ವಿಜಯಪುರ:ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಬಿದ್ದ ಪರಿಣಾಮ ಆರು ಜನರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರ ಮೃತದೇಹ ಪತ್ತೆಯಾಗಿದೆ.
ಕೃಷ್ಣಾ ನದಿ ತಟದಲ್ಲಿ ಜನರು ಇಸ್ಪೀಟ್ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಮಾಹಿತಿಯನ್ನು ಸ್ಥಳೀಯರು ಈ ಗುಂಪಿಗೆ ನೀಡಿದ್ದಾರೆ. ಪೊಲೀಸರು ಬರುತ್ತಾರೆಂಬ ಭಯದಿಂದ ನದಿಯ ನಡುಗಡ್ಡೆಯತ್ತ ತೆಪ್ಪದಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ನದಿಯಲ್ಲಿ ತೆರಳುತ್ತಿರುವ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ತೆಪ್ಪ ಮುಗಿಚಿ ಬಿದ್ದಿದೆ. ಈ ಗುಂಪಿನಲ್ಲಿದ್ದ ಇಬ್ಬರು ಈಜಿ ದಡ ಸೇರಿದ್ದಾರೆ.