲಿ
ಸಿಎಂ ಸಿದ್ದರಾಮಯ್ಯಗೆ ಭಗವಂತ ದಶಬುದ್ದಿ ನೀಡಲಿ

By ETV Bharat Karnataka Team

Published : Apr 9, 2024, 11:41 AM IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿರುವ ರಾಜ್ಯ ಬಿಜೆಪಿ, ಹೊಸ ಚಿಗುರು ಮೂಡುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ದಶಬುದ್ದಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿ ವಿನೂತನ ರೀತಿಯಲ್ಲಿ ಟೀಕಿಸಿದೆ.

ರಾಜ್ಯ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ಎಲೆ ಉದುರಿ ಹೊಸ ಚಿಗುರು ಮೂಡುವ ಸಮಯ ಬಂದಿದೆ. ಇನ್ನಾದರೂ ಭಗವಂತ ಅವರಿಗೆ ಸದ್ಬುದ್ಧಿ ಕರುಣಿಸಿ ಈ ಬದಲಾವಣೆ ತರಲೆಂದು ವಿಘ್ನ ವಿನಾಶಕ ವಿನಾಯಕನಲ್ಲಿ ಕರುನಾಡು ಮೊರೆಯಿಡುತ್ತಿದೆ ಎಂದು ಹೇಳಿದೆ.

✔ ಅರಾಜಕತೆಯನ್ನು ಹೋಗಲಾಡಿಸುವ ಬುದ್ಧಿ ನೀಡಲಿ
✔ ಕಾವೇರಿಯನ್ನು ತಮಿಳುನಾಡಿಗೆ ಹರಿಸದೆ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಸ್ಥೈರ್ಯ ತೋರಿಸಲಿ
✔ ಸುಳ್ಳು‌ ಹೇಳುವುದನ್ನು ಕಡಿಮೆ ಮಾಡುವ ಜ್ಞಾನ ನೀಡಲಿ
✔ ರೈತರಿಗೆ ಬರ ಪರಿಹಾರ ನೀಡುವಂತಹ ಗುಣ ಕರುಣಿಸಲಿ
✔ ಮಹಿಳೆಯರ ರಕ್ಷಣೆ ಮಾಡುವ ಹೊಣೆ ಹೊರುವಂತಾಗಲಿ
✔ ಭಯೋತ್ಪಾದಕರನ್ನು ಹತ್ತಿಕ್ಕುವ ಧೈರ್ಯ ತುಂಬಲಿ
✔ ಬಡವರ ಮೇಲೆ ಮಮಕಾರ ತೋರುವ ಮಾನವೀಯತೆ ದೊರೆಯಲಿ
✔ ಮೋಜು ಮಾಡದೆ ಕನ್ನಡಿಗರ ತೆರಿಗೆ ಹಣ ಉಳಿಸುವ ಜವಾಬ್ದಾರಿ ತೋರಲಿ
✔ ನಾಲಿಗೆ ಹರಿಬಿಡದೆ ಗೌರವ ನೀಡುವ ಸಂಸ್ಕಾರ ಸಿಗುವಂತಾಗಲಿ
✔ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ‌ ಕೆಲಸ ಬಿಡುವ ಸದ್ಗುಣ ನೀಡಲಿ

ಇಷ್ಟು ಬುದ್ಧಿಯನ್ನು ಆ ಭಗವಂತ ಕರುಣಿಸಿ‌ಬಿಟ್ಟರೆ, ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ-ಬೆಳೆಯಾಗಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಲಿದೆ ಎಂದು ರಾಜ್ಯ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ​ ಪೋಸ್ಟ್​ ಮಾಡಿದೆ.

ಇದನ್ನೂ ಓದಿ:ಶಿಕಾರಿಪುರ: ಸಹೋದರ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ - BY Vijayendra campaigning

ABOUT THE AUTHOR

...view details