ಕರ್ನಾಟಕ

karnataka

ETV Bharat / state

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ಜಾರಕಿಹೊಳಿ ಆಯ್ಕೆ - RAHUL JARKIHOLI

ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್‌ ಜಾರಕಿಹೊಳಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ರಾಹುಲ್‌ ಜಾರಕಿಹೊಳಿ
ರಾಹುಲ್‌ ಜಾರಕಿಹೊಳಿ (ETV Bharat)

By ETV Bharat Karnataka Team

Published : Feb 9, 2025, 1:22 PM IST

ಬೆಳಗಾವಿ:ಲೋಕಸಭೆ ಚುನಾವಣೆ ಜಯಿಸುವ ಮೂಲಕ ಮಗಳು ಪ್ರಿಯಾಂಕಾ ಜಾರಕಿಹೊಳಿಯನ್ನು ಅಧಿಕೃತವಾಗಿ ರಾಜಕೀಯ ಪ್ರವೇಶಿಸುವಂತೆ ಮಾಡಿದ್ದ ಸಚಿವ ಸತೀಶ್ ಜಾರಕಿಹೊಳಿ, ಇದೀಗ ಮಗನನ್ನೂ ರಾಜಕೀಯ ಅಖಾಡದಲ್ಲಿ ಗೆಲ್ಲಿಸಿದ್ದಾರೆ. ರಾಹುಲ್‌ ಜಾರಕಿಹೊಳಿ ರಾಜ್ಯ ಯುವ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾರೆ.

ರಾಹುಲ್‌ ಜಾರಕಿಹೊಳಿ ಆಯ್ಕೆಯಾಗುತ್ತಿದ್ದಂತೆ ಬೆಳಗಾವಿ ಮತ್ತು ಗೋಕಾಕಿನಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸತೀಶ್ ಜಾರಕಿಹೊಳಿ‌, ರಾಹುಲ್ ಜಾರಕಿಹೊಳಿ‌ ಪರ ಘೋಷಣೆ ಮೊಳಗಿಸಿದರು.

ಸಹೋದರಿ ಪ್ರಿಯಾಂಕಾ ಹಾಗೂ ತಂದೆ ಸತೀಶ್​​ ಜಾರಕಿಹೊಳಿ ಜೊತೆ ರಾಹುಲ್ ಜಾರಕಿಹೊಳಿ (ETV Bharat)

ABOUT THE AUTHOR

...view details