ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ರಘು ಎಂಬಾತನ ತಾಯಿ ಮಂಜುಳಮ್ಮ (70) ಕೊನೆಯುಸಿರೆಳೆದಿದ್ದಾರೆ. ಎ4 ಆರೋಪಿ ರಾಘವೇಂದ್ರ ತಾಯಿ ಕೋಳಿ ಬುರುಜನಹಟ್ಟಿಯ ಮನೆಯಲ್ಲಿ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎ4 ಆರೋಪಿ ರಾಘವೇಂದ್ರ ತಾಯಿ ನಿಧನ - ACCUSED MOTHER IS NO MORE - ACCUSED MOTHER IS NO MORE
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ರಘು ಅಲಿಯಾಸ್ ರಾಘವೇಂದ್ರರ ತಾಯಿ ಮಂಜುಳಮ್ಮ (70) ಅನಾರೋಗ್ಯ ಹಿನ್ನೆಲೆ ಮೃತಪಟ್ಟಿದ್ದಾರೆ.
ಆರೋಪಿ ರಘು ತಾಯಿ ಮಂಜುಳಮ್ಮ ನಿಧನ (ETV Bharat)
Published : Jul 20, 2024, 12:19 PM IST
ನ್ಯಾಯಾಂಗ ಬಂಧನದಲ್ಲಿರುವ ರಘು ಅಲಿಯಾಸ್ ರಾಘವೇಂದ್ರ, ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾಗಿದ್ದರು. ರೇಣುಕಾಸ್ವಾಮಿ ಅಪಹರಣ ಮತ್ತು ಮರ್ಡರ್ ಕೇಸ್ಗೆ ಸಂಬಂಧಿಸಿದಂತೆ ಎ4 ಆರೋಪಿಯಾಗಿದ್ದಾರೆ. ಇದೀಗ ಮಂಜುಳಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.