ಕರ್ನಾಟಕ

karnataka

ETV Bharat / state

ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಆರ್​.ಅಶೋಕ್​ - R Ashok - R ASHOK

ಆರ್​.ಅಶೋಕ್​ ಇಂದು ನೇಹಾ ಹಿರೇಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನೇಹಾ ಹಿರೇಮಠ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಆರ್​.ಅಶೋಕ್​
ನೇಹಾ ಹಿರೇಮಠ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಆರ್​.ಅಶೋಕ್​

By ETV Bharat Karnataka Team

Published : Apr 30, 2024, 2:30 PM IST

Updated : Apr 30, 2024, 2:58 PM IST

ನೇಹಾ ಹಿರೇಮಠ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಆರ್​.ಅಶೋಕ್​

ಹುಬ್ಬಳ್ಳಿ: ವಿಪಕ್ಷ ನಾಯಕ ಆರ್​. ಅಶೋಕ್​ ಇಂದು ನೇಹಾ ಹಿರೇಮಠ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ. ವಿಪಕ್ಷ ನಾಯಕನಾಗಿ ಈ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದೇನೆ. ಇಂತಹ ಘಟನೆ ಮತ್ತೆ ರಾಜ್ಯದಲ್ಲಿ ಮರುಕಳಿಸಬಾರದು ಎಂದಾದಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೆ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಆದಾಗ ಶಾಲಾ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. ಆದರೆ ನೇಹಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ.

ಕೊಲೆಯಾದಾಗ ಅಪರಾಧಿಯನ್ನು ಬಂಧಿಸಿದ 24 ಗಂಟೆಯಲ್ಲಿ ಕೋರ್ಟ್​ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಬೇಕಿತ್ತು. ಕೊಲೆಯಾದ ಬಳಿಕ 24 ಗಂಟೆ ಮಾಹಿತಿ ಕಲೆಹಾಕಲು ಬಹಳ ಮುಖ್ಯ. ‌ಇದನ್ನು ಪೊಲೀಸರು ಮಾಡಿದ್ದಾರಾ? ನೀವು ಆರೋಪಿಯನ್ನು ಜೈಲಿಗೆ ಕಳಸಿದ್ರೀ, ಜೈಲಿಗೆ ಹೋದ ಮೇಲೆ ಯಾರು ಹೋಗಿ ಭೇಟಿ ಮಾಡಿದ್ರು. ಯಾರಾರು ಏನೇನು ಹೇಳಿದ್ರು, ಒಂದು ರೀತಿಯಲ್ಲಿ ಪೊಲೀಸರೇ ಅವನನ್ನು ರಕ್ಷಣೆ ಮಾಡಿದ್ದಾರೆ. ಇದು ನನ್ನ ನೇರ ಆರೋಪ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇಹಾ ಕೊಲೆ ಚರ್ಚೆಯಾಗಿದೆ. ಕೊಲೆ ಒಬ್ಬನೇ ಮಾಡಿಲ್ಲ, ಅವನ ಜೊತೆಗಿದ್ದವರ ತನಿಖೆ ಆಗಬೇಕಿತ್ತು ಎಂದರು.

ಇದನ್ನೂ ಓದಿ:ಮೇ 1ಕ್ಕೆ ನೇಹಾ ಹಿರೇಮಠ ನಿವಾಸಕ್ಕೆ ಅಮಿತ್ ಶಾ ಭೇಟಿ: ಮುರುಗೇಶ್​ ನಿರಾಣಿ - Murugesh Nirani

Last Updated : Apr 30, 2024, 2:58 PM IST

ABOUT THE AUTHOR

...view details