ಕರ್ನಾಟಕ

karnataka

ETV Bharat / state

ಶಿವಮೊಗ್ಗ ಗ್ಯಾಂಗ್ ವಾರ್ ಪ್ರಕರಣ: ಬೆಳ್ಳಂಬೆಳಗ್ಗೆ ರೌಡಿಶೀಟರ್‌ಗೆ ಪೊಲೀಸರಿಂದ ಗುಂಡೇಟು - Police Firing On Accused - POLICE FIRING ON ACCUSED

ಶಿವಮೊಗ್ಗ ಗ್ಯಾಂಗ್ ವಾರ್ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

ಶಿವಮೊಗ್ಗ ಗ್ಯಾಂಗ್ ವಾರ್ ಪ್ರಕರಣದ ಆರೋಪಿ
ಶಿವಮೊಗ್ಗ ಗ್ಯಾಂಗ್ ವಾರ್ ಪ್ರಕರಣದ ಆರೋಪಿ (ETV Bharat)

By ETV Bharat Karnataka Team

Published : May 13, 2024, 10:26 AM IST

ಶಿವಮೊಗ್ಗ:ಇತ್ತೀಚೆಗೆ ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದ ಗ್ಯಾಂಗ್ ವಾರ್​​ನಲ್ಲಿ ನಡೆದ ಮೂವರ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ, ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದ ಬಳಿ ಘಟನೆ ಸಂಭವಿಸಿದೆ.

ಶೋಯಬ್‌ ಅಲಿಯಾಸ್‌ ಅಂಡ ಎಂಬಾತನ ಕಾಲಿಗೆ ಗುಂಡು ಹೊಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಇವತ್ತು ಬೆಳಗಿನ ಜಾವ ಶೋಯಬ್‌ನ ಬಂಧನಕ್ಕೆ ಪಿಎಸ್‌ಐ ಕುಮಾರ್‌ ಮತ್ತು ಸಿಬ್ಬಂದಿ ಅಣ್ಣಪ್ಪ ಬೀರನಕೆರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮಾರಕಾಸ್ತ್ರದಿಂದ ಪೊಲೀಸ್‌ ಸಿಬ್ಬಂದಿ ಮೇಲೆ ಆರೋಪಿ ದಾಳಿಗೆ ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಪಿಎಸ್‌ಐ ಕುಮಾರ್‌ ಗುಂಡು ಹಾರಿಸಿ, ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಶಿವಮೊಗ್ಗ: ಆಟೋಗೆ ಕ್ಯಾಂಟರ್ ಹಿಟ್​ ಅಂಡ್​ ರನ್​, ಪಿಯು ವಿದ್ಯಾರ್ಥಿನಿ ಸಾವು - ROAD ACCIDENT

ಶೋಯಬ್‌ ಅಲಿಯಾಸ್‌ ಅಂಡ ಹಲವು ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಐದು ಪ್ರಕರಣಗಳಿವೆ. ಈ ಪೈಕಿ ಎರಡು ಕೊಲೆ ಯತ್ನ ಪ್ರಕರಣಗಳಿವೆ. ಈತ ಆದಿಲ್‌ ಗ್ಯಾಂಗ್‌ನಲ್ಲಿದ್ದ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ ಮರ್ಡರ್​ ಕೇಸ್​: ಗಾಯಗೊಂಡಿದ್ದ ಯಾಸೀನ್ ಖುರೇಷಿ ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ - Shivamogga Murder case

ABOUT THE AUTHOR

...view details