ಕರ್ನಾಟಕ

karnataka

ETV Bharat / state

ಸುತ್ತೂರು ಜಾತ್ರೆ: ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಪ್ರಾರಂಭ, ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ - SUTTUR FAIR 2025

ಬರುವ ಜನವರಿ 26 ರಿಂದ 31ರವರೆಗೆ ಸುತ್ತೂರು ಜಾತ್ರೆ ನಡೆಯಲಿದ್ದು, ಜಾತ್ರಾ ನಿಮಿತ್ತ ಉಚಿತ ಸಾಮೂಹಿಕ ವಿವಾಹ ಕೂಡ ನಡೆಯಲಿವೆ.

SUTTUR FAIR 2025
ಉಚಿತ ಸಾಮೂಹಿಕ ವಿವಾಹ (ಸಂಗ್ರಹ ಚಿತ್ರ) (ETV Bharat)

By ETV Bharat Karnataka Team

Published : Nov 26, 2024, 8:17 PM IST

ಮೈಸೂರು:ಪ್ರತಿ ವರ್ಷದಂತೆ ಈ ವರ್ಷವೂ ನಂಜನಗೂಡು ತಾಲೂಕಿನ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜನವರಿ 26ರಿಂದ 31ರವರೆಗೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸದ ಪ್ರಯುಕ್ತ ಜನವರಿ 27ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.

ಸುತ್ತೂರು ಜಾತ್ರಾ ಮಹೋತ್ಸವದ ದಿನಾಂಕ ನಿಗದಿ‌ ಆಗಿದೆ. ಜನವರಿ 27ರಂದು ಸಾಮಾಹಿಕ ವಿವಾಹ ನಡಯಲಿದೆ. ವಧುವಿಗೆ ಮಾಂಗಲ್ಯ, ಸೀರೆ, ಕುಪ್ಪಸ, ಕಾಲುಂಗುರ ಹಾಗೂ ವರನಿಗೆ ಪಂಚೆ, ವಲ್ಲಿ, ಶರ್ಟ್‌ಗಳನ್ನು ನೀಡಲಾಗುತ್ತದೆ. ವಧು - ವರರು ಹಾಗೂ ಜೊತೆಯಲ್ಲಿ ಬರುವ ಬಂಧು ವರ್ಗದವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಇದರ ಜೊತೆಗೆ ನಿಯಮಿತ ಸಂಖ್ಯೆಯ ಸಂಬಂಧಿಕರಿಗೆ ಸಾಮೂಹಿಕ ವಿವಾಹದ ಹಿಂದಿನ ದಿನ ವಸತಿ ವ್ಯವಸ್ಥೆ ಸಹ ಕಲ್ಪಿಸಲಾಗುತ್ತದೆ.

ಉಚಿತ ಸಾಮೂಹಿಕ ವಿವಾಹ (ಸಂಗ್ರಹ ಚಿತ್ರ) (ETV Bharat)

ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಹೇಗೆ?:ವಿವಾಹವಾಗಲು ಬಯಸುವವರು ಮೈಸೂರಿನ ಜೆಎಸ್​ಎಸ್ ಮಹಾ ವಿದ್ಯಾಪೀಠದ ಜಾತ್ರಾ ಮಹೋತ್ಸವ ಕಾರ್ಯಾಲಯದಲ್ಲಿ ಅರ್ಜಿ ಪಡೆದು ಪೂರ್ಣ ವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಜನವರಿ 15ರ ಒಳಗೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಾಲಯ ಮೈಸೂರು ಹಾಗೂ ಸುತ್ತೂರು ಕ್ಷೇತ್ರದ ಜೆಎಸ್ಎಸ್ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬಹುದು.

ಉಚಿತ ಸಾಮೂಹಿಕ ವಿವಾಹ (ಸಂಗ್ರಹ ಚಿತ್ರ) (ETV Bharat)

ಕಾರ್ಯಾಲಯ: 0821 - 2548212 - 122, ಸಂಚಾಲಕರು, 9448674702, 9741342222, 9449030588ಕ್ಕೆ ಕರೆ ಮಾಡುವ ಮೂಲಕ ಹೆಚ್ಚಿನ ವಿವರ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಭಾರತದ ಗ್ರ್ಯಾಂಡ್ ವೆಡ್ಡಿಂಗ್ ಸೀಸನ್: 48 ಲಕ್ಷ ವಿವಾಹ, 6 ಲಕ್ಷ ಕೋಟಿ ರೂಪಾಯಿ ಖರ್ಚು

ABOUT THE AUTHOR

...view details