ಕರ್ನಾಟಕ

karnataka

ETV Bharat / state

ಆಸ್ತಿ ವಿಚಾರ: ಜೈಲಿನಿಂದ ಹೊರ ಬಂದ ಮೂರೇ ತಿಂಗಳಿಗೆ ಕೊಲೆಯಾದ ವ್ಯಕ್ತಿ - ಆಸ್ತಿ ವಿಚಾರಕ್ಕೆ ಕೊಲೆ

ಶಿವಮೊಗ್ಗದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತಮ್ಮ ಸಂಬಂಧಿಕರಿಂದಲೇ ಕೊಲೆಯಾಗಿದ್ದು, ಆತ ಜೈಲಿನಿಂದ ಮೂರು ತಿಂಗಳುಗಳ ಹಿಂದೆ ಬಿಡುಗಡೆ ಆಗಿದ್ದನು ಎಂಬ ಮಾಹಿತಿ ಪೊಲೀಸ್​ ಇಲಾಖೆ ತಿಳಿಸಿದೆ.

Property issue  man murder  released from prison  ಕೊಲೆಯಾದ ವ್ಯಕ್ತಿ  ಆಸ್ತಿ ವಿಚಾರ
ಜೈಲಿನಿಂದ ಹೊರ ಬಂದ ಮೂರೇ ತಿಂಗಳಿಗೆ ಕೊಲೆಯಾದ ವ್ಯಕ್ತಿ

By ETV Bharat Karnataka Team

Published : Mar 1, 2024, 12:59 PM IST

ಎಸ್ಪಿ‌ ಮಿಥುನ್ ಕುಮಾರ್ ಹೇಳಿಕೆ

ಶಿವಮೊಗ್ಗ:ಆಸ್ತಿ ವಿಚಾರಕ್ಕೆ ವ್ಯಕ್ತಿಯೊಬ್ಬ ಕೊಲೆ‌ಯಾಗಿರುವ ದಾರುಣ ಘಟನೆ ಸಾಗರ ತಾಲೂಕು ಆನಂದಪುರಂ ಬಳಿಯ ನೇದ್ರವಳ್ಳಿ ಕ್ರಾಸ್ ಬಳಿ ನಿನ್ನೆ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯ ಹೆಸರು ರಫೀಕ್​ ಎಂದು ಗುರುತಿಸಲಾಗಿದ್ದು, ಈತ ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದವರು ಎಂದು ಹೇಳಲಾಗ್ತಿದೆ.

ಆಸ್ತಿ ವಿಚಾರದಲ್ಲಿ ರಫೀಕ್ ತನ್ನ ಹಿರಿಯ ಸಹೋದರನನ್ನು ಕೊಂದು ಜೈಲು ಸೇರಿದ್ದರು. ಜೈಲಿನಿಂದ ಹೊರ ಬಂದು ಮೂರು ತಿಂಗಳಾಗಿತ್ತು. ಆದರೆ ನಿನ್ನೆ ರಾತ್ರಿ ಆನಂದಪುರಂನಿಂದ ಸಾಗರದ ಮಾರ್ಗದ ನೇದ್ರವಳ್ಳಿ ಕ್ರಾಸ್ ಬಳಿಯ ರಸ್ತೆ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತ್ತೆಯಾದಾಗ ರಫೀಕ್ ಮುಖ ರಕ್ತ ಸಿಕ್ತವಾಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಫೀಕ್​ನನ್ನು ಆತನ ಸಂಬಂಧಿಕರು ಕಾರಿನಲ್ಲಿ ಆನಂದಪುರಂ ಬಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಸ್ತಿ ವಿಚಾರಕ್ಕೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ರಫೀಕ್​ನನ್ನು ಕಾರಿನಲ್ಲೇ ಕೊಲೆ ಮಾಡಿದ್ದಾರೆ. ಬಳಿಕ ಕಾರಿನಿಂದ ಕೆಳಕ್ಕೆ ಬಿಳಿಸಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸ್​ ಇಲಾಖೆ ತಿಳಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ‌ ಮಿಥುನ್ ಕುಮಾರ್, ಕೊಲೆಯಾಗಿರುವ ವ್ಯಕ್ತಿ ರಫೀಕ್. ಈತ ಜೈಲಿನಿಂದ ಹೊರ ಬಂದು ಮೂರು ತಿಂಗಳಾಗಿತ್ತು. ಈತ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ ಜೈಲು ಸೇರಿದ್ದನು. ಈ ಕೊಲೆ ಕುರಿತು ಇಬ್ಬರನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಅವರ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.

ಓದಿ:ಕಲಬುರಗಿಯಲ್ಲಿ ಮತ್ತೋರ್ವ ಬಿಜೆಪಿ ಮುಖಂಡನ ಬರ್ಬರ ಕೊಲೆ

ABOUT THE AUTHOR

...view details