ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ, ಪರಮೇಶ್ವರ ಸಿಡಿನೂ ಬರಬಹುದು: ರಮೇಶ ಜಾರಕಿಹೊಳಿ ಹೊಸ ಬಾಂಬ್ - RAMESH JARAKIHOLI - RAMESH JARAKIHOLI

ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಪರಮೇಶ್ವರ ಸಿಡಿನೂ ಬರಬಹುದು ಎಂದು ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

SIDDARAMAIAH PARAMESHWAR CD MATTER  BELAGAVI
ರಮೇಶ ಜಾರಕಿಹೊಳಿ (ETV Bharat)

By ETV Bharat Karnataka Team

Published : May 7, 2024, 12:55 PM IST

Updated : May 7, 2024, 3:40 PM IST

ರಮೇಶ ಜಾರಕಿಹೊಳಿ ಹೇಳಿಕೆ (ETV Bharat)

ಬೆಳಗಾವಿ:ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ವಿಚಾರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಅವರದ್ದೂ ಸಿಡಿ ಬರಬಹುದು ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಗೋಕಾಕಿನಲ್ಲಿ‌ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೊದಲಿನಿಂದ ಸಿಡಿ ವಿಚಾರದ ಕುರಿತು ಪದೇ ಪದೇ ಹೇಳಿಕೊಂಡು ಬಂದಿದ್ದೆ. ಆಗ ಎಲ್ಲರೂ ನನ್ನನ್ನು ನಿರ್ಲಕ್ಷ್ಯ ಮಾಡಿ ನಗುತ್ತಾ ಕುಳಿತಿದ್ದರು. ಇವತ್ತು ಒಬ್ಬರಿಗೆ ಆಗಿದೆ ಮುಂದೆ ಸಿದ್ದರಾಮಯ್ಯಗೂ ಬರಬಹುದು, ಪರಮೇಶ್ವರ ಅವರಿಗೂ ಬರಬಹುದು. ದಯವಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಪಕ್ಷಾತೀತವಾಗಿ ಇದಕ್ಕೆ ಇತಿಶ್ರೀ ಹಾಡಬೇಕು ಎಂದು ಸಿಎಂ ಅವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಅಂತಾ ಹೇಳಿದರು.

''ನನ್ನ ಕೇಸ್​ನಲ್ಲೂ ಎಸ್‌ಐಟಿ ಮೇಲೆ ವಿಶ್ವಾಸ ಇಲ್ಲ. ಈಗಲೂ ಎಸ್ಐಟಿ ಮೇಲೆ ವಿಶ್ವಾಸ ಇಲ್ಲ‌. ಸಿಬಿಐಗೆ ಕೇಸ್ ಕೊಟ್ಟರೂ ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೇಲುಸ್ತುವಾರಿ ಮಾಡಬೇಕು. ಮಹಾನ್ ನಾಯಕ ಹಣದಲ್ಲಿ ಬಹಳಷ್ಟು ಪ್ರಭಾವಿ ಇದ್ದಾರೆ. ಹಣ ಕೊಟ್ಟು ಎಲ್ಲವನ್ನೂ ಖರೀದಿ ಮಾಡಬೇಕು ಅನ್ನೋ ಸೊಕ್ಕು ಇದೆ. ದೇಶದಲ್ಲಿ ಕಾನೂನು ಉಳಿಯಬೇಕು ಎಂದರೆ ಈ ಕೇಸ್​ನಲ್ಲಿ ಫಿಕ್ಸ್ ಆಗಬೇಕು. ನನ್ನ ಕೇಸ್​ನಲ್ಲಿ ಬರೀ ಡಿಕೆ ಶಿವಕುಮಾರ್ ಭಾಗಿಯಾಗಿಲ್ಲ. ನಮ್ಮವರೂ ಕೇಸ್​ನಲ್ಲಿದ್ದಾರೆ. ಜೂನ್ 4ರ ನಂತರ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಸತತ ನಾಲ್ಕು ವರ್ಷದಿಂದ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದ್ದು, ಇದೆಲ್ಲದಕ್ಕೂ ಜೂನ್ 4ರ ನಂತರ ಇತಿಶ್ರೀ ಹಾಡೋಣ'' ಎಂದರು.

