ಕರ್ನಾಟಕ

karnataka

ETV Bharat / state

ಬಿಳಿಗಿರಿ ಬನದಲ್ಲಿ ಅದ್ಧೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವ; ಸಹಸ್ರಾರು ಭಕ್ತರು ಭಾಗಿ - SANKRANTI RATHOTSAVA

ಬಿಳಿಗಿರಿ ಬನದಲ್ಲಿ ನಡೆದ ರಥೋತ್ಸವದಲ್ಲಿ ಸಹಸ್ರಾರು ಮಂದಿ ಭಾಗಿಯಾಗಿ ಪುನೀತರಾದರು.

Sankranti Rathotsava At Biligiri Ranganathaswamy Hill In Chamarajanagar
ರಥೋತ್ಸವದಲ್ಲಿ ಭಾಗಿಯಾದ ಭಕ್ತಗಣ (ETV Bharat)

By ETV Bharat Karnataka Team

Published : Jan 15, 2025, 4:56 PM IST

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಬೆಟ್ಟದಲ್ಲಿ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಇಂದು ನಡೆದ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಜಿಲ್ಲೆಯಿಂದ ಅಷ್ಟೇ ಅಲ್ಲದೆ ವಿವಿಧ ರಾಜ್ಯಗಳಿಂದ ಭಕ್ತಸಾಗರವೇ ಜಾತ್ರೆಗೆ ಹರಿದುಬಂದಿತ್ತು. ಎಲ್ಲರೂ ಸೇರಿ ರಥ ಎಳೆದು ಪುನೀತರಾದರು. ಗರುಡ ಪಕ್ಷಿಯು ರಥದ ಸುತ್ತ ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ಬಿಳಿಗಿರಿ ಬನದಲ್ಲಿ ಅದ್ಧೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವ (ETV Bharat)

ದೇಗುದಲ್ಲಿ ಪ್ರತಿ ವರ್ಷ ಎರಡು ಬಾರಿ ರಥೋತ್ಸವ ನಡೆಯುತ್ತದೆ. ಸಂಕ್ರಾಂತಿಯ ಮಾರನೇ ದಿನ ಈ ಚಿಕ್ಕಜಾತ್ರೆ ನಡೆದರೆ, ಏಪ್ರಿಲ್‍ ಅಥವಾ ಮೇ ತಿಂಗಳಲ್ಲಿ ದೊಡ್ಡಜಾತ್ರೆ ನಡೆಯುತ್ತದೆ. ಈ ವೇಳೆ, ಇಲ್ಲಿ ದಾಸಂದಿರು ಅಕ್ಕಿ, ಕಜ್ಜಾಯ, ಬೆಲ್ಲ, ತೆಂಗಿನಕಾಯಿ, ಕಡ್ಲೆಯನ್ನು ಹಾಕಿ ಬ್ಯಾಟೆಮನೆ ಸೇವೆ ಹಾಕುವ ಸಂಪ್ರದಾಯವಿದೆ. ದೇಗುಲದ ಸುತ್ತ ಜಾಗಟೆ, ಶಂಖನಾದ ಹೊಮ್ಮಿಸಿ ಬಹುಪರಾಕ್, ಬಹುಪರಾಕ್‍ ಎಂದು ಕೂಗಿ ವಿಶಿಷ್ಟವಾಗಿ ಆಚರಿಸುವ ಈ ಸಂಪ್ರದಾಯಕ್ಕೂ ಚಿಕ್ಕಜಾತ್ರೆ ಸಾಕ್ಷಿಯಾಯಿತು.

ರಥೋತ್ಸವದಲ್ಲಿ ಭಾಗಿಯಾದ ಭಕ್ತಗಣ (ETV Bharat)

ದೇವರಿಗೆ ಮೈಸೂರಿನ ಮಹಾರಾಜರು ನೀಡಿರುವ ಕಿರೀಟ ಸೇರಿದಂತೆ ವಿವಿಧ ಚಿನ್ನಾಭರಣಗಳಿಂದ ದೇವರನ್ನು ಅಲಂಕಾರ ಮಾಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ದ್ವಿಚಕ್ರ ವಾಹನಗಳನ್ನು ಬೆಟ್ಟದ ತಪ್ಪಲಿನಲ್ಲೇ ನಿರ್ಬಂಧಿಸಲಾಗಿತ್ತು. ಬೆಟ್ಟದ ತಪ್ಪಲಿನಿಂದ ಸಾರಿಗೆ ಸಂಸ್ಥೆ ಬಸ್​ಗಳ ಸೇವೆ ಕಲ್ಪಿಸಲಾಗಿತ್ತು.

ರಥೋತ್ಸವದಲ್ಲಿ ಭಾಗಿಯಾದ ಭಕ್ತಗಣ (ETV Bharat)

ಸೋಲಿಗರ ಆರಾಧ್ಯ ದೈವ:ಬಿಳಿಗಿರಿರಂಗನಾಥಸ್ವಾಮಿ ಸೋಲಿಗರ ಆರಾಧ್ಯ ದೈವ ಕೂಡ ಆಗಿದ್ದು, ಸೋಲಿಗರಾದ ಕುಸುಮಾಲೆಯನ್ನು ರಂಗನಾಥಸ್ವಾಮಿ ವರಿಸಿದ ಹಿನ್ನೆಲೆ ಸೋಲಿಗರು ರಂಗನಾಥನನ್ನು ರಂಗಭಾವ ಎಂದೇ ಸಂಬೋಧಿಸಿ ಪ್ರಾರ್ಥಿಸುತ್ತಾರೆ.

ರಥೋತ್ಸವದಲ್ಲಿ ಭಾಗಿಯಾದ ಭಕ್ತಗಣ (ETV Bharat)

ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ವಿವಿಧ ಹಾಡಿಗಳಿಂದ ನೂರಾರು ಮಂದಿ ಸೋಲಿಗರು ಕುಟುಂಬ ಸಮೇತರಾಗಿ ಬಂದು ರಥೋತ್ಸವದಲ್ಲಿ ಭಾಗಿಯಾದರು. ಇನ್ನು, ಸೋಲಿಗರೇ ಇಲ್ಲಿನ ರಥವನ್ನು ಕಟ್ಟುವುದು ವಿಶೇಷವಾಗಿದೆ.

ಇದನ್ನೂ ಓದಿ:ಕೊಳ್ಳೇಗಾಲ: ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಗೆ ವಿಧ್ಯುಕ್ತ ಚಾಲನೆ; ಉತ್ತರ ದಿಕ್ಕಿಗೆ ವಾಲಿದ ಚಂದ್ರಮಂಡಲ - CHIKKALLURU SIDDAPPAJI FAIR

ABOUT THE AUTHOR

...view details