ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡದಲ್ಲಿ ಅಧಿಕ ತಾಪಮಾನ: ಮತದಾರರಿಗೆ ಶಾಮಿಯಾನ ವ್ಯವಸ್ಥೆ, ಕಾಂಗ್ರೆಸ್​ ಅಭ್ಯರ್ಥಿ ಪದ್ಮರಾಜ್​ ಮತದಾನ - shamiyana arrangement - SHAMIYANA ARRANGEMENT

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಮತದಾರರಿಗೆ ನೆರಳಿನ ವ್ಯವಸ್ಥೆ ಜೊತೆಗೆ ಶಾಮಿಯಾನ ವ್ಯವಸ್ಥೆಯನ್ನೂ ಚುನಾವಣಾ ಆಯೋಗ ಮಾಡಿದೆ.

ಮತದಾರರಿಗೆ ಶಾಮಿಯಾನ ವ್ಯವಸ್ಥೆ
ಮತದಾರರಿಗೆ ಶಾಮಿಯಾನ ವ್ಯವಸ್ಥೆ

By ETV Bharat Karnataka Team

Published : Apr 26, 2024, 9:19 AM IST

Updated : Apr 26, 2024, 9:58 AM IST

ದಕ್ಷಿಣ ಕನ್ನಡದಲ್ಲಿ ಮತದಾರರಿಗೆ ಶಾಮಿಯಾನ ವ್ಯವಸ್ಥೆ

ಮಂಗಳೂರು:ದೇಶದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲೂ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಮುಂಜಾನೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಮತದಾನಕ್ಕೆ ಬರುವ ಮತದಾರರಿಗೆ ಸಂಕಷ್ಟ ತಂದೊಡ್ಡಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ 1876 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದ್ದು, ಬಿಸಿಲಿನ ಝಳದ ನಡುವೆಯೂ ಮತದಾರರು ಮುಂಜಾನೆಯೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂತು. ಈ ಬಾರಿಯ ಹೀಟ್ ವೇವ್​ನಿಂದ ಮತದಾರರ ರಕ್ಷಣೆಗೆ ಚುನಾವಣಾ ಆಯೋಗ ನೆರಳಿನ ವ್ಯವಸ್ಥೆ ಮಾಡಿದೆ. ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ.

ಕಾಂಗ್ರೆಸ್​ ಅಭ್ಯರ್ಥಿ ಪದ್ಮರಾಜ್ ಕುಟುಂಬ ಸಮೇತ​ ಮತದಾನ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್​ನಿಂದ ಪದ್ಮರಾಜ್ ಪೂಜಾರಿ, ಬಿಜೆಪಿಯಿಂದ ಕ್ಯಾ. ಬ್ರಿಜೇಶ್ ಚೌಟ, ಬಿಎಸ್ಪಿಯಿಂದ ಕಾಂತಪ್ಪ ಅಲಂಗಾರ್, ಕರುನಾಡ ಸೇವಕರ ಪಾರ್ಟಿಯಿಂದ ದುರ್ಗಾಪ್ರಸಾದ್, ಉತ್ತಮ ಪ್ರಜಾಕೀಯ ಪಕ್ಷದಿಂದ ಪ್ರಜಾಕೀಯ ಮನೋಹರ್, ಕೆಆರ್​ಎಸ್​ನಿಂದ ರಂಜಿನಿ .ಎಂ., ಪಕ್ಷೇತರವಾಗಿ ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೋ, ಸುಪ್ರೀತ್ ಕುಮಾರ್ ಪೂಜಾರಿ ಸ್ಪರ್ಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 18,18,127 ಮತದಾರರಿದ್ದು, ಇದರಲ್ಲಿ 8,87,122 ಪುರುಷ ಮತದಾರರು, 9,30,928 ಮಹಿಳಾ ಮತದಾರರು ಮತ್ತು 77 ತೃತೀಯ ಲಿಂಗಿಗಳು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ಸಖಿ ಬೂತ್, 8 ಪಿಡಬ್ಲ್ಯುಡಿ ಬೂತ್, 8 ಯಂಗ್ ವೋಟರ್ ಬೂತ್, 8 ಮಿಷನ್ ಬೇಸ್ಡ್ ಬೂತ್ ಮತ್ತು 8 ಟ್ರೆಡಿಷನಲ್ ಬೂತ್​ಗಳನ್ನು ನಿರ್ಮಾಣ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 171 ಬೂತ್​ಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 11,255 ಸಿಬ್ಬಂದಿಗಳನ್ನು ಮತಗಟ್ಟೆ ಅಧಿಕಾರಿಗಳಾಗಿ ನಿಯೋಜಿಸಲಾಗಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 1,500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1,600 ಪೊಲೀಸರನ್ನು ನಿಯೋಜಿಸಲಾಗಿದೆ.

ಅಶಕ್ತರಿಂದ ಉತ್ಸಾಹದಿಂದ ಮತಚಲಾವಣೆ

ಅಶಕ್ತರಿಂದ ಉತ್ಸಾಹದಿಂದ ಮತಚಲಾವಣೆ:ಮತಗಟ್ಟೆಗಳಿಗೆ ಮುಂಜಾನೆಯಿಂದಲೇ ಅಶಕ್ತರು ಮತ‌ಚಲಾವಣೆಗೆ ಆಗಮಿಸುತ್ತಿರುವುದು ಕಂಡುಬಂದಿದೆ. ವೀಲ್​ಚೇರ್​ನಲ್ಲಿ ಬಂದು ಅಶಕ್ತರು ಮತ ಚಲಾಯಿಸುತ್ತಿದ್ದಾರೆ.

ಇದನ್ನೂ ಓದಿ:ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರಿಂದ ವೋಟಿಂಗ್: ತಪ್ಪದೇ ಮತದಾನ ಮಾಡಲು ಕರೆ ನೀಡಿದ ರಾಹುಲ್​ ದ್ರಾವಿಡ್​​ - VIP VOTED

Last Updated : Apr 26, 2024, 9:58 AM IST

ABOUT THE AUTHOR

...view details