ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ: ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು - Anjali murder case - ANJALI MURDER CASE

ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು, ಇಂದು ಆರೋಪಿ ಗಿರೀಶ್​ ಸಾವಂತನನ್ನು ಕರೆತಂದು ಸ್ಥಳ ಮಹಜರು ನಡೆಸಿದರು.

ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು
ಸಿಐಡಿ ಅಧಿಕಾರಿಗಳಿಂದ ಸ್ಥಳ ಮಹಜರು (ETV Bharat)

By ETV Bharat Karnataka Team

Published : May 24, 2024, 3:47 PM IST

ಹುಬ್ಬಳ್ಳಿ:ನಗರದಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು, ಇಂದು ಆರೋಪಿ ಗಿರೀಶ್​ ಸಾವಂತನನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ಅಂಜಲಿ ಹತ್ಯೆ ನಡೆದ ನಗರದ ವೀರಾಪೂರ ಓಣಿಯಲ್ಲಿರುವ ಮನೆಗೆ ಆರೋಪಿಯನ್ನು ಕರೆತಂದ ಸಿಐಡಿ ಅಧಿಕಾರಿಗಳು ಘಟನಾ ಸ್ಥಳ ಹಾಗೂ ಸುತ್ತಲಿನ ಪ್ರದೇಶ ಪರಿಶೀಲಿಸಿದರು. ಆರೋಪಿ ಗಿರೀಶ್, ಅಂಜಲಿ ಮನೆಯತ್ತ ಬರುತ್ತಿದ್ದಂತೆ ಅಂಜಲಿ‌ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆಗ ಸಿಐಡಿ ಅಧಿಕಾರಿಗಳು ಕುಟುಂಬಸ್ಥರನ್ನು ಸಮಾಧಾನಪಡಿಸಿದರು.

ಅಂಜಲಿ ಕೊಲೆ‌ಗೆ ಗಿರೀಶ್​ ಸಾವಂತ ಬಳಸಿದ್ದ ಚಾಕು ಇದುವರೆಗೂ ಪೊಲೀಸರಿಗೆ ಮತ್ತು ಸಿಐಡಿ ಅಧಿಕಾರಿಗಳಿಗೆ ಪತ್ತೆಯಾಗಿಲ್ಲ. ಹೀಗಾಗಿ ಇಂದು ವೀರಾಪೂರ ಓಣಿಯ ಸುತ್ತಾಮುತ್ತ ಚಾಕು ಪತ್ತೆಗೆ ಸಿಐಡಿ ಅಧಿಕಾರಿಗಳು ಹುಡುಕಾಟ ನಡೆಸಿದರು. ಬಿಜೆಪಿ ಯುವ ಮುಖಂಡ ಅನೂಪ ಬಿಜವಾಡ ಮನೆಯಲ್ಲಿ ಸುಮಾರು ನಾಲ್ಕು ಗಂಟೆಯವರೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

ಇದನ್ನೂ ಓದಿ:ಬಾತ್​ರೂಮ್​ನಲ್ಲಿ ಯುವತಿಯ ಶವ ಪತ್ತೆ ಪ್ರಕರಣ: 2 ಸಾವಿರ ರೂಪಾಯಿಗೆ ಕೃತ್ಯ ಎಸಗಿದ್ದ ಅಪ್ರಾಪ್ತನ ಬಂಧನ! - Woman Murder Case

ABOUT THE AUTHOR

...view details