ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಭಾರೀ ಮಳೆಗೆ ಆಗುಂಬೆ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ಅಡಚಣೆ - heavy rain - HEAVY RAIN

ಶಿವಮೊಗ್ಗ ಜಿಲ್ಲೆ ಭಾರೀ ಮಳೆ ಮುಂದುವರಿದಿದೆ. ಮಳೆ ಅಬ್ಬರಕ್ಕೆ ಆಗುಂಬೆ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

Shivamogga  Agumbe hill  obstructing vehicular traffic  heavy rain
ಆಗುಂಬೆ ಗುಡ್ಡ ಕುಸಿತ, ವಾಹನ ಸಂಚಾರಕ್ಕೆ ಅಡಚಣೆ (ETV Bharat)

By ETV Bharat Karnataka Team

Published : Jul 14, 2024, 3:02 PM IST

ಶಿವಮೊಗ್ಗ:ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಇಂದು ಬೆಳಗ್ಗೆ ನಾಲ್ಕನೇ ತಿರುವಿನಲ್ಲಿ ಗುಡ್ಡ ಕುಸಿದಿದೆ.

ರಸ್ತೆ ಮೇಲೆ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಉಂಟಾಗಿತ್ತು. ಮಳೆ ಮುಂದುವರಿದಿರುವ ಹಿನ್ನೆಲೆ ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದೆ. ಇಂದು ಭಾನುವಾರವಾಗಿರುವುದರಿಂದ ವಾಹನ ಸಂಚಾರ ಹೆಚ್ಚಾಗಿರುವುದು ಕಂಡುಬಂದಿದೆ.

ಆಗುಂಬೆ ಗುಡ್ಡ ಕುಸಿದಿರುವುದು (ETV Bharat)

ಆಗುಂಬೆ ಪಿಎಸ್ಐ ರಂಗನಾಥ್ ಅಂತರಗಟ್ಟೆ ಅವರ ನೇತೃತ್ವದಲ್ಲಿ ರಸ್ತೆ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಮಲೆನಾಡು- ಕರಾವಳಿ ಭಾಗಕ್ಕೆ ಸಂಚರಿಸುವ ವಾಹನಗಳಿಗೆ ತೊಂದರೆ ಉಂಟಾಯಿತು.

ಇದನ್ನೂ ಓದಿ:ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ: ಕರಾವಳಿ, ಮಲೆನಾಡಿನಲ್ಲಿ ಐದು ದಿನ ರೆಡ್ ಅಲರ್ಟ್ - KARNATAKA WEATHER REPORT

ABOUT THE AUTHOR

...view details