ಕರ್ನಾಟಕ

karnataka

ಟಿಬಿ ಡ್ಯಾಂ ಬೋರ್ಡ್​ನಲ್ಲಿ ₹135 ಕೋಟಿ ಇದೆ, ಗೇಟ್ ಅಳವಡಿಕೆಗೆ ₹5 ಕೋಟಿ ಬಿಡುಗಡೆ: ಸಚಿವ ತಂಗಡಗಿ - TB Dam Crest Gate Repair

By ETV Bharat Karnataka Team

Published : Aug 15, 2024, 7:11 PM IST

ತುಂಗಭದ್ರಾ ಜಲಾಶಯದ ಕ್ರೆಸ್ಟ್‌ ಗೇಟ್ ಅಳವಡಿಕೆಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

shivaraj-tangadagi
ಸಚಿವ ಶಿವರಾಜ ತಂಗಡಗಿ (ETV Bharat)

ಸಚಿವ ಶಿವರಾಜ ತಂಗಡಗಿ ಹೇಳಿಕೆ (ETV Bharat)

ಗಂಗಾವತಿ(ಕೊಪ್ಪಳ):ತುಂಗಭದ್ರಾ ಜಲಾಶಯ ಬೋರ್ಡ್​ನಲ್ಲಿ ಸದ್ಯ 135 ಕೋಟಿ ರೂಪಾಯಿ ಇದೆ. ಇದರಲ್ಲಿ 5 ಕೋಟಿ ರೂಪಾಯಿಯನ್ನು ಕ್ರೆಸ್ಟ್‌ ಗೇಟ್ ಅಳವಡಿಕೆಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಕೊಪ್ಪಳದಲ್ಲಿಂದು ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಇಂದು ಜಿಂದಾಲ್​ನಿಂದ 60x4 ಅಡಿಯ ಒಂದು ಗೇಟ್ ತರಿಸಲಾಗಿದೆ. ನಿನ್ನೆಯೇ ಪೂಜೆ ಮಾಡಿ ಪ್ರಾಥಮಿಕ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಗೇಟ್ ಅಳವಡಿಕೆಗೆ ಬೇಕಾದ ಮಷಿನ್, ಕ್ರೇನ್ ಸೆಟ್ ಮಾಡಲಾಗಿದೆ. ಈಗಾಗಲೇ ಒಂದು ಗೇಟ್ ಬ್ರಿಡ್ಜ್ ಮೇಲೆ ಅನ್‌ಲೋಡ್ ಆಗಿದೆ ಎಂದರು.

ಜಲಾಶಯದಿಂದ ನದಿಗೆ ನೀರು ಹರಿಯುತ್ತಿದೆ: 60ರಿಂದ 63 ಟಿಎಂಸಿ ನೀರು ಹೊರ ಹಾಕಿದ ಬಳಿಕ ಗೇಟ್ ಅಳವಡಿಸುವ ಯೋಚನೆ ಇತ್ತು. ಆದರೆ, ನೀರನ್ನು ಉಳಿಸಿಕೊಂಡು ಗೇಟ್ ಅಳವಡಿಸಬಹುದೆಂದು ತಜ್ಞರು ಸಲಹೆ ನೀಡಿದ್ದಾರೆ. ಆ ಪ್ರಕಾರವಾಗಿ ಇಂದು ಒಂದು ಪ್ರಯತ್ನ ಮಾಡಲಾಗುತ್ತದೆ. ಭಗವಂತನ ಕೃಪೆಯಿಂದ ಯಶಸ್ವಿಯಾಗಿ ಆಗುತ್ತದೆ ಎಂಬ ಭರವಸೆ ಇದೆ. ನೀರಿನ ಒತ್ತಡ ಲೆಕ್ಕಹಾಕಿ ಈಗ ಗೇಟ್ ರೆಡಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ಲಾನ್ ಬಿ ಪ್ರಕಾರ, 60 ಟಿಎಂಸಿಯಷ್ಟು ನೀರು ತೆಗೆಯಲೇಬೇಕು ಎನ್ನುವುದಾದರೆ ಇನ್ನೆರಡು ದಿನ ನದಿಗೆ ನೀರು ಬಿಡಲಾಗುವುದು ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಿಂದ ಯಾವುದೇ ಆರ್ಥಿಕ ಹೊರೆ ಇಲ್ಲ. ರಾಜ್ಯದ ಅಭಿವೃದ್ಧಿಗೆ ಯಾವುದೇ ತೊಂದರೆಯೂ ಇಲ್ಲ. ಈಗಾಗಲೇ ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಸಚಿವರೊಂದಿಗೆ ಸಭೆ ಮಾಡಲಾಗಿದೆ. ಯಾರು ಬಡವರಿದ್ದಾರೋ ನಿರ್ಗತಿಕರಿದ್ದಾರೋ ಗ್ಯಾರಂಟಿ ಯೋಜನೆಯಿಂದ ಅವರಿಗೆಲ್ಲ ಅನುಕೂಲವಾಗಿದೆ ಎಂದರು.

ಇದನ್ನೂ ಓದಿ:ಡ್ಯಾಂ ನೀರು ಉಳಿಸಿಕೊಂಡು ಗೇಟ್ ದುರಸ್ಥಿ ಮಾಡುವ ಬಗ್ಗೆ ಚಿಂತನೆ: ಸಚಿವ ಶಿವರಾಜ ತಂಗಡಗಿ - Tungabhadra Dam Crest Gate

ABOUT THE AUTHOR

...view details