ಬೆಂಗಳೂರು:ರಾಮೇಶ್ವರಂ ಕೆಫೆ ಸ್ಫೋಟವನ್ನ ಖಂಡಿಸಿದ್ದ ಬಳಿಕ ತನಗೆ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್ಗಳಿಂದ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಾಟ್ಸ್ಆ್ಯಪ್ ಹಾಗೂ ಇ - ಮೇಲ್ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಪ್ರಶಾಂತ್ ಸಂಬರ್ಗಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಮಾರ್ಚ್ 8ರಂದು ಐಟಿಪಿಎಲ್ ಮುಖ್ಯರಸ್ತೆಯ ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಭಯೋತ್ಪಾದಕ ಕೃತ್ಯವನ್ನ ಖಂಡಿಸಿದ್ದ ನಾನು ನಂತರ ಕೆಫೆಯ ಪುನಾರಂಭಕ್ಕೂ ಹೋಗಿದ್ದೆನು. ಈ ನಡುವೆ ವಿದೇಶದ ಮೊಬೈಲ್ ಸಂಖ್ಯೆಗಳಿಂದ ಬೆದರಿಕೆ ಸಂದೇಶಗಳು ಬರಲಾರಂಭಿಸಿದ್ದವು. ಆರಂಭದಲ್ಲಿ ಅವುಗಳನ್ನು ನಿರ್ಲಕ್ಷಿಸಿದ್ದೆ. ಆದರೆ, ನಂತರದ ದಿನಗಳಲ್ಲಿ ನನ್ನ ಕುಟುಂಬಸ್ಥರಿಗೂ ಬೆದರಿಕೆ ಸಂದೇಶಗಳು ಬರಲಾರಂಭಿಸಿದ್ದು, ನನ್ನ ಮತ್ತು ಮಕ್ಕಳನ್ನು ಸಹ ಟಾರ್ಗೆಟ್ ಮಾಡಲಾಗುತ್ತಿದೆ.
ರಾಮೇಶ್ವರಂ ಕೆಫೆ ಸ್ಫೋಟ ಖಂಡಿಸಿದ ಬಳಿಕ ಜೀವ ಬೆದರಿಕೆ: ಪ್ರಶಾಂತ್ ಸಂಬರಗಿ ದೂರು - Rameswaram Cafe Blast
ರಾಮೇಶ್ವರಂ ಕೆಫೆ ಸ್ಫೋಟವನ್ನು ಖಂಡಿಸಿದ್ದ ಬಳಿಕ ತನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಅಪರಿಚಿತ ನಂಬರ್ಗಳಿಂದ ಜೀವ ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಶಾಂತ್ ಸಂಬರಗಿ ದೂರು ದಾಖಲಿಸಿದ್ದಾರೆ.
Published : Mar 29, 2024, 9:13 PM IST
ಆದ್ದರಿಂದ ಸಂದೇಶ ಬಂದಿರುವ ನಂಬರ್ಗಳ ಮೂಲವನ್ನು ಪರಿಶೀಲಿಸಿದಾಗ ಅಮೆರಿಕ, ಕ್ರೊಯೇಷಿಯಾ ಮುಂತಾದ ದೇಶಗಳ ವಾಟ್ಸ್ಆ್ಯಪ್ ಸಂಖ್ಯೆಗಳನ್ನು ಬಳಸಿರುವುದು ತಿಳಿದು ಬಂದಿದೆ. ಆದ್ದರಿಂದ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್ ಸಂಬರಗಿ ಅವರು ಮನವಿ ಮಾಡಿಕೊಂಡಿದ್ದಾರೆ. ಪ್ರಶಾಂತ್ ಸಂಬರಗಿ ನೀಡಿರುವ ದೂರಿನ ಅನ್ವಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ:ಕೆಫೆ ಸ್ಫೋಟ: ಇಬ್ಬರು ಪ್ರಮುಖ ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ; ಎನ್ಐಎ - 10 lakh cash reward