ಹಾವೇರಿ:ಶಿಗ್ಗಾಂವಿ-ಸವಣೂರು ಕ್ಷೇತ್ರಕ್ಕೆ ನ.13 ರಂದು ಉಪಚುನಾವಣೆ ನಡೆದಿದ್ದು, ನಾಳೆ ಫಲಿತಾಂಶ ಬರಲಿದೆ. ಈ ಚುನಾವಣೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ನಡುವೆ ನೇರ ಹಣಾಹಣಿ ಇದೆ.
ಅರೆಮಲೆನಾಡು ತಾಲೂಕುಗಳಾದ ಶಿಗ್ಗಾಂವಿ - ಸವಣೂರು ದಾಸಶ್ರೇಷ್ಠರಾದ ಕನಕದಾಸ ಮತ್ತು ದಾರ್ಶನಿಕ ಶಿಶುನಾಳ ಷರೀಫರು ಜನ್ಮವೆತ್ತಿದ ಭೂಮಿ. ರಾಜಕೀಯ ಮುತ್ಸದ್ಧಿ- ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಮತ್ತು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿಗೆ ರಾಜಕೀಯ ಮರುಹುಟ್ಟು ಕೊಟ್ಟ ಕ್ಷೇತ್ರವಾಗಿದೆ.
ಹಿಂದಿನ ಚುನಾವಣೆಗಳ ಇತಿಹಾಸ:
ವರ್ಷ | ಗೆದ್ದ ಅಭ್ಯರ್ಥಿ | ಪಕ್ಷ |
1952 | ಹುರಳಿಕೊಪ್ಪಲ್ ಮಲ್ಲಪ್ಪ ಬಸಪ್ಪ | ಕಾಂಗ್ರೆಸ್ |
1957 | ರುದ್ರನಗೌಡ ಪಾಟೀಲ್ | ಕಾಂಗ್ರೆಸ್ |
1962 | ಫಕೀರಪ್ಪ ಸಿದ್ದಪ್ಪ ತಾವರೆ | ಕಾಂಗ್ರೆಸ್ |
1967 | ಎಸ್. ನಿಜಲಿಂಗಪ್ಪ | ಕಾಂಗ್ರೆಸ್ |
1972 | ಎನ್.ಎನ್. ಮರ್ದನ್ ಸಾಬ್ | ಕಾಂಗ್ರೆಸ್ |
1978 | ನದಾಫ ಮೊಹ್ಮದ್ ಕಾಶಿಮ್ ಸಾಬ್ | ಕಾಂಗ್ರೆಸ್ |
1983 | ನದಾಫ ಮೊಹ್ಮದ್ ಕಾಶಿಮ್ ಸಾಬ್ | ಕಾಂಗ್ರೆಸ್ |
1985 | ನೀಲಕಂಠಗೌಡ ಪಾಟೀಲ್ | ಪಕ್ಷೇತರ |
1989 | ಕುನ್ನೂರು ಮಂಜುನಾಥ | ಕಾಂಗ್ರೆಸ್ |
1994 | ಕುನ್ನೂರು ಮಂಜುನಾಥ | ಕಾಂಗ್ರೆಸ್ |
1999 | ಅಜ್ಜಂಪೀರ್ ಖಾದ್ರಿ | ಜೆಡಿಎಸ್ |
2004 | ಸಿಂಧೂರ ರಾಜಶೇಖರ | ಪಕ್ಷೇತರ |
2008, 2013, 2018 ಮತ್ತು 2023 | ಬಸವರಾಜ ಬೊಮ್ಮಾಯಿ | ಬಿಜೆಪಿ |
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ:
ಒಟ್ಟು ಮತದಾರರ ಸಂಖ್ಯೆ | 2,37,525 |
ಪುರುಷರು | 1,21,443 |
ಮಹಿಳೆಯರು | 1,16,076 |
ಇತರೆ | 06 |
2024ರ ಉಪಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು:ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್, ಸೋಷಿಯಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಖಾಜಾಮೈನುದ್ದೀನ ಗುಡಗೇರಿ, ಕೆಆರ್ಎಸ್ ಪಕ್ಷದ ಅಭ್ಯರ್ಥಿಯಾಗಿ ರವಿ ಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾಗಿ ಡಾ.ಜಿ.ಹೆಚ್. ಇಮ್ರಾಪೂರ, ಶಿದ್ದಪ್ಪ ಹೊಸಳ್ಳಿ, ಎಸ್.ಎಸ್.ಪಾಟೀಲ್ ಮತ್ತು ಸಾತಪ್ಪ ನೀಲಪ್ಪ ದೇಸಾಯಿ ಅವರು ಚುನಾವಣಾ ಕಣದಲ್ಲಿದ್ದಾರೆ.