ಹುಬ್ಬಳ್ಳಿ(ಧಾರವಾಡ):1975ರ ಮಾರ್ಚ್ 17ರಂದು ಚೆನ್ನೈನಲ್ಲಿ ಜನಿಸಿದ ಪುನೀತ್ ರಾಜ್ಕುಮಾರ್ 2021ರ ಅಕ್ಟೋಬರ್ 29ರಂದು ಹಠಾತ್ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅಭಿಮಾನಿಗಳ ನೆಚ್ಚಿನ ನಟ ಇಹಲೋಕ ತ್ಯಜಿಸಿ ಇಂದಿಗೆ ಮೂರು ವರ್ಷ. ಆದ್ರೆ ಅವರ ಸವಿನೆನಪು ಇಂದಿಗೂ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ವಿವಿಧೆಡೆ ವಿವಿಧ ರೀತಿಯಲ್ಲಿ ಅಭಿಮಾನಿಗಳಿಂದ ಅಪ್ಪು ಸ್ಮರಣೆ ನಡೆಯುತ್ತಿದೆ. ಅದರಂತೆ, ಹುಬ್ಬಳ್ಳಿ ನಗರದಲ್ಲಿ ಅಭಿಮಾನಿಗಳು 10 ಕ್ವಿಂಟಲ್ ಚಿಕನ್ ಬಿರಿಯಾನಿ ವಿತರಿಸಿದರು.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್‍ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ, ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರಿಗೆ ಇಷ್ಟವಾದ ಬಿರಿಯಾನಿ ಹಂಚಿದರು. ಚನ್ನಮ್ಮ ಸರ್ಕಲ್ ಬಳಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಘು ವದ್ದಿ ನೇತೃತ್ವದಲ್ಲಿ ಅಪ್ಪು ಭಾವಚಿತ್ರದೆದುರು ಮಟನ್ ಕೀಮಾ, ಮಟನ್ ಮಸಾಲಾ, ಚಿಕನ್ ಬಿರಿಯಾನಿ ಇಟ್ಟರು.
ಇದನ್ನೂ ಓದಿ:ಪುನೀತ್ ಸಮಾಧಿಗೆ ರಾಜ್ ಕುಟುಂಬದಿಂದ ಪೂಜೆ ಸಲ್ಲಿಕೆ: 'ಪರಮಾತ್ಮ'ನಿಗೆ ನಮನ