''ಪ್ರಜ್ವಲ್​ ಲೈಂಗಿಕ ದೌರ್ಜನ್ಯ ಪ್ರಕರಣ ಯಾರೂ ಹೆಮ್ಮೆ ಪಡುವ ವಿಷಯ ಅಲ್ಲ. ಎಲ್ಲರೂ ತಲೆ ತಗ್ಗಿಸುವ ವಿಷಯ. ಬಹಳ ಕೆಟ್ಟ ರೀತಿಯಲ್ಲಿ ಆಗಿದೆ. ರೇವಣ್ಣ ಕಾನೂನು ರೀತಿ ಹೋರಾಟ ಮಾಡಲಿ. ಕಾನೂನು ಒಂದೇ ಅದಕ್ಕೆ ಉತ್ತರ'' ಎಂದು ರಮೇಶ ಜಾರಕಿಹೊಳಿ ಹೇಳಿದರು.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರ ಆಡಿಯೋ ರಿಲೀಸ್ ವಿಚಾರಕ್ಕೆ ಮಾತನಾಡಿದ ಅವರು, ''ಆ ಆಡಿಯೋ ಸುತ್ತು ಹಾಕಿ ಇದೆ, ನನ್ನ ಕೇಸ್​ನಲ್ಲಿ ನೇರವಾಗಿ ಇರೋದು ಇದೆ. ಡಿಕೆಶಿ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿಗಳು ಇವೆ. ಈ ಕೇಸ್​ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿರುವುದು ನೇರವಾಗಿ ಇರೋದು ಇದೆ. ಅವರ ಬಳಿ ಅಲ್ಲಿ ಇಲ್ಲಿ ಅಂತಾ ಸುತ್ತು ಹಾಕಿರೋದು ಇದೆ. ನನ್ನ ಕೇಸ್​ನಲ್ಲಿ ಡಿಕೆ ಶಿವಕುಮಾರ್ ಮಾತಾಡಿದ್ದೇ ಕೊಡುತ್ತೇನೆ. ನನ್ನ ಬಗ್ಗೆ ಷಡ್ಯಂತ್ರ ಮಾಡಿದ್ದು‌ ಇದೆ. ಆದರೆ, ಮಾಧ್ಯಮದ ಮುಂದೆ ಕೊಡಲ್ಲ. ಸಿಬಿಐಗೆ ಕೇಸ್ ಕೊಟ್ಟರೆ ಸಾಕ್ಷಿ ಕೊಡುತ್ತೇನೆ'' ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ನನ್ನ ವಿರೋಧಿಗಳು ಪ್ರಭಾವಿಗಳು: ರಾಜಕಾರಣದಲ್ಲಿ ನನ್ನ ವಿರೋಧಿಗಳು ಪ್ರಬಲರು ಎಂದು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ನಮ್ಮ ವಿರೋಧಿಗಳು ಪ್ರಬಲರು ಎಂದು‌ ಕೆಲಸ ಮಾಡುತ್ತೇವೆ. ಎರಡು ಲಕ್ಷ ಮತಗಳಿಂದ ಗೆಲ್ಲುತ್ತೇವೆ ಎನ್ನುವ ವಿರೋಧಿಗಳು ಹತಾಶರಾಗಿದ್ದಾರೆಂದು ತಿಳಿದುಕೊಳ್ಳಬೇಕು ಎಂದು ರಮೇಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

''ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಹಂಚಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ, ಹಣ ಕೊಟ್ಟು ಮತ ತೆಗೆದುಕೊಳ್ಳುವುದಾದದರೆ ಎಲ್ಲರೂ ಎಂಪಿ, ಎಂಎಲ್‌ಎ ಆಗುತ್ತಾರೆ. ಹಣದಿಂದ ಗೆಲ್ಲುತ್ತೇವೆ ಎಂಬುದು ಸಾಧ್ಯವಿಲ್ಲ. ಕ್ಯಾಂಡಿಡೇಟ್ ವೀಕ್ ಆದರೆ ಹಣ ಹಂಚುತ್ತಾರೆ. ಆತ್ಮವಿಶ್ವಾಸ ಇರುವ ಅಭ್ಯರ್ಥಿ ಹಣ ಹಂಚಲ್ಲ. ಪಕ್ಷ, ಮತದಾರರ ಮೇಲೆ ವಿಶ್ವಾಸ ಇದ್ರೆ ಹಣ ಹಂಚಲ್ಲ. ಕಾಂಗ್ರೆಸ್‌ನವರಂತೆ ಬಿಜೆಪಿಯವರು ಈ ಮಟ್ಟಕ್ಕೆ ಇಳಿಯಲ್ಲ'' ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ಮಾಡಿದರು.

ಬೆಳಗಾವಿ ದಕ್ಷಿಣ, ಗೋಕಾಕ್​ ಶಾಸಕರು ಗೂಂಡಾಗಿರಿ ಮಾಡುತ್ತಾರೆಂಬ ಎಂಎಲ್​ಸಿ ಚನ್ನರಾಜ್ ‌ಹಟ್ಟಿಹೊಳಿ ಆರೋಪಕ್ಕೆ ಜೂನ್ 4ರ‌ ನಂತರ ಈ ಬಗ್ಗೆ ‌ಮಾತನಾಡುತ್ತೇನೆ, ಈಗ‌ ಬೇಡ. ಜೂನ್ 4ರ ನಂತರ ಎಲ್ಲ‌ ವಿಷಯ ಹೇಳುತ್ತೇನೆ ಎಂದರು.

ಓದಿ:ರಾಜ್ಯದಲ್ಲಿ ಇಂದು ಎರಡನೇ ಹಂತದ ಮತದಾನ: ಮತಗಟ್ಟೆಗೆ ಹೋಗುವ ಮುನ್ನ ತಿಳಿಯಬೇಕಾದ ಮಹತ್ವದ ಅಂಶಗಳು! - How to cast a Vote

Last Updated : May 7, 2024, 3:40 PM IST

ABOUT THE AUTHOR

...view details