ಕರ್ನಾಟಕ

karnataka

ETV Bharat / state

ಶೋಭಾ ಕರಂದ್ಲಾಜೆ ₹13.88 ಕೋಟಿ ಆಸ್ತಿ ಒಡತಿ: ಇವರ ಬಳಿ ಇದೆ 1 ಕೆಜಿ ಚಿನ್ನದ ಬಿಸ್ಕೆಟ್! - Shobha Karandlaje Asset - SHOBHA KARANDLAJE ASSET

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 13.88 ಕೋಟಿ ರೂ ಮೌಲ್ಯದ ಚರ ಹಾಗು ಸ್ಥಿರ ಆಸ್ತಿಯನ್ನು ಅಫಿಡವಿಟ್​ನಲ್ಲಿ ಘೋಷಿಸಿದ್ದಾರೆ.

ಶೋಭಾ ಕರಂದ್ಲಾಜೆ 13.88 ಕೋಟಿ ಆಸ್ತಿ ಒಡತಿ: ಅವರ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್!
ಶೋಭಾ ಕರಂದ್ಲಾಜೆ 13.88 ಕೋಟಿ ಆಸ್ತಿ ಒಡತಿ: ಅವರ ಬಳಿಯಿದೆ 1 ಕೆಜಿ ಚಿನ್ನದ ಬಿಸ್ಕೆಟ್!

By ETV Bharat Karnataka Team

Published : Apr 3, 2024, 8:27 PM IST

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಸ್ತಿಯಲ್ಲಿ ಶೇ.25ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ. ಕಳೆದ ಬಾರಿ 10.48 ಕೋಟಿ ರೂ.ಗಳ ಆಸ್ತಿ ಘೋಷಿಸಿಕೊಂಡಿದ್ದ ಅವರು ಇಂದು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದಲ್ಲಿ 13.88 ಕೋಟಿ ರೂ.ಗಳ ಆಸ್ತಿ ಘೋಷಿಸಿಕೊಂಡಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 9,23,66,910 ಮೌಲ್ಯದ ಚರಾಸ್ತಿ, 4,65,00,000 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 4,06,00,640 ರೂ. ಸಾಲ ಮಾಡಿದ್ದಾರೆ. 1,71,000 ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕ್​ಗಳ ಉಳಿತಾಯ ಖಾತೆಯಲ್ಲಿ 69,60,976 ರೂ. ಠೇವಣಿ ಹಾಗು 10 ರೂ. ಮುಖಬೆಲೆಯ 5,000 ಸಾವಿರ ಶೇರುಗಳನ್ನು ಹೊಂದಿದ್ದಾರೆ.

1 ಕೆ.ಜಿ ಚಿನ್ನದ ಬಿಸ್ಕೆಟ್(ಮಾರುಕಟ್ಟೆ ಮೌಲ್ಯ 68,40,000), 650 ಗ್ರಾಂ ಚಿನ್ನದ ಆಭರಣ, 1620 ಗ್ರಾಂ ಬೆಳ್ಳಿ(ಚಿನ್ನದ ಆಭರಣ ಮತ್ತು ಬೆಳ್ಳಿ ಮೌಲ್ಯ 40,00,000 ರೂ.) ಹೋಂಡಾ ಆ್ಯಕ್ಟಿವಾ ಸ್ಕೂಟರ್ ಹೊಂದಿದ್ದಾರೆ.

ಪಿಎಂಎಲ್ ಕಾಯ್ದೆಯಡಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ವಿಶೇಷ ಪ್ರಕರಣ 124/2014ರ ವಿವರವನ್ನು ಪ್ರಮಾಣಪತ್ರದಲ್ಲಿ ನೀಡಿದ್ದಾರೆ.

ಬಿಎ ಪದವಿ, ಮಂಗಳೂರು ವಿವಿಯಲ್ಲಿ ಎಂಎಸ್‌ಡಬ್ಲ್ಯೂ ಹಾಗೂ ಎಂಎಸ್ಓಯುನಲ್ಲಿ ಎಂಎ ಸೋಷಿಯಾಲಜಿ ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. 2014ರಲ್ಲಿ 7.20 ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ಶೋಭಾ ಕರಂದ್ಲಾಜೆ 2019ರಲ್ಲಿ 10.48 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. ಇದೀಗ ಆಸ್ತಿ ಮೌಲ್ಯ 13,88,66,910 ರೂ. ಆಗಿದೆ.

ಇದನ್ನೂ ಓದಿ:'ಒಳಪೆಟ್ಟಿನ ಆತಂಕವಿಲ್ಲ, 5 ಲಕ್ಷ ಲೀಡ್​ನಲ್ಲಿ ಗೆಲ್ಲುತ್ತೇನೆ': ನಾಮಪತ್ರ ಸಲ್ಲಿಸಿದ ಶೋಭಾ ಕರಂದ್ಲಾಜೆ - BENGALURU NORTH CONSTITUENCY

ABOUT THE AUTHOR

...view details