ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹಿಟ್ಲರ್'ನನ್ನೂ ಮೀರಿಸುವ ಆಡಳಿತವಿದೆ: ಪ್ರಹ್ಲಾದ್ ಜೋಶಿ - Prajwal video case - PRAJWAL VIDEO CASE

ದೇವರಾಜೇಗೌಡ ತಮಗಿರೋ ಮಾಹಿತಿಯನ್ನು ಎಲ್ಲಿ ಹೇಳಬಹುದು ಎಂಬ ಕಾರಣಕ್ಕೆ ಬಂಧನ ಮಾಡಲಾಗಿದೆ. ಎಸ್ಐಟಿ ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

Union Minister Prahlad Joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Etv Bharat)

By ETV Bharat Karnataka Team

Published : May 11, 2024, 6:16 PM IST

Updated : May 11, 2024, 8:25 PM IST

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿದರು. (ETV Bharat)

ಹುಬ್ಬಳ್ಳಿ:ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪಾತ್ರದ ಬಗ್ಗೆ ಸಾಕ್ಷಿಯನ್ನು ಹೇಳಿದ ಕಾರಣ ದೇವರಾಜೇಗೌಡನ ಬಂಧನವಾಗಿದೆ. ಅದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯದಲ್ಲಿ ಹಿಟ್ಲರ್​​ನನ್ನು ಮೀರಿಸೋ ಆಡಳಿತವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೀಗ ದೇವರಾಜೇಗೌಡನ ಬಂಧನದಲ್ಲಿ ರಾಜಕಾರಣವಿದೆ. ಸ್ವಾರ್ಥ ರಾಜಕಾರಣ, ಪಕ್ಷ ರಾಜಕಾರಣ ಇದರಲ್ಲಿ ಸ್ಪಷ್ಟವಾಗಿದೆ. ಈ ಮೂಲಕ ವಿರೋಧಿಗಳನ್ನು ಮುಗಿಸೋದು ಸ್ಪಷ್ಟವಾಗಿದೆ ಎಂದರು‌.

ಇನ್ನು ಕಿಡ್ನಾಪ್ ಪ್ರಕರಣದಲ್ಲಿ ಪ್ರಶ್ನಾರ್ಥಕ ಚಿಹ್ನೆಯಿದೆ. ಯಾಕೆ ರೇವಣ್ಣ ಅವರನ್ನು ಅರೆಸ್ಟ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಯಾಕೆ ಬಿಟ್ಟಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಇದೀಗ ದೇವರಾಜೇಗೌಡ ತಮಗಿರೋ ಮಾಹಿತಿಯನ್ನು ಎಲ್ಲಿ ಹೇಳಬಹುದು ಎಂಬ ಕಾರಣಕ್ಕೆ ಬಂಧನ ಮಾಡಲಾಗಿದೆ. ಎಸ್ಐಟಿ ಕಾಂಗ್ರೆಸ್ ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ಇಂದು ಬೆಂಗಳೂರಿನಲ್ಲಿ ಸಭೆ ಇದೆ. ದೇವರಾಜೇಗೌಡ ಬಂಧನ ವಿಚಾರದ ಬಗ್ಗೆ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

ಇದೀಗ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ಡಿಕೆ‌ ಶಿವಕುಮಾರ್ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೋ ಎಂಬ ಕಾರಣಕ್ಕೆ ದೇವರಾಜೇಗೌಡರ ಬಂಧನವಾಗಿದೆ. ಯಾರನ್ನೋ ರಕ್ಷಣೆ ಮಾಡೋದು, ಒಂದು ಪಕ್ಷ ಅಥವಾ ಒಂದು ಕುಟುಂಬ ಮುಗಿಸೋ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಮೈತ್ರಿ ವಿಚಾರವಾಗಿ ನನಗೆ ಯಾವ ಮಾಹಿತಿಯಿಲ್ಲ, ಸಭೆಯಲ್ಲಿ ತಿರ್ಮಾನ ಆಗಲಿದೆ ಎಂದರು.

ಇದನ್ನೂಓದಿ:ಯಾರನ್ನೂ ರಾಜಕೀಯವಾಗಿ ಸಮಾಧಿ ಮಾಡಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : May 11, 2024, 8:25 PM IST

ABOUT THE AUTHOR

...view details