ಕರ್ನಾಟಕ

karnataka

ETV Bharat / state

ಸೋಷಿಯಲ್​ ಮೀಡಿಯಾಗಳಲ್ಲಿ ಗೀಚುವವರನ್ನು, ಪ್ರಶ್ನಿಸುವವರನ್ನು ಇತಿಹಾಸ ನೆನಪಿಡಲ್ಲ: ಸ್ಪೀಕರ್​ ಯು ಟಿ ಖಾದರ್

ರಾಜ್ಯ ಬಜೆಟ್​​ ಅಧಿವೇಶನ, ಇತರ ವಿಚಾರಗಳ ಬಗ್ಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾಹಿತಿ ನೀಡಿದರು.

speaker-ut-khader-reacts-to-criticism-on-social-media
ಸಾಮಾಜಿಕ ಮಿಡಿಯಾಗಳಲ್ಲಿ ಗೀಚುವವರನ್ನು, ಪ್ರಶ್ನೆ ಮಾಡುವವರನ್ನು ಇತಿಹಾಸ ನೆನಪಿಡಲ್ಲ: ಖಾದರ್

By ETV Bharat Karnataka Team

Published : Feb 5, 2024, 6:05 PM IST

Updated : Feb 5, 2024, 6:53 PM IST

ಸ್ಪೀಕರ್​ ಯು ಟಿ ಖಾದರ್ ಪ್ರತಿಕ್ರಿಯೆ

ಬೆಂಗಳೂರು: ''ಸಾಮಾಜಿಕ ಮಾಧ್ಯಮಗಳಲ್ಲಿ ಗೀಚುವವರನ್ನು ಇತಿಹಾಸವು ನೆನಪಿಡಲ್ಲ. ಪ್ರಶ್ನೆ ಕೇಳುವವರನ್ನೂ ಇತಿಹಾಸ ನೆನಪಿಡುವುದಿಲ್ಲ'' ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಹರಕೆ ‌ಕೊಲಾದಲ್ಲಿ ಭಾಗಿಯಾದ ಸ್ಪೀಕರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದರು. ಇಂತವರನ್ನೆಲ್ಲ ಇತಿಹಾಸ ನೆನಪಿಗೆ ಇಟ್ಟುಕೊಳ್ಳುವುದಿಲ್ಲ. ಯಾರು ಕೆಲಸ ಮಾಡುತ್ತಾರೋ, ಯಾರು ಉತ್ತರ ಕೊಡ್ತಾರೋ ಅವರನ್ನು ಮಾತ್ರ ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಎಂದರು.

ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಯಾರೋ ಒಬ್ಬ ಗೀಚಿದ್ರೆ, ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆಲ್ಲ ನಾವು ಆದ್ಯತೆ ಕೊಡಬಾರದು. ಎಲ್ಲಾ ಧರ್ಮಕ್ಕೆ ಗೌರವ ಕೊಡಬೇಕು ಎಂದು ಹೇಳಿದರು.

ಶಾಸಕರಿಗೆ ಉಚಿತ ಉಪಹಾರ: ಫೆಬ್ರವರಿ 12 ರಿಂದ 23ರ ವರೆಗೆ ರಾಜ್ಯ ಬಜೆಟ್ ಅಧಿವೇಶನ ನಡೆಯಲಿದೆ. ಫೆ.12 ರಂದು ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಫೆ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಸ್ಪೀಕರ್​​ ತಿಳಿಸಿದರು.

ಶಾಸಕರಿಗೆ ಕಾರ್ಯಾಗಾರ: ಒಟ್ಟು 8 ದಿನಗಳ ಕಾಲ‌ ಪ್ರಶ್ನೋತ್ತರ ಕಲಾಪ ನಡೆಯಲಿದೆ. ಫೆ. 9ರಂದು ಶಾಸಕರಿಗೆ ಒಂದು ದಿನದ ಕಾರ್ಯಾಗಾರ ಇರಲಿದೆ.‌ ಐಐಎ(ಎಂ)ನಲ್ಲಿ ತರಬೇತಿ ಆಯೋಜಿಸಲಾಗಿದೆ. ಬಜೆಟ್, ಹಣಕಾಸು ಬಿಲ್ ಬಗ್ಗೆ ಸದಸ್ಯರುಗಳಿಗೆ ತರಬೇತಿ ನೀಡಲಾಗುವುದು. ಮಾಧ್ಯಮದವರಿಗೂ ತರಬೇತಿ ನೀಡಲಾಗುತ್ತದೆ ಎಂದರು.

ಶಾಸಕರಿಗೆ ಬೆಳಗ್ಗೆ 8 ರಿಂದ 9 ಗಂಟೆವರೆಗೆ ಉಚಿತ ಉಪಹಾರ ವ್ಯವಸ್ಥೆ ಮಾಡಿಸಲಾಗಿದೆ. ದಿನಾಲೂ ಹೊಸ ತಿನಿಸುಗಳನ್ನು ಪೂರೈಸಲಾಗುವುದು. ಬೆಳಗ್ಗೆ ನೇರವಾಗಿ ಅವರು ಅಧಿವೇಶನಕ್ಕೆ ಬರಬೇಕು. ಈ ಬಾರಿ ಬೆಳಗ್ಗೆ 9 ಗಂಟೆಗೆ ವಿಧಾನಸಭೆ ಕಲಾಪ ಆರಂಭವಾಗಲಿದೆ.‌ ಹೆಚ್ಚಿನ ಶಾಸಕರಿಗೆ ಚರ್ಚೆಗೆ ಅವಕಾಶ ಸಿಗಲಿದೆ ಎಂದು ಸ್ಪೀಕರ್​ ಖಾದರ್ ಮಾಹಿತಿ ನೀಡಿದರು.

ಇದನ್ನೂ ಓದಿ:ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ

Last Updated : Feb 5, 2024, 6:53 PM IST

ABOUT THE AUTHOR

...view details