ಕರ್ನಾಟಕ

karnataka

ETV Bharat / state

ಮುಡಾ ಹಗರಣ ‘CBI’ ತನಿಖೆಗೆ ಕೋರಿದ್ದ ಅರ್ಜಿ ವಿಚಾರಣೆ ಜ.27ಕ್ಕೆ ಮುಂದೂಡಿಕೆ - MUDA SCAM CASE

ಧಾರವಾಡ ಹೈಕೋರ್ಟ್​ನಲ್ಲಿ ಇಂದು ಮುಡಾ ಕೇಸ್ ತನಿಖೆ ಸಿಬಿಐಗೆ ವಹಿಸುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಹೈಕೋರ್ಟ್​ ಅರ್ಜಿ ವಿಚಾರಣೆಯನ್ನ ಜ.27ಕ್ಕೆ ಮುಂದೂಡಿದೆ.

ಧಾರವಾಡ ಹೈಕೋರ್ಟ್, ಸ್ನೇಹಮಯಿ ಕೃಷ್ಣ
ಧಾರವಾಡ ಹೈಕೋರ್ಟ್, ಸ್ನೇಹಮಯಿ ಕೃಷ್ಣ (ETV Bharat)

By ETV Bharat Karnataka Team

Published : Jan 15, 2025, 11:30 AM IST

Updated : Jan 15, 2025, 12:40 PM IST

ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಜ.27ಕ್ಕೆ ಮುಂದೂಡಿದೆ.

ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತಕುಮಾರ ಮಾತನಾಡಿ, "ಮುಡಾ ಹಗರಣ ಸಂಬಂಧ ಎರಡ್ಮೂರು ಬಾರಿ ವಿಚಾರಣೆ ಬೆಂಗಳೂರನಲ್ಲಿ ನಡೆದಿತ್ತು. ಮುಡಾ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್‌ಐಆರ್ ಆಗಿದೆ. ಆ ತನಿಖೆ ಪ್ರಮಾಣಿಕವಾಗಿ ಆಗಬೇಕೆಂದು ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಲೋಕಾಯುಕ್ತ ರಾಜ್ಯ ಸರ್ಕಾರದ ಕೈ ಗೊಂಬೆಯಂತೆ ಕೆಲಸ ಮಾಡುತ್ತಿದೆ. ಹೀಗಾಗಿ ನಾವು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದೆವು" ಎಂದು ತಿಳಿಸಿದರು.

"ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೇಳಿದ್ದೆವು. ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ನಡೆದ ವಿಚಾರಣೆಯಲ್ಲಿ ಮಣಿಂದರ್​ ಸಿಂಗ್ ಅವರು ಸುದೀರ್ಘವಾಗಿ ವಾದ ಮಂಡಿಸಿದ್ದಾರೆ. ವಾದ ಆಲಿಸಿದ ನ್ಯಾಯಪೀಠ ಜ.27ಕ್ಕೆ ವಿಚಾರಣೆಯನ್ನು ಮುಂದೂಡಿದೆ" ಎಂದರು.

ಸ್ನೇಹಮಯಿ ಕೃಷ್ಣ, ವಕೀಲ ವಸಂತಕುಮಾರ ಪ್ರತಿಕ್ರಿಯೆ (ETV Bharat)

ಸಿಎಂ ಸಿದ್ದರಾಮಯ್ಯ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಿಡಿಯೋ ಕಾಲ್​ ಮೂಲಕ ವಾದ ಮಂಡಿಸಿದರು. ಕೋರ್ಟ್ ಒಳಗೆ ಹೋಗುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, "ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿತ್ತು. ಈ ಸಂಬಂಧ ದೂರು ದಾಖಲು ಮಾಡಿದ್ದೆ. ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಇದರಲ್ಲಿ ಭಾಗಿಯಾಗಿದೆ. ಲೋಕಾಯುಕ್ತ ಹಗರಣದ ಬಗ್ಗೆ ಸೂಕ್ತ ತನಿಖೆ ಆಗುವುದಿಲ್ಲ. ಹೀಗಾಗಿ ಹಗರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಕೇಳಿದ್ದೇನೆ" ಎಂದಿದ್ದರು.

"ಅರ್ಜಿ ಬಗ್ಗೆ ಸಾಕಷ್ಟು ವಿಚಾರಣೆ ಆಗಿದೆ. ಇವತ್ತು ಅಂತಿಮ ಆದೇಶ ಹೊರ ಬರುವ ಸಾಧ್ಯತೆ ಇದೆ. ಜಡ್ಜ್ ಇಂದು ಧಾರವಾಡ ಪೀಠಕ್ಕೆ ಬಂದಿದ್ದಾರೆ. ಹೀಗಾಗಿ ಇಲ್ಲಿ ವಿಚಾರಣೆ ನಡೆಯಲಿದೆ. ನನ್ನ ಪರ ವಕೀಲರಾದ ಮಣಿಂದರ್​ ಸಿಂಗ್ ಬಂದಿದ್ದಾರೆ. ಎಲ್ಲರೂ ಇಲ್ಲಿಗೆ ಬಂದಿದ್ದೇವೆ. ನ್ಯಾಯಾಲಯ ಮುಡಾ ಹಗರಣದ ತನಿಖೆಯನ್ನು ಸಿಬಿಐ ನೀಡುತ್ತದೆ" ಎಂಬ ಭರವಸೆ ಇದೆ ಎಂದು ತಿಳಿಸಿದ್ದರು.

ಇದನ್ನೂ ಓದಿ:ರಕ್ಷಣೆ ಕೋರಿ ಪ್ರಧಾನಿ‌, ಗೃಹ ಸಚಿವರಿಗೆ ಪತ್ರ ಬರೆದ ಮುಡಾ ದೂರುದಾರ ಸ್ನೇಹಮಯಿ ಕೃಷ್ಣ

ಇದನ್ನೂ ಓದಿ:20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ರೂ ಯಾಕಿಂಗಾಯ್ತು?: ಸಂಸದರು, ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

Last Updated : Jan 15, 2025, 12:40 PM IST

ABOUT THE AUTHOR

...view details