ಕರ್ನಾಟಕ

karnataka

ETV Bharat / state

ಬಿರು ಬಿಸಿಲಿಗೆ ಸುಡುತ್ತಿದ್ದ ಧರೆಗೆ ತಂಪೆರೆದ ವರುಣ: ಬೆಣ್ಣೆನಗರಿಯಲ್ಲಿ ವರ್ಷದ ಮೊದಲ ಮಳೆ - rain fell in davangere - RAIN FELL IN DAVANGERE

ಶನಿವಾರ ದಾವಣಗೆರೆ ತಾಲೂಕಿನ ಹೆಬ್ಬಾಳ, ಹಾಲವರ್ತಿ ಹಾಗೂ ಹೆಬ್ಬಾಳ ಬಡಾವಣೆ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಬಿರು ಬಿಸಿಲಿಗೆ ಸುಡುತ್ತಿದ್ದ ಧರೆಗೆ ತಂಪೆರೆದ ವರುಣ: ಬೆಣ್ಣೆನಗರಿಯಲ್ಲಿ ವರ್ಷದ ಮೊದಲ ಮಳೆ
ಬಿರು ಬಿಸಿಲಿಗೆ ಸುಡುತ್ತಿದ್ದ ಧರೆಗೆ ತಂಪೆರೆದ ವರುಣ: ಬೆಣ್ಣೆನಗರಿಯಲ್ಲಿ ವರ್ಷದ ಮೊದಲ ಮಳೆ

By ETV Bharat Karnataka Team

Published : Apr 13, 2024, 8:32 PM IST

ದಾವಣಗೆರೆ: ಜಿಲ್ಲೆಯ ಹಲವೆಡೆ ವರ್ಷದ ಮೊದಲ ಮಳೆಯಾಗಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ, ಹಾಲವರ್ತಿ, ಹೆಬ್ಬಾಳ ಬಡಾವಣೆ ಹಾಗೂ ಹುಣೆಸೆಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವರುಣ ಆರ್ಭಟಿಸಿದ್ದಾನೆ. ಎಡಬಿಡದೆ ಸುರಿದ ಮಳೆಯಿಂದ ಹೆಬ್ಬಾಳ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಬದಿ ಅಂಗಡಿಗೆ ನೀರು ನುಗ್ಗಿ, ರಸ್ತೆ ಜಲಾವೃತಗೊಂಡಿತ್ತು. ಭಾರೀ ಮಳೆಯಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದೆ ಚಿತ್ರದುರ್ಗ ಹಾಗೂ ಹುಬ್ಬಳ್ಳಿ ಕಡೆಗೆ ತೆರಳುವ ಕಂಟೈನರ್ ಲಾರಿಗಳು ಕೆಲಕಾಲ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿತ್ತು. ಇನ್ನು ವರುಣನ ಕೃಪೆಯಿಂದ ದಾವಣಗೆರೆ ರೈತ ಮೊಗದಲ್ಲಿ ಮಂದಹಾಸ ಮೂಡಿದೆ.

ಮಲೆನಾಡಿನಲ್ಲೂ ಮಳೆಯ ಸಿಂಚನ: ಮತ್ತೊಂದೆಡೆ, ಶಿವಮೊಗ್ಗ ನಗರದ ವಿವಿಧೆಡೆ ಇಂದು ಸಂಜೆ ಮಳೆಯ ಸಿಂಚನವಾಗಿದೆ. ಇದರಿಂದ ನಗರದಲ್ಲಿ ವಾತಾವರಣ ತಂಪಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಾಗರ ತಾಲೂಕಿನ ಆನಂದಪುರಂ, ಚೋರಡಿ, ಕುಂಸಿ ಹಾಗೂ ಆಯನೂರು ಭಾಗದಲ್ಲಿ ಹಾಗೂ ಭದ್ರಾವತಿ ಭಾಗದಲ್ಲಿ ಮಳೆಯಾಗಿತ್ತು. ಶಿವಮೊಗ್ಗ ನಗರದ ಸುತ್ತಮುತ್ತ ಮಾತ್ರ ಮಳೆಯಾಗಿರಲಿಲ್ಲ. ಇಂದು ಶಿವಮೊಗ್ಗ ನಗರದಲ್ಲೂ ವರ್ಷಧಾರೆಯಾಗಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಧಾರಾಕಾರ ಮಳೆ: ಶಿವಮೊಗ್ಗ, ಗದಗದಲ್ಲಿ ಸಿಡಿಲಿಗೆ ಕುರಿಗಳು ಬಲಿ - Heavy Rain

ABOUT THE AUTHOR

...view details