ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಲಕ್ಷ್ಮಣ್ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೂನ್ 11ರಂದು ಬಂಧಿಸಲ್ಪಟ್ಟು ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದ ಪವಿತ್ರಾ ಗೌಡ ಹಾಗು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ಆರೋಪಿ ಲಕ್ಷ್ಮಣ್ ಬಿಡುಗಡೆಯಾಗಿದ್ದಾರೆ.
ನಟ ದರ್ಶನ್, ಪವಿತ್ರಾ ಗೌಡ, ಪ್ರದೋಷ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಹಾಗೂ ಜಗದೀಶ್ಗೆ ಕಳೆದ ಶುಕ್ರವಾರ ಹೈಕೋರ್ಟ್ ಜಾಮೀನು ನೀಡಿತ್ತು. ಎರಡನೇ ಶನಿವಾರ ಹಾಗು ಭಾನುವಾರ ರಜೆ ಇದ್ದ ಕಾರಣ ಸೋಮವಾರ ಕೋರ್ಟ್ ಜಾಮೀನು ಪ್ರತಿ ನೀಡಿತ್ತು.
ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ (ETV Bharat) ಜೈಲಿನಿಂದ ಹೊರಬಂದ ತಕ್ಷಣ ಪವಿತ್ರಾ ಗೌಡಗೆ ಸಮೀಪದ ಮುನೇಶ್ವರ ದೇವಾಲಯದೆದುರು ಕುಟುಂಬಸ್ಥರು ದೃಷ್ಟಿ ತೆಗೆದರು. ನಂತರ ಮಾಧ್ಯಮಗಳು ಪ್ರತಿಕ್ರಿಯೆ ಪಡೆಯಲು ಮುಂದಾಗಿದ್ದು, ಯಾವುದಕ್ಕೂ ಉತ್ತರಿಸದೇ ಕಾರಿನಲ್ಲಿ ಕುಳಿತು ಮನೆಯತ್ತ ಹೊರಟರು.
ಸೋಮವಾರ ರಾತ್ರಿ 10.30ಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಇಮೇಲ್ ಬಂದ ಕಾರಣ ಇಂದು ಬೆಳಗ್ಗೆ ಲಕ್ಷ್ಮಣ್ ಅವರನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮಾಧ್ಯಮದವರು ಪ್ರತಿಕ್ರಿಯೆಗೆ ಯತ್ನಿಸಿದರು. ಆದರೆ ಅವರು ಪ್ರತಿಕ್ರಿಯೆ ನೀಡದೆ ಓಡಿ ಹೋಗಿ ಕಾರು ಹತ್ತಿ ತೆರಳಿದರು.
ಲಕ್ಷ್ಮಣ್ ಜೈಲಿನಿಂದ ಬಿಡುಗಡೆ (ETV Bharat) ಕೊಲೆ ಪ್ರಕರಣದ ಇನ್ನೋರ್ವ ಆರೋಪಿ ಜಗದೀಶ್‌ಗೂ ಕೋರ್ಟ್ ಜಾಮೀನು ನೀಡಿದೆ. ಆದರೆ ಜಾಮೀನು ಪ್ರಕ್ರಿಯೆ ನಡೆಯದ ಕಾರಣ ಬಿಡುಗಡೆಯಾಗಿಲ್ಲ.
ಇದನ್ನೂ ಓದಿ:ದರ್ಶನ್ ಇತರರ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಬೆಂಗಳೂರು ಪೊಲೀಸರ ನಿರ್ಧಾರ