ಚಾಮರಾಜನಗರ: ಕರ್ನಾಟಕ ರಾಜ್ಯದ ಕಟ್ಟ ಕಡೆಯ ರೈಲು ನಿಲ್ದಾಣವಾದ ಚಾಮರಾಜನಗರ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಅಮೃತ ಭಾರತ್ ಸ್ಟೇಷನ್ ಯೋಜನೆ ವ್ಯಾಪ್ತಿಗೆ ತರಲಾಗಿದ್ದು, ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಪುನರಾಭಿವೃದ್ಧಿ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು.
ಚಾಮರಾಜನಗರ ರೈಲ್ವೆ ನಿಲ್ದಾಣವು ಬ್ರಾಡ್ ಗೇಜ್ಗೆ ಪರಿವರ್ತನೆಗೊಂಡ ಬಳಿಕ ಎರಡು ಟ್ರಾಕ್ಗೆ ಅನುಕೂಲವಾದ 2 ಪ್ಲಾಟ್ ಫಾರಂ ಇದ್ದು 24 ಬೋಗಿಗಳ ರೈಲು ನಿಲ್ಲಬಹುದಾಗಿದೆ. ಇದೀಗ ಅಮೃತ ಭಾರತ್ ಸ್ಟೇಷನ್ ಯೋಜನೆಗೆ ಗಡಿಜಿಲ್ಲೆ ರೈಲು ನಿಲ್ದಾಣ ಆಯ್ಕೆಯಾಗಿದ್ದರಿಂದ 24.58 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆಯಲಿವೆ.
ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಹೊಸ ಬುಕಿಂಗ್ ಆಫೀಸ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವೇಟಿಂಗ್ ಕೊಠಡಿ, ಶಿಶುಪಾಲನ ಕೊಠಡಿ, ಪಾರ್ಸೆಲ್ ಆಫೀಸ್, ಒಂದು ಕೆಫೆಟೇರಿಯಾ ಹಾಗೂ ಮೂರು ಕ್ಯಾಟರಿಂಗ್ ಮಳಿಗೆ, ಪ್ಲಾಟ್ ಫಾರಂ ಶೌಚಾಲಯ, ಗ್ರಾನೈಟ್ ನೆಲಹಾಸು, ಪ್ಲಾಟ್ ಫಾರಂ ಛಾವಣಿ, ದ್ವಿಚಕ್ರ ಹಾಗೂ ಕಾರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ಮತ್ತು ಆಟೋ ಸ್ಟಾಂಡ್, ಮಳೆ ನೀರು ಕೊಯ್ಲು, ನಿಲ್ದಾಣ ಪ್ರವೇಶದ್ವಾರ, ಸಿಸಿಟಿವಿ ಅಳವಡಿಕೆ, ವೈಫೈ ಸೌಲಭ್ಯ, ಎಲ್ಇಡಿ ಪರದೆಯಲ್ಲಿ ರೈಲುಗಳ ಮಾಹಿತಿ, ಕಟ್ಟಡ ಜೀರ್ಣೋದ್ಧಾರವನ್ನು ಈ ಅಮೃತ ಸ್ಟೇಷನ್ ಯೋಜನೆ ಒಳಗೊಂಡಿದೆ.
ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್, ಮಾಜಿ ಶಾಸಕರಾದ ಎನ್. ಮಹೇಶ್, ಬಾಲರಾಜು ಇದ್ದರು. ಸಮಾರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಂತೆ ಬಿಜೆಪಿ ಮುಖಂಡರು ಮೋದಿ ಪರ ಜಯಘೋಷ ಕೂಗಿ ಸಂಭ್ರಮಿಸಿದರು.
ಇದನ್ನೂ ಓದಿ:ಹಳೆ ಬಟ್ಟೆ ಹಾಕಿದ್ದಾನೆ ಎಂದು ರೈತನನ್ನು ತಡೆದ ಮೆಟ್ರೋ ಸಿಬ್ಬಂದಿ: ಸಾರ್ವಜನಿಕರಿಂದ ಆಕ್ರೋಶ, ಸಿಬ್ಬಂದಿ ವಜಾ