ಕರ್ನಾಟಕ

karnataka

ETV Bharat / state

ಬೆಂಗಳೂರು, ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು: ಹೀಗಿದೆ ಟಿಕೆಟ್​ ದರದ ಮಾಹಿತಿ - SPECIAL TRAIN TO KUMBHMELA

ಕುಂಭಮೇಳಕ್ಕೆ ತೆರಳು ಭಕ್ತರಿಗೆ ಸಹಾಯವಾಗಲು ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ವಿಶೇಷ ರೈಲು ಪ್ರಕಟಿಸಲಾಗಿದೆ.

Special Train From Bengaluru and Hubballi to Kumbh Mela
ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು (ETV Bharat)

By ETV Bharat Karnataka Team

Published : Jan 19, 2025, 5:35 PM IST

ಹುಬ್ಬಳ್ಳಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ವಿಶೇಷ ರೈಲನ್ನು ಪ್ರಕಟಿಸಿದೆ.

ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ:

  • ರೈಲು ಸಂಖ್ಯೆ 07379 - ಎಸ್ಎಸ್ಎಸ್ ಹುಬ್ಬಳ್ಳಿ-ತುಂಡ್ಲಾ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 20 ರಂದು (ಸೋಮವಾರ) 00:45 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಜನವರಿ 22 ರಂದು (ಬುಧವಾರ) 02:30 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
  • ರೈಲು ಸಂಖ್ಯೆ 07380 - ತುಂಡ್ಲಾ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 23 ರಂದು (ಗುರುವಾರ) 16:00 ಗಂಟೆಗೆ ತುಂಡ್ಲಾದಿಂದ ಹೊರಟು, ಜನವರಿ 25 ರಂದು (ಶನಿವಾರ) 18:40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
  • ರೈಲು ಸಂಖ್ಯೆ 07381 - ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು ಫೆಬ್ರುವರಿ 6 ರಂದು (ಗುರುವಾರ) 20:10 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಫೆಬ್ರುವರಿ 8 ರಂದು (ಶನಿವಾರ) 20:15 ಗಂಟೆಗೆ ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಕ್ಕೆ ತಲುಪಲಿದೆ.
  • ರೈಲು ಸಂಖ್ಯೆ 07382 ತುಂಡ್ಲಾ-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್​ಪ್ರೆಸ್ ರೈಲು ಫೆಬ್ರುವರಿ 9 ರಂದು (ಭಾನುವಾರ) 16:20 ಗಂಟೆಗೆ ತುಂಡ್ಲಾದಿಂದ ಹೊರಟು, ಫೆಬ್ರುವರಿ 11 ರಂದು (ಮಂಗಳವಾರ) 18:40 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಮೇಲಿನ ಈ ಎರಡೂ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ,ಕರಾಡ, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ನರಸಿಂಗಪುರ, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್‌ಪುರ್, ಪ್ರಯಾಗ್‌ರಾಜ್ ಜಂಕ್ಷನ್, ಫತೇಪುರ್, ಗೋವಿಂದಪುರಿ ಮತ್ತು ಇಟಾವಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ವಾರಕ್ಕೊಮ್ಮೆ ಎಕ್ಸ್​ಪ್ರೆಸ್ ರೈಲು:ರೈಲು ಸಂಖ್ಯೆ 17323 Banaras Weekly Express ಜನವರಿ 17ರಂದು ಹುಬ್ಬಳ್ಳಿಯಿಂದ ಸಂಜೆ 6.15ಕ್ಕೆ ಹೊರಟು ಎರಡು ದಿನಗಳ ಬಳಿಕ ಜ.19ರಂದು ಬೆಳಗ್ಗೆ 8.45ಕ್ಕೆ ಬನಾರಸ್​ಗೆ ತಲುಪಲಿದೆ. ಹಾಗೆಯೇ, ಜನವರಿ 24ರಂದು ಸಂಜೆ 6.15ಕ್ಕೆ ಹೊರಟ ರೈಲು (17323), ಜ.26ರಂದು ಬೆಳಗ್ಗೆ 8.45ಕ್ಕೆ ಬನಾರಸ್​​ ತಲುಪಲಿದೆ.

ಟಿಕೆಟ್​ ದರ ಈ ಕೆಳಗಿನಂತಿದೆ:

ಬೆಂಗಳೂರಿನಿಂದ ಕುಂಭಮೇಳ

ಸ್ಲೀಪರ್ ಕ್ಲಾಸ್: 850 ರೂ. - 1000 ರೂ.

ಥರ್ಡ್ ಎಸಿ (3ಎ): 2,300 ರೂ. –12,000 ರೂ.

