ಕರ್ನಾಟಕ

karnataka

ETV Bharat / state

ದಸರಾ ಆನೆಗಳ ಮಾವುತರು, ಕಾವಾಡಿಗರಿಗೆ ವಿಶೇಷ ಉಪಹಾರ ಬಡಿಸಿದ ಸಚಿವ ಮಹದೇವಪ್ಪ - Mysuru Dasara

ಮೈಸೂರು ದಸರಾ ಹಬ್ಬಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗರ ಕುಟುಂಬಸ್ಥರಿಗೆ ಇಂದು ಜಿಲ್ಲಾಡಳಿತ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ದಸರಾ ಆನೆಗಳ ಮಾವುತರು, ಕಾವಾಡಿಗರಿಗೆ ವಿಶೇಷ ಉಪಹಾರ
ದಸರಾ ಆನೆಗಳ ಮಾವುತರು, ಕಾವಾಡಿಗರಿಗೆ ವಿಶೇಷ ಉಪಹಾರ (ETV Bharat)

By ETV Bharat Karnataka Team

Published : Sep 21, 2024, 2:13 PM IST

ಮೈಸೂರು: ಮೈಸೂರು ದಸರಾ ಅಂಗವಾಗಿ ಮಾವುತರು, ಕಾವಾಡಿಗರ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಅರಮನೆ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್. ಸಿ. ಮಹದೇವಪ್ಪ ಅವರು ಮಾವುತರಿಗೆ ಉಪಹಾರ ಬಡಿಸಿದರು.

ಬಳಿಕ ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಮಾವುತರು ಹಾಗೂ ಕಾವಾಡಿಗರ ಮಕ್ಕಳಿಗೆ ತಾತ್ಕಾಲಿಕವಾಗಿ ತೆರೆದಿರುವ ಶಾಲೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾವುತ ಮತ್ತು ಕಾವಾಡಿಗರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಸಚಿವರು ಪರಿಶೀಲನೆ ನಡೆಸಿದರು.

ಯುವ ಸಂಭ್ರಮ ಪೋಸ್ಟರ್ (ETV Bharat)

ಮೈಸೂರು ದಸರಾ 2024 - ಯುವ ಸಂಭ್ರಮ ಪೋಸ್ಟರ್ ಹಾಗೂ ವೆಬ್​ಸೈಟ್ ಬಿಡುಗಡೆ:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ - 2024 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ. ಇಂದು ಯುವ ಸಂಭ್ರಮದ ಪೋಸ್ಟರ್ ಬಿಡುಗಡೆ, ದಸರಾ ವೆಬ್​ಸೈಟ್​​ಗೆ ಚಾಲನೆ ನೀಡಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ಯುವ ಸಂಭ್ರಮದ ಪೋಸ್ಟರ್ ಹಾಗೂ ದಸರಾ ವೆಬ್​ಸೈಟ್ ಬಿಡುಗಡೆಗೊಳಿಸಿದರು.

ದಸರಾ ಆನೆಗಳ ಮಾವುತರು, ಕಾವಾಡಿಗರಿಗೆ ವಿಶೇಷ ಉಪಹಾರ ಬಡಿಸಿದ ಸಚಿವರು (ETV Bharat)

ಈ ವೇಳೆ ನರಸಿಂಹ ರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನು ಶುಕ್ರವಾರವಷ್ಟೇಮೈಸೂರು ದಸರಾ 2024ರ ಪೋಸ್ಟರ್​ಅನ್ನು ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.‌ ತಗಂಡಗಿ ಹಾಗೂ ಇತರರು ಬಿಡುಗಡೆ ಮಾಡಿದ್ದರು. ಈ ವೇಳೆ ದಸರಾ ಸಿದ್ಧತೆಗಳ ಕುರಿತಂತೆ 19 ದಸರಾ ಉಪ ಸಮಿತಿಗಳ ಸಭೆ ನಡೆಸಿದ್ದರು.

ಅಕ್ಟೋಬರ್ 3 ರಂದು ದಸರಾ ಉದ್ಘಾಟನೆ:ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ಹೆಸರಾಂತ ಹಿರಿಯ ಸಾಹಿತಿ ಹಂ.ಪಾ. ನಾಗರಾಜಯ್ಯ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಶುಕ್ರವಾವರಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಮೈಸೂರು ಅರಮನೆ ಆವರಣದಲ್ಲಿ ದಿಢೀರ್​ ಕಾದಾಟಕ್ಕಿಳಿದು ಹೊರಬಂದ ಆನೆಗಳು: ಬೆಚ್ಚಿಬಿದ್ದ ಜನ, ಮಾವುತರು! - Two elephants fight

ABOUT THE AUTHOR

...view details