ಬೆಂಗಳೂರು:ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಬರ್ಬರವಾಗಿ ರೌಡಿಶೀಟರ್ ದಿನೇಶ್ನನ್ನು ಕೊಲೆ ಮಾಡಿ ಪರಾರಿಯಾಗಿದ್ದ 12 ಮಂದಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಾಣಸವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ಅರವಿಂದ, ದಿಲೀಪ್ ಸಾಗರ್, ಅಜಯ್ ಕ್ರಿಸ್ಟೋಫರ್, ನಿಖಿಲ್, ಗೌತಮ್, ಮೆಲ್ವಿನ್, ಕಾರ್ತಿಕ್, ಸತೀಶ್, ಕಿಶೋರ್, ದಿವಾಕರ್ ಹಾಗೂ ಶೇಖರ್ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ದಿಲೀಪ್ ಸಾಗರ್ ಹಾಗೂ ಅಜಯ್ ಕ್ರಿಸ್ಟೋಫರ್ ಅವರು ರಾಮಮೂರ್ತಿ ನಗರ ಹಾಗೂ ಬಾಣಸವಾಡಿ ಠಾಣೆಯ ರೌಡಿಶೀಟರ್ಗಳಾಗಿದ್ದಾರೆ. ಆರೋಪಿ ಅರವಿಂದ ಕೊಲೆಗೀಡಾದ ದಿನೇಶ್ ಜೊತೆ ಓಡಾಡುತ್ತಿದ್ದ. ಈ ಹಿಂದೆ ದಿನೇಶನು ರೌಡಿಶೀಟರ್ಗಳಿಗೆ ಹಪ್ತಾ ನೀಡುವಂತೆ ಬೆದರಿಸಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಹೇಳಿದ್ದ. ಜೊತೆಯಲ್ಲಿದ್ದ ಅರವಿಂದ್ಗೂ ವಾರ್ನ್ ಮಾಡಿದ್ದ. ರೌಡಿಗಳಾದ ದಿಲೀಪ್ ಸಾಗರ್, ಅಜಯ್ ಜೊತೆ ಒಳಸಂಚು ರೂಪಿಸಿದ ಎಲ್ಲರನ್ನು ಒಗ್ಗೂಡಿಸಿಕೊಂಡು ದಿನೇಶ್ ಹತ್ಯೆ ಪ್ಲ್ಯಾನ್ ರೂಪಿಸಿದ್ದ.