ಬೆಂಗಳೂರು:ಚಾಲಕನ ಅಚಾತುರ್ಯದಿಂದ ಬಿಎಂಟಿಸಿ ಬಸ್ ಸರಣಿ ಅಪಘಾತಕ್ಕೆ ಕಾರಣವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಹೆಬ್ಬಾಳದ ಎಸ್ಟೀಂ ಮಾಲ್ ಸಮೀಪದ ಫ್ಲೈ ಓವರ್‌ನ ಮೇಲೆ ಘಟನೆ ನಡೆದಿದ್ದು, ಅಪಘಾತದ ದೃಶ್ಯಗಳು ಬಸ್‌ನೊಳಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಬಿಎಂಟಿಸಿ ಬಸ್‌ನಿಂದ ಸರಣಿ ಅಪಘಾತ: ರಸ್ತೆಯಲ್ಲಿದ್ದ ಸಹ ಪ್ರಯಾಣಿಕರು ಜಸ್ಟ್ ಮಿಸ್ - Serial accident by BMTC bus - SERIAL ACCIDENT BY BMTC BUS
ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೇಲ್ನೋಟಕ್ಕೆ ಬ್ರೇಕ್‌ನಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣದಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
Published : Aug 13, 2024, 1:21 PM IST
|Updated : Aug 13, 2024, 2:18 PM IST
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಹೆಚ್ಎಸ್ಆರ್ ಲೇಔಟ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ವೋಲ್ವೋ ಬಸ್ ಬೆಳಗ್ಗೆ 9.25ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಮೊದಲು ಬೈಕ್‌ವೊಂದಕ್ಕೆ ಡಿಕ್ಕಿಯಾದ ಬಸ್ ನೋಡ ನೋಡುತ್ತಿದ್ದಂತೆ ಇನ್ನೂ ಕೆಲ ಬೈಕ್, ಕಾರುಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಓರ್ವ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಬ್ರೇಕ್‌ನಲ್ಲಿ ಉಂಟಾದ ತಾಂತ್ರಿಕ ದೋಷದ ಕಾರಣದಿಂದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.