ಕರ್ನಾಟಕ

karnataka

ETV Bharat / state

ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್​ಐಟಿ ಚಿಂತನೆ - prajwal revanna - PRAJWAL REVANNA

ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್ಐಟಿ ಚಿಂತನೆ ನಡೆಸಿದೆ. ಇದಕ್ಕಾಗಿ ಕಾನೂನು ಪ್ರಕ್ರಿಯೆಗಳತ್ತ ಗಮನಹರಿಸಿರುವುದಾಗಿ ಎಸ್​ಐಟಿ ಮೂಲಗಳು ತಿಳಿಸಿವೆ.

ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್​ಐಟಿ ಚಿಂತನೆ
ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಎಸ್​ಐಟಿ ಚಿಂತನೆ (ETV Bharat)

By ETV Bharat Karnataka Team

Published : May 13, 2024, 8:51 PM IST

ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಬಗ್ಗೆ ಸುಳಿವು ಇನ್ನೂ ಎಸ್ಐಟಿಗೆ ಸಿಕ್ಕಿಲ್ಲ. ಈ ಹಿನ್ನೆಲೆ ಅವರಿಗೆ ರೆಡ್ ಕಾರ್ನರ್ ನೋಟಿಸ್ ನೀಡಲು ಚಿಂತನೆ ನಡೆಸಿರೋದಾಗಿ ಎಸ್​ಐಟಿ ಮೂಲಗಳು ತಿಳಿಸಿವೆ.

ಪ್ರಜ್ವಲ್ ರೇವಣ್ಣ ಪತ್ತೆಗೆ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲು ಕಾನೂನು ಪ್ರಕ್ರಿಯೆಗಳನ್ನ ಪೂರ್ಣಗೊಳಿಸಬೇಕಿದೆ. ಏಕಾಏಕಿ ಈ ನೋಟಿಸ್​ ಜಾರಿ ಅಸಾಧ್ಯ. ಹೀಗಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪದಡಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ದೋಷಾರೋಪ ಪಟ್ಟಿ ಸಲ್ಲಿಸದಿದ್ದಲ್ಲಿ ರೆಡ್ ಕಾರ್ನರ್ ನೋಟಿಸ್​ ಹೊರಡಿಸಿದರೆ ಅಮಾನ್ಯವಾಗಲಿದೆ. ಹೀಗಾಗಿ ಎಸ್ಐಟಿಯು ಪ್ರಕರಣಗಳ ತನಿಖೆ ನಡೆಸಿ ಆದಷ್ಟು ಬೇಗನೇ ಚಾರ್ಜ್​ ಶೀಟ್ ಸಲ್ಲಿಸುವುದರ ಮೇಲೆ ಗಮನ ಹರಿಸಿರುವುದಾಗಿ ಮೂಲಗಳು ತಿಳಿಸಿವೆ.

ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ನ್ಯಾಯಾಲಯದಿಂದ ವಾರೆಂಟ್ ಜಾರಿಯಾದಾಗ ಮಾತ್ರ ರೆಡ್ ಕಾರ್ನರ್ ನೋಟಿಸ್​ ಪ್ರಕ್ರಿಯೆ ನಡೆಸಲು ಸುಲಭ ಸಾಧ್ಯವಾಗುತ್ತದೆ. ಸಿಐಡಿಯು ಸಿಬಿಐಗೆ ಪತ್ರ ಬರೆದು ಅದರಂತೆ ಸಿಬಿಐ ಇಂಟರ್ ಪೋಲ್ ಗೆ ಮಾಹಿತಿ ನೀಡಬೇಕಾಗುತ್ತದೆ. ಅನುಸರಿಸಬೇಕಾದ ಅಂಶಗಳನ್ನು ಪೂರ್ಣಗೊಳಿಸಿದಾಗ ಮಾತ್ರ ಇಂಟರ್ ಪೋಲ್ ಸದಸ್ಯ ರಾಷ್ಟ್ರಗಳಿಗೆ‌ ರೆಡ್ ಕಾರ್ನರ್ ನೋಟಿಸ್​ ಹೊರಡಿಸಲಿದೆ.

ಒಮ್ಮೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದರೆ ಆರೋಪಿಯು ದೇಶದ ಯಾವುದೇ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟರೆ ತಕ್ಷಣ ಮಾಹಿತಿ ಸಿಗಲಿದೆ. ಬಳಿಕ ಎಮಿಗ್ರೇಷನ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಇಂಟರ್​ಪೋಲ್​ಗೆ ಮಾಹಿತಿ ರವಾನಿಸಲಿದ್ದಾರೆ. ಇಂಟರ್ ಪೋಲ್ ಅಧಿಕಾರಿಗಳು ಸಂಬಂಧಿಸಿದ ತನಿಖಾ ತಂಡಕ್ಕೆ ಆರೋಪಿಯನ್ನು ಒಪ್ಪಿಸಲಿದ್ದಾರೆ.

ಅಶ್ಲೀಲ ವಿಡಿಯೋದ ಪೆನ್​ಡ್ರೈವ್​ ಬಹಿರಂಗವಾದ ಬಳಿಕ ಪ್ರಜ್ವಲ್​ ದೇಶ ಬಿಟ್ಟು ತೆರಳಿದ್ದು, ಈಗಾಗಲೇ ಲುಕ್ ಔಟ್ ನೋಟಿಸ್ ಹಾಗೂ ಬ್ಲ್ಯೂ ಕಾರ್ನರ್ ನೋಟಿಸ್ ಹೊರಡಿಸಲಾಗಿದ್ದರೂ ಪ್ರಜ್ವಲ್​ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರು ಭಾರತಕ್ಕೆ ಮರಳಲು ಎರಡು ಬಾರಿ ಟಿಕೆಟ್​ ಬುಕ್​ ಮಾಡಿ ಪ್ರಯಾಣ ರದ್ದು ಮಾಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ:ಹಾಸನ: ಸಂಸದ ಪ್ರಜ್ವಲ್ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರಿಂದ ಪರಿಶೀಲನೆ - PRAJWAL REVANNA CASE

ABOUT THE AUTHOR

...view details