ದಾವಣಗೆರೆ :ಸವಾಲ್ ಏಕೆ ಕುಸ್ತಿ ಆಡೋಕೆ ಬರಲಿ ನೋಡೋಣ ಎಂದು ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಸವಾಲು ಹಾಕಿದ್ದಾರೆ. ದಾವಣಗೆರೆಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ, ಶಾಮನೂರು ಶಿವಶಂಕರಪ್ಪ ವಿರುದ್ಧ ಏಕವಚನದಲ್ಲಿ ಮಾತನಾಡಿದ ಕುರಿತು ಅವರು ಪ್ರತಿಕ್ರಿಯೆ ನೀಡಿದರು.
ನಾವು ಎಲ್ಲರೂ ಸೇರಿ ಅದರ ಬಗ್ಗೆ ಮಾತನಾಡಲಿದ್ದೇವೆ. ನಮ್ಮವರು ಯಾರು ಮಾತನಾಡಿಲ್ಲ. ನಾನು ಮಾತನಾಡುತ್ತೇನೆ. ಅಹಿಂದ ಇಲ್ಲ ಏನೂ ಇಲ್ಲ. ನನಗೆ ಜಾತಿ ಗಣತಿ ಬಗ್ಗೆ ಒಂದೇ ಗೊತ್ತು. ಆದರೆ ಅಹಿಂದ ತೆಗೆದುಕೊಂಡು ನಾನೇನು ಮಾಡಲಿ. ಜಾತಿಗಣತಿ ವರದಿ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವುದಿಲ್ಲ. ಜಾತಿಗಣತಿ ವರದಿ ಬಗ್ಗೆ ಎಲ್ಲರೂ ನಮ್ಮವರು ಸೇರಿಕೊಂಡು ವಿಚಾರ ಮಾಡುತ್ತೇವೆ. ಬರೀ ಸವಾಲ್ ಏಕೆ ನೇರವಾಗಿ ಕುಸ್ತಿ ಆಡೋಕೆ ಬಾ ಎಂದು ಹೇಳು. ಅವರ ಸವಾಲ್ ತೆಗೆದುಕೊಂಡು ಏನ್ ಮಾಡ್ತಿರಾ? ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ ಸವಾಲ್ ಕೂಡಾ ಹಾಕಿದರು.