ಕರ್ನಾಟಕ

karnataka

ETV Bharat / state

ಐಐಟಿಎಂ ಪ್ರವಾಸೋದ್ಯಮ ಮೇಳ: ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್ - IITM Tourism Fair - IITM TOURISM FAIR

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡ ಮೂರು ದಿನಗಳ 25ನೇ ವರ್ಷದ ಐಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್​​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

25ನೇ ವರ್ಷದ ಐಐಟಿಎಂ ಪ್ರವಾಸೋದ್ಯಮ ಮೇಳ: ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್
25ನೇ ವರ್ಷದ ಐಐಟಿಎಂ ಪ್ರವಾಸೋದ್ಯಮ ಮೇಳ: ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್ (ETV Bharat)

By ETV Bharat Karnataka Team

Published : Jul 26, 2024, 8:50 PM IST

Updated : Jul 26, 2024, 10:58 PM IST

ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ರಾಮೋಜಿ ಫಿಲ್ಮ್​ ಸಿಟಿ ಸ್ಟಾಲ್ (ETV Bharat)

ಬೆಂಗಳೂರು: ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡ ಮೂರು ದಿನಗಳ 25ನೇ ವರ್ಷದ ಐಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ರಾಮೋಜಿ ಫಿಲ್ಮ್ ಸಿಟಿಯ ಸ್ಟಾಲ್ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಈ ಕುರಿತು ಸಾಫ್ಟ್​ವೇರ್​​ ಉದ್ಯೋಗಿಯಾದ ಅರವಿಂದ್ ಈಟಿವಿ ಭಾರತ್​​​ ಜೊತೆ ಮಾತನಾಡಿ, ರಾಮೋಜಿ ಫಿಲ್ಮ್ ಸಿಟಿಗೆ ಕುಟುಂಬದ ಜೊತೆಗೆ ಮತ್ತು ಸಹೋದ್ಯೋಗಿಗಳ ಜೊತೆ ಹೋಗಿ ಬಂದಿದ್ದೇನೆ. ಇದು ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣವಾಗಿದೆ. ಮುಖ್ಯವಾಗಿ ಬಾಹುಬಲಿ ಸೆಟ್ ಅತ್ಯುತ್ತಮವಾಗಿದೆ. ಮದುವೆ ಸಮಾರಂಭಕ್ಕೆ ಕೂಡ ಉತ್ತಮ ಸ್ಥಳವಾಗಿದೆ ಎಂದು ಹೇಳಿದರು.

ಒಂದು ದಿನದ ಸುತ್ತಾಟಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಸ್ಕೂಲ್ ಮಕ್ಕಳಿಗೆ ಬರ್ಡ್ ಪಾರ್ಕ್ ಇಷ್ಟವಾಗುತ್ತದೆ. ಯುವಕರಿಗೆ ಸಾಹಸ್ ಅಡ್ವೆಂಚರ್​ ಪಾರ್ಕ್ ಚನ್ನಾಗಿದೆ. ಸುಖಿಭಾವ ವೆಲ್ ನೆಸ್ ಪಾರ್ಕ್ ಚನ್ನಾಗಿದೆ. ಕಾರ್ಪೊರೇಟ್ ಇವೆಂಟ್ ಮಾಡಲು ಸಹ ಹೇಳಿಮಾಡಿಸಿದ ಸ್ಥಳವಾಗಿದೆ. ಅಲ್ಲಿ ಇಲ್ಲಿ ತಿರುಗುವ ಬದಲು ಎಲ್ಲರೂ ರಾಮೋಜಿ ಫಿಲ್ಮ್​ ಸಿಟಿಗೆ ಹೋಗಿ ಖುಷಿಪಡಬೇಕು ಎಂದು ಕರೆ ನೀಡಿದರು.

ಐಐಟಿಎಂ ಬೆಂಗಳೂರು ಎಕ್ಸಿಬಿಷನ್​ನಲ್ಲಿ ರಾಮೋಜಿ ಫಿಲ್ಮ್​ ಸಿಟಿಯ ಪರವಾಗಿ ಭಾಗವಹಿಸಿರುವುದು ಖುಷಿಯಾಗುತ್ತಿದೆ. ವಿಶ್ವದಲ್ಲಿಯೇ ಅತಿ ದೊಡ್ಡ ಫಿಲ್ಮ್​ ಶೂಟಿಂಗ್ ಕಾಂಪ್ಲೆಕ್ಸ್ ಇದಾಗಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್​ಗೆ ಕೂಡ ಫಿಲ್ಮ್​ ಸಿಟಿ ಭಾಜನವಾಗಿದೆ. ಮುಂಬರುವ ದಸರಾ ಹಬ್ಬ ಕೂಡ ವಿಶೇಷವಾಗಿ ಆಚರಿಸಲಾಗುತ್ತಿದೆ. ಕಾರ್ಪೊರೇಟ್ ಔಟಿಂಗ್​ಗೆ, ಸ್ಕೂಲ್ ಕಾಲೇಜು ಮಕ್ಕಳಿಗೆ ರಾಮೋಜಿ ಫಿಲ್ಮ್​ ಸಿಟಿ ಹೇಳಿಮಾಡಿಸಿದ ಸ್ಥಳವಾಗಿದೆ. ಫಿಲ್ಮ್​ ಸಿಟಿಯೊಳಗಡೆಯೇ ಕಡಿಮೆ ಬಜೆಟ್ ನಿಂದ ಐಷಾರಾಮಿ ಹೋಟೆಲ್ ವ್ಯವಸ್ಥೆ ಸಹ ಇದೆ ಎಂದು ಆರ್​ಎಫ್​ಸಿ ಚೀಫ್ ಮ್ಯಾನೇಜರ್ ಹರಿಕೃಷ್ಣ ಮಾಹಿತಿ ನೀಡಿದರು.

ಟೂರ್ ವೈಬ್ಸ್ ಸಂಸ್ಥೆಯ ಡೈರೆಕ್ಟರ್ ಲಿಂಗರಾಜ್ ಮನಗುಲಿ ಮಾತನಾಡಿ, ಐಟಿಎಂ ಪ್ರವಾಸೋದ್ಯಮ ಮೇಳದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸೋದ್ಯಮ ಇಲಾಖೆಗಳು, ಖಾಸಗಿ ಪ್ರವಾಸಿ ಸಂಸ್ಥೆಗಳು ಮತ್ತು ಆತಿಥ್ಯ ಕ್ಷೇತ್ರದ ಸಂಸ್ಥೆಗಳು ಪಾಲ್ಗೊಂಡಿವೆ. ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ, ವಿಶ್ರಾಂತಿ ಮತ್ತು ಇತರ ಸಂಬಂಧಿತ ಉದ್ಯಮಗಳನ್ನು ಒಂದೇ ಸೂರಿನಡಿ ಕಾಣಬಹುದಾಗಿದೆ. ಬೆಂಗಳೂರು ಮತ್ತು ಕರ್ನಾಟಕದ ಪ್ರವಾಸಿಗರು ರಾಮೋಜಿ ಫಿಲ್ಮ್​ ಸಿಟಿಯ ಕುರಿತು ಹೆಚ್ಚು ವಿಚಾರಣೆ ನೆಡೆಸುತ್ತಾರೆ. ಅಲ್ಲಿಗೆ ಹೋಗಿ ಬಂದವರು ಸಹ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ - Ramanagara rename

Last Updated : Jul 26, 2024, 10:58 PM IST

ABOUT THE AUTHOR

...view details