ಕರ್ನಾಟಕ

karnataka

ETV Bharat / state

ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಕಚೇರಿಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿಯಿಟ್ಟ ಬೆಳೆಗಾರರು - 144 ಸೆಕ್ಷನ್​ ಜಾರಿ

ಬ್ಯಾಡಗಿ ಮೆಣಸಿನಕಾಯಿ ದರ ದಿಢೀರನೆ ಕುಸಿತವಾಗಿದ್ದಕ್ಕೆ ಆಕ್ರೋಶಗೊಂಡ ಮೆಣಸಿನಕಾಯಿ ಬೆಳೆಗಾರರು ಎಪಿಎಂಸಿ ಕಚೇರಿಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

red-chilli-growers-pelted-stones-to-apmc-market-for-byadgi-red-chilli-prices-fall
ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಕಚೇರಿಗೆ ಕಲ್ಲು ತೂರಿ, ವಾಹನಗಳಿಗೆ ಬೆಂಕಿಯಿಟ್ಟ ಬೆಳೆಗಾರರು

By ETV Bharat Karnataka Team

Published : Mar 11, 2024, 8:31 PM IST

Updated : Mar 11, 2024, 10:40 PM IST

ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಿಢೀರ್​ ಬೆಲೆ ಕುಸಿತವಾದ ಹಿನ್ನೆಲೆ ಆಕ್ರೋಶಗೊಂಡ ಮೆಣಸಿನಕಾಯಿ ಬೆಳೆಗಾರರು ಕೃಷಿ ಮಾರುಕಟ್ಟೆ ಆಡಳಿತ ಕಚೇರಿಗೆ ಕಲ್ಲು ತೂರಿದ್ದಾರೆ. ಇಷ್ಟಕ್ಕೂ ಆಕ್ರೋಶ ತಣಿಯದ ಹಿನ್ನೆಲೆಯಲ್ಲಿ ಎಪಿಎಂಸಿ ಮುಂಭಾಗದಲ್ಲಿದ್ದ ಕಾರಿಗೆ ಬೆಂಕಿ ಹಚ್ಚಿ, ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಬ್ಯಾಡಗಿಗೆ ಐಜಿಪಿ ತ್ಯಾಗರಾಜ್​ ಭೇಟಿ ನೀಡಿದ್ದು, 144 ಸೆಕ್ಷನ್​ ಜಾರಿ ಮಾಡಲಾಗಿದೆ.

ಕಳೆದ ವಾರ ಪ್ರತಿ ಕ್ವಿಂಟಾಲ್‌ ಮೆಣಸಿನಕಾಯಿ ಬೆಲೆ 20 ಸಾವಿರ ರೂ. ಇತ್ತು. ಈಗ ಕ್ವಿಂಟಾಲ್‌ ಮೆಣಸಿನಕಾಯಿ ಬೆಲೆ 12 ಸಾವಿರ ರೂ. ಕುಸಿತವಾಗಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆಯ ಪೊಲೀಸರು ಭೇಟಿ ನಿಡಿ ಆಕ್ರೋಶಭರಿತರನ್ನು ನಿಯಂತ್ರಿಸಲು ಯತ್ನಿಸಿದ್ದರು.

3 ಕಾರು, 1 ಲಾರಿ, 10 ಬೈಕ್‌ಗಳು ಸುಟ್ಟು ಭಸ್ಮ:ಎಪಿಎಂಸಿ ಆಡಳಿತ ಕಚೇರಿಯ ಮುಂಭಾಗದಲ್ಲಿದ್ದ ಮೂರು ವಾಹನ, ಅಗ್ನಿಶಾಮಕ ದಳ ವಾಹನ ಹಾಗೂ ಎಪಿಎಂಸಿ ಕಾರು, ಆಡಳಿತ ಸಿಬ್ಬಂದಿಯ 2 ಕಾರು ಹಾಗೂ 10 ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಎಲ್ಲ ವಾಹನಗಳು ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಬ್ಯಾಡಗಿ ತಹಶೀಲ್ದಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಂಶುಕುಮಾರ್​ ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಿಢೀರ್​ ಬೆಲೆ ಕುಸಿತವಾಗಿದ್ದರಿಂದ ಆಕ್ರೋಶಗೊಂಡ ಮೆಣಸಿನಕಾಯಿ ಬೆಳೆಗಾರರು ಕಲ್ಲು ತೂರಿ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮೂವರು ಸಿಬ್ಬಂದಿಗೆ ಮತ್ತು ಓರ್ವ ವ್ಯಕ್ತಿಗೆ ಗಾಯವಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೆಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಇವತ್ತಿನ ಮೆಣಸಿನಕಾಯಿ ಹರಾಜಿನಲ್ಲಿ ಕೆಲ ಮೆಣಸಿಕಾತಿ ತಳಿಗೆ ಕಳೆದ ವಾರಕ್ಕಿಂತ ಈಗ ಎರಡ್ಮೂರು ಸಾವಿರ ಬೆಳೆ ಕಡಿಮೆಯಾಗಿದೆ. ಮಾರುಕಟ್ಟೆಗೆ ಮೆಣಸಿಕಾಯಿ ಅಧಿಕವಾಗಿ ಬರುತ್ತಿದೆ, ಹರಾಜಿಗೆ 250ರಿಂದ 300 ಮಂದಿ ವರ್ತಕರು ಬರುತ್ತಾರೆ. ಅವರು ಬೆಲೆ ನಿಗದಿಪಡಿಸಿಕೊಂಡು ಹರಾಜು ಕೂಗುತ್ತಾರೆ. ಬೆಲೆ ಕಡಿಮೆಯಾಗಿದ್ದರಿಂದ ಇಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಹೇಳಿದರು.

ವರ್ತಕರು ನಾಳೆ ಬ್ಯಾಡಗಿ ಮೆಣಸಿನಕಾಯಿ ಕೊಳ್ಳಲು ರೀ ಟೆಂಡರ್ ಕರೆಯುವ ನೀಡುವ ಭರವಸೆ ನೀಡಿದ್ದಾರೆ ಮತ್ತು ಅಧಿಕಾರಿಗಳು ಬೆಳಗಾರರೊಂದಿಗೆ ಸಭೆ ನಡೆಸಿ, ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಮೆಣಸಿನಕಾಯಿಗೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಶಾಂತಗೊಂಡಿದ್ದಾರೆ.

ಇದನ್ನೂ ಓದಿ:ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

Last Updated : Mar 11, 2024, 10:40 PM IST

ABOUT THE AUTHOR

...view details