ಸೆಕೆಂಡ್ ಎಸಿ (2ಎ): 3,500 ರೂ. –16,000 ರೂ.

ಫಸ್ಟ್ ಕ್ಲಾಸ್ (1ಎ): 6,000 ರೂ. –26,000 ರೂ.

ಹುಬ್ಬಳ್ಳಿ ಜಂಕ್ಷನ್​ನಿಂದ ಪ್ರಯಾಗ್​ರಾಜ್​ ಛೋಕಿ

ಸ್ಲೀಪರ್ ಕ್ಲಾಸ್: 800 ರೂ. –950 ರೂ.

ಥರ್ಡ್ ಎಸಿ (3ಎ):2,100 ರೂ. –10,000 ರೂ.

ಸೆಕೆಂಡ್ ಎಸಿ (2ಎ): 3,200 ರೂ. –14,000 ರೂ.

ಫಸ್ಟ್ ಕ್ಲಾಸ್ (1ಎ): 5,500 ರೂ. –23,000 ರೂ.

ಸಿಕಂದರಾಬಾದ್‌ನಿಂದ ಮಹಾ ಕುಂಭಮೇಳಕ್ಕೆ ವಿಶೇಷ ರೈಲು: ರೈಲು ಫೆಬ್ರವರಿ 15 ರಂದು ಸಿಕಂದರಾಬಾದ್‌ನಿಂದ ಹೊರಟು ಫೆಬ್ರವರಿ 22 ರಂದು ಹೈದರಾಬಾದ್‌ಗೆ ಹಿಂತಿರುಗಲಿದೆ. ಈ 8 ದಿನಗಳ ಪ್ರವಾಸದಲ್ಲಿ ವಾರಾಣಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್‌ಗೆ ಭೇಟಿ ನೀಡುವಂತೆ IRCTC ಪ್ಯಾಕೇಜ್ ವಿನ್ಯಾಸಗೊಳಿಸಿದೆ. ಎಕಾನಾಮಿಕ್​ ಕ್ಲಾಸ್​ನಲ್ಲಿ ವಯಸ್ಕರಿಗೆ ರೂ. 23,035, 11 ವರ್ಷದೊಳಗಿನ ಮಕ್ಕಳಿಗೆ ರೂ. 22,140 ಟಿಕೆಟ್ ಶುಲ್ಕ ನಿಗದಿಪಡಿಸಲಾಗಿದೆ. ರೈಲು 15 ರಂದು ಸಿಕಂದರಾಬಾದ್‌ನಿಂದ ಹೊರಟು 18 ರಂದು ಉತ್ತರಪ್ರದೇಶದ ಪ್ರಯಾಗರಾಜ್ ತಲುಪಲಿದೆ.

19 ರಂದು ವಾರಣಾಸಿಯ ಕಾಶಿವಿಶ್ವನಾಥ, ಕಾಶಿ ವಿಶಾಲಾಕ್ಷಿ ಮತ್ತು ಅನ್ನಪೂರ್ಣದೇವಿ ದೇವಸ್ಥಾನಗಳಿಗೆ ಕರೆದೊಯ್ಯಲಿದೆ. ಪ್ರಯಾಣಿಕರು ಅದೇ ದಿನ ವಿಶ್ರಾಂತಿ ಪಡೆದು ಬಳಿಕ 20ರಂದು ಅಯೋಧ್ಯೆಗೆ ತಲುಪಲಿದ್ದಾರೆ. ಶ್ರೀರಾಮ ಜನ್ಮಭೂಮಿ ಮತ್ತು ಹನುಮಾನ್ ಗರ್ಹಿಗೆ ಭೇಟಿ ನೀಡಿದ ನಂತರ ರೈಲು ಹಿಂದಿರುಗಲಿದೆ. 22ರಂದು ರಾತ್ರಿ ಸಿಕಂದರಾಬಾದ್ ತಲುಪಲಿದೆ. ಈ ರೈಲು ಸಿಕಂದರಾಬಾದ್, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ಸಾಮರ್ಲಕೋಟ, ತುನಿ, ದುವ್ವಾಡ, ಪೆಂಡುರ್ತಿ, ವಿಜಯನಗರಂ, ಶ್ರೀಕಾಕುಲಂ ರಸ್ತೆ, ಪಲಾಸ, ಬ್ರಹ್ಮಪುರ (ಬರಂಪುರಂ), ಛತ್ರಪುರ, ಕುರ್ದರೋಡ್, ಭುವನೇಶ್ವರ್, ಕಟಕ್, ಭದ್ರಕ್ ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ:ಕುಂಭಮೇಳಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು: ಹೀಗಿದೆ ವೇಳಾಪಟ್ಟಿ

ABOUT THE AUTHOR

...view details