ಹುಬ್ಬಳ್ಳಿ:ಮಳೆ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯು ಕೆಲವು ರೈಲುಗಳ ಆಗಮನದ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.
1. ಜೂನ್ 26ರಿಂದ ಅಕ್ಟೋಬರ್ 30, 2024ರವರೆಗೆ ಅನ್ವಯವಾಗುವಂತೆ ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಮುರುಡೇಶ್ವರ ನಿಲ್ದಾಣಕ್ಕೆ ಮಧ್ಯಾಹ್ನ 12:55 ಗಂಟೆಯ ಬದಲು 13:20 ಗಂಟೆಗೆ ಆಗಮಿಸಲಿದೆ.
2. ಜೂನ್ 27ರಿಂದ ಅಕ್ಟೋಬರ್ 30, 2024ರವರೆಗೆ ಅನ್ವಯವಾಗುವಂತೆ ರೈಲು ಸಂಖ್ಯೆ 16595 ಕೆಎಸ್ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಕಾರವಾರ ನಿಲ್ದಾಣಕ್ಕೆ ಬೆಳಗ್ಗೆ 08:25 ಗಂಟೆಯ ಬದಲು 08:40ಕ್ಕೆ ಆಗಮಿಸಲಿದೆ.
ಸುಗಮ ಮತ್ತು ತೊಂದರೆರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಬೇಕು.
ರೈಲು ಸಂಚಾರ ತಾತ್ಕಾಲಿಕ ರದ್ದು ಮುಂದುವರಿಕೆ: ಗುಂಟೂರು ವಿಭಾಗದಲ್ಲಿ ಸುರಕ್ಷತಾ ಸಂಬಂಧಿತ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಈ ಮೊದಲು ತಾತ್ಕಾಲಿಕವಾಗಿ ರೈಲು ಸಂಚಾರ ರದ್ದುಪಡಿಸಿದ್ದನ್ನು ಮುಂದುವರಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಸೂಚನೆ ನೀಡಿದೆ.
1. ರೈಲು ಸಂಖ್ಯೆ 17329 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮತ್ತೆ ಜುಲೈ 14, 2024ರವರೆಗೆ ರದ್ದು ಮಾಡಲಾಗಿದೆ. ಈ ಮೊದಲು ಜೂನ್ 30, 2024ರವರೆಗೆ ರದ್ದುಗೊಳಿಸಲಾಗುತ್ತಿದೆ ಎಂದು ಸೂಚಿಸಲಾಗಿತ್ತು.
2. ರೈಲು ಸಂಖ್ಯೆ 17330 ವಿಜಯವಾಡ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮತ್ತೆ ಜುಲೈ 15, 2024ರವರೆಗೆ ರದ್ದು ಮಾಡಲಾಗಿದೆ. ಈ ಮೊದಲು ಜುಲೈ 1, 2024ರವರೆಗೆ ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿತ್ತು.
ಭಾಗಶಃ ರದ್ದಾದ ರೈಲು ಸಂಚಾರ ಪುನರಾರಂಭ:ರೈಲು ಸಂಖ್ಯೆ 07337/07338 ಎಸ್ಎಸ್ಎಸ್ ಹುಬ್ಬಳ್ಳಿ-ಗುಂತಕಲ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳನ್ನು ಏಪ್ರಿಲ್ 30, 2024ರಿಂದ ಮುಂದಿನ ಆದೇಶದವರೆಗೆ ತೋರಣಗಲ್ಲು ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ಈ ಹಿಂದೆ ಸೂಚಿಸಲಾಗಿತ್ತು. ಇದೀಗ ಜುಲೈ 1, 2024ರಿಂದ ಜಾರಿಗೆ ಬರುವಂತೆ ಗುಂತಕಲ್ ನಿಲ್ದಾಣದವರೆಗೆ ಓಡಿಸಲು ಪುನರಾರಂಭ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಪ್ರಯಾಣಿಕರೇ ಗಮನಿಸಿ: ರೈಲ್ವೆ ಸೇವೆಯಲ್ಲಿ ಹಲವು ಬದಲಾವಣೆ, ಕೆಲ ರೈಲುಗಳ ಸಂಚಾರ ರದ್ದು - Train